ಸಹೋದರಿ ಮೀರಾ ದಾಂಪತ್ಯಕ್ಕೆ ಶುಭಕೋರಿದ ಪ್ರಿಯಾಂಕಾ ಚೋಪ್ರಾ

Public TV
2 Min Read
meera chopra 1 3

ಬಾಲಿವುಡ್ ಬ್ಯೂಟಿ ಮೀರಾ ಚೋಪ್ರಾ (Meera Chopra) ಅವರು ಉದ್ಯಮಿ ರಕ್ಷಿತ್ ಜೊತೆ ಮಾರ್ಚ್ 12ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇದೀಗ ಸಹೋದರಿ ಮೀರಾಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಿಯಾಂಕಾ ಚೋಪ್ರಾ (Priyanka Chopra) ವೈವಾಹಿಕ ಜೀವನದ ಆರಂಭಕ್ಕೆ ವಿಶೇಷವಾಗಿ ಶುಭಕೋರಿದ್ದಾರೆ. ಇದನ್ನೂ ಓದಿ:ಅಣ್ಣಾಮಲೈ ನಟನೆಯ ‘ಅರಬ್ಬೀ’ ಚಿತ್ರದ ಟ್ರೈಲರ್ ರಿಲೀಸ್

meera chopra 4ಜೈಪುರ್‌ನಲ್ಲಿ ಅದ್ಧೂರಿಯಾಗಿ ರಕ್ಷಿತ್ ಜೊತೆ ಮೀರಾ ಚೋಪ್ರಾ ಮದುವೆ ನಡೆಯಿತು. ಈ ಮದುವೆಗೆ ನಟಿ ಪ್ರಿಯಾಂಕಾ ಚೋಪ್ರಾ ಗೈರಾಗಿದ್ದರು. ಆದರೆ ಮನೆ ಮಗಳು ಮೀರಾ ಮದುವೆಗೆ ಪ್ರಿಯಾಂಕಾ ಚೋಪ್ರಾ ತಾಯಿ ಮಧು ಚೋಪ್ರಾ ಹಾಜರಿ ಹಾಕಿ ಶುಭಹಾರೈಸಿದ್ದರು. ಕೆಲಸ ಕಮೀಟ್‌ಮೆಂಟ್‌ನಿಂದ ಪ್ರಿಯಾಂಕಾ ಗೈರಾಗಿದ್ದರು.

priyanka chopraಇದೀಗ ಸಹೋದರಿ ಮೀರಾಗೆ ಹೊಸ ಜರ್ನಿಗೆ ಪ್ರೀತಿಯಿಂದ ಶುಭಕೋರಿದ್ದಾರೆ. ಅಭಿನಂದನೆಗಳು ಮೀರಾ ಚೋಪ್ರಾ ಮತ್ತು ರಕ್ಷಿತ್ ಎಂದು ಮನಸಾರೆ ನಟಿ ಹಾರೈಸಿದ್ದಾರೆ. ಪ್ರಿಯಾಂಕಾ ಹಾರೈಕೆಗೆ ಮೀರಾ ಪ್ರೀತಿಯಿಂದ ರಿಯಾಕ್ಟ್ ಮಾಡಿದ್ದಾರೆ. ಇದನ್ನೂ ಓದಿ:ನಾಳೆ ಅಪ್ಪು ನಟನೆಯ ‘ಜಾಕಿ’ ಸಿನಿಮಾ ರಿಲೀಸ್

priyanka chopraನಿಮ್ಮ ಹಾರೈಕೆಗೆ ಧನ್ಯವಾದಗಳು. ಹೊಸ ಜೀವನ ಶುರು ಮಾಡಲು ಕಾತರದಿಂದ ಕಾಯುತ್ತೇನೆ. ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ. ತುಂಬು ಹೃದಯದಿಂದ ಪ್ರೀತಿ ಹಿಂದಿರುಗಿಸುತ್ತಿದ್ದೇನೆ ಎಂದು ಮೀರಾ ರಿಯಾಕ್ಟ್ ಮಾಡಿದ್ದಾರೆ. ಸದ್ಯ ಇಬ್ಬರ ಪೋಸ್ಟ್ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದ್ದೇನೆ.

meera chopra 1ಎಂದೆಂದಿಗೂ ಸಂತೋಷ, ಜಗಳ, ನಗು, ಕಣ್ಣೀರು, ಮತ್ತು ನೆನಪುಗಳು ಈ ಜೀವಮಾನದಲ್ಲಿ ಎಂದು ನಟಿ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ನಿಮ್ಮೊಂದಿಗೆ ಪ್ರತಿ ಜನ್ಮ ಬದುಕುತ್ತೇನೆ ಎಂದು ಮೀರಾ ಮದುವೆಯ ಬಗ್ಗೆ ಸಂತಸ ವ್ಯಕ್ತಪಡಿಸಿದ್ದರು.

meera chopra

ಕನ್ನಡದ ‘ಅರ್ಜುನ್’ (Arjun) ಸಿನಿಮಾದಲ್ಲಿ ನಟಿಸಿದ್ದ, ಬಾಲಿವುಡ್ ನಟಿ ಮೀರಾ ಚೋಪ್ರಾ ಅವರು ಮಾರ್ಚ್ 11ರಂದು ಮೆಹೆಂದಿ, ಸಂಗೀತ ಕಾರ್ಯಕ್ರಮದ ಜೊತೆ ಸೆಲೆಬ್ರೆಟಿ ಸ್ನೇಹಿತರಿಗೆ ಕಾಕ್‌ಟೈಲ್ ಪಾರ್ಟಿ ಆಯೋಜಿಸಿದ್ದರು. ಇಂದು (ಮಾ.12) ಅದ್ಧೂರಿಯಾಗಿ ಜೈಪುರನಲ್ಲಿ ಮದುವೆಯಾಗಿದ್ದಾರೆ.

meera chopra 1 1ಜೈಪುರ ಮತ್ತು ದೆಹಲಿ ಹೆದ್ದಾರಿ ಬಳಿಯಿರುವ ಐಷಾರಾಮಿ ರೆಸಾರ್ಟ್‌ವೊಂದರಲ್ಲಿ ಮೀರಾ ಮದುವೆ ನಡೆದಿತ್ತು.ಮೀರಾ ಮದುವೆ ಸಂಭ್ರಮದಲ್ಲಿ ಬಾಲಿವುಡ್ ನಟ-ನಟಿಯರು ಭಾಗಿಯಾಗಿದ್ದರು. ಮೀರಾ ಚೋಪ್ರಾ ಮೂಲತಃ ಮುಂಬೈ ಹುಡುಗಿ ಆಗಿದ್ರೂ ಅವರಿಗೆ ಕನ್ನಡಕ್ಕೆ ನಂಟಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್‌ಗೆ (Darshan) ನಾಯಕಿ ನಟಿಸಿ ಸೈ ಎನಿಸಿಕೊಂಡಿದ್ದರು. ಕನ್ನಡಿಗರಿಗೆ ಅರ್ಜುನ್ (Arjun) ಚಿತ್ರದ ನಟಿ ಅಂದರೆ ಅವರು ಎಂಬುದು ನೆನಪಾಗುತ್ತಾರೆ.

meera chopra 2ಸಹೋದರಿ ಸಂಬಂಧಿ ಪ್ರಿಯಾಂಕಾರಂತೆ ಅವರಿಗೆ ಮೀರಾ ಬಾಲಿವುಡ್‌ನಲ್ಲಿ ಗಟ್ಟಿ ನೆಲೆ ಸಿಗಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಇದ್ದರೂ ಕೂಡ ಸಿನಿಮಾರಂಗ ಅವರ ಕೈಹಿಡಿಯಲಿಲ್ಲ.

‘1920 ಲಂಡನ್’, ‘ಸೆಕ್ಷನ್ 375’, ‘ಕಾಮಾತಿಪುರ’ ಎಂಬ ಹಿಂದಿ ಸಿನಿಮಾಗಳಲ್ಲಿ ಮೀರಾ ಚೋಪ್ರಾ ನಟಿಸಿದ್ದಾರೆ. ‘ಸಫೇದ್’ ಸಿನಿಮಾ ಕೂಡ ಬಿಡುಗಡೆಗೆ ಸಿದ್ಧವಾಗಿದೆ.

Share This Article