ಅಬ್ಬಬ್ಬಾ.. ಸೆಲೆಬ್ರಿಟಿಗಳಿಗೆ ಸೀರೆ ಉಡಿಸೋಕೆ 2 ಲಕ್ಷ ಚಾರ್ಜ್ ಮಾಡ್ತಾರೆ ಡಾಲಿ ಜೈನ್

Public TV
2 Min Read
aliaa bhatt

ಫ್ಯಾಷನ್ ಲೋಕದಲ್ಲಿ ಸದ್ಯ ಹಲ್ ಚಲ್ ಎಬ್ಬಿಸುತ್ತಿರುವ ವಿಚಾರ ಅಂದರೆ ಸ್ಯಾರಿ ಮ್ಯಾಟರ್. ಅದರಲ್ಲೂ ಸೀರೆ ಉಡಿಸೋಕು ನೋಟು ಎಣಿಸುತ್ತಾರೆ. ಅದಕ್ಕೆ ಲಕ್ಷ ಲಕ್ಷ ಸಂಭಾವನೆ ಪಡೆಯುತ್ತಾರೆ ಅಂತ ಕೇಳಿಯೇ ಫ್ಯಾಷನ್ ಪ್ರಿಯರು ದಂಗಾಗಿದ್ದಾರೆ.

deepika padukone 1

ಅಂಬಾನಿ ಕುಟುಂಬದ ಹೆಣ್ಣು ಮಕ್ಕಳಿಗೆಲ್ಲಾ ಸೀರೆ ಉಡಿಸಿದ್ದಾರೆ. ಅಷ್ಟೇಕೆ! ದೀಪಿಕಾ ಪಡುಕೋಣೆ (Deepika Padukone), ಸೋನಂ ಕಪೂರ್, ಆಲಿಯಾ ಭಟ್(Alia Bhatt), ಕಿಯಾರಾ ಅಡ್ವಾನಿ (Kiara Advani) ಸೇರಿದಂತೆ ಸಾಕಷ್ಟು ನಟಿಯರು ಇವರ ಬಳಿ ಸೀರೆ ಉಡಿಸಿಕೊಂಡಿದ್ದಾರೆ. ಇದನ್ನೂ ಓದಿ:ನಟಿ ಮೃಣಾಲ್ ಠಾಕೂರ್ ಗೆ ಮತ್ತೊಂದು ಬಿಗ್ ಆಫರ್

ಮೂರು ದಿನಗಳ ಕಾಲ ನಡೆದ ಅನಂತ್ ಅಂಬಾನಿ ಪ್ರಿ-ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಕೇವಲ ಅಂಬಾನಿ ಫ್ಯಾಮಿಲಿಯವರಿಗೆ ಮಾತ್ರವಲ್ಲ, ಆಗಮಿಸಿದ ನಟಿಯರಿಗೂ ಡಾಲಿ ಜೈನ್ ಅತ್ಯಾಕರ್ಷಕವಾಗಿ ಸೀರೆ ಉಡಿಸಿದರೆನ್ನಲಾಗಿದೆ. ಸ್ಟಾರ್ ಸೀರೆ ಡ್ರೇಪರ್ ಎಂದು ಕರೆಸಿಕೊಳ್ಳುವ ಇವರ ಸಂಭಾವನೆ ಕೂಡ ಕಡಿಮೆಯೇನಲ್ಲ! ಮೂಲಗಳ ಪ್ರಕಾರ, ಇವರು 35,000 ರೂ.ಗಳಿಂದ 2 ಲಕ್ಷ ರೂ.ಗಳವರೆಗೂ ಶುಲ್ಕ ವಿಧಿಸುತ್ತಾರಂತೆ.

ಸೋಷಿಯಲ್ ಮೀಡಿಯಾದಲ್ಲಿ, ಈಗಾಗಲೇ ಸೀರೆ ಡ್ರೇಪಿಂಗ್ ಕುರಿತಂತೆ ಸಾಕಷ್ಟು ಫೇಮಸ್ ಆಗಿರುವ ಇವರು, ಆಗಾಗ್ಗೆ ಸೀರೆ ಡ್ರೇಪಿಂಗ್ ಕುರಿತಂತೆ ನಾನಾ ವಿಡಿಯೋ ಅಪ್‌ಲೋಡ್ ಮಾಡುತ್ತಿರುತ್ತಾರೆ. ಲೈವ್ ಟ್ರೇನಿಂಗ್ ಕೂಡ ನೀಡುವ ಇವರು ಸದ್ಯಕ್ಕೆ ಸಖತ್ ಫೇಮಸ್! ಮಹಿಳೆಯರು, ಯುವತಿಯರು ಹೇಗೆಲ್ಲಾ ಸೀರೆ ಉಡಬಹುದು? ಎಂಬುದನ್ನು ಮಾತ್ರವಲ್ಲ, ಸೀರೆಯನ್ನು ಡ್ರೇಪಿಂಗ್ ಮೂಲಕ ಲೆಹೆಂಗಾದಂತೆ ಧರಿಸುವುದು ಹೇಗೆ? ಸ್ಕರ್ಟ್‌ಯಂತೆ ಮಾರ್ಪಡಿಸುವುದು ಹೇಗೆ? ಗಾಗ್ರದಂತೆ ಮಾರ್ಪಡಿಸುವುದು ಹೇಗೆ? ಸೇರಿದಂತೆ ಹೀಗೆ ನಾನಾ ಬಗೆಯಲ್ಲಿ ಸೀರೆ ಡ್ರೇಪಿಂಗ್ ಮಾಡುವುದನ್ನು ಹೇಳಿಕೊಡುತ್ತಾರೆ. ಅಷ್ಟೇಕೆ! ಸಾಮಾನ್ಯ ಮಹಿಳೆಗೂ ಟಿಪ್ಸ್ ನೀಡುತ್ತಾರೆ.

radhika merchant

ಮೂಲತಃ ಬೆಂಗಳೂರಿನವರಾದ ಡಾಲಿ ಜೈನ್ ಸದ್ಯ ಕೋಲ್ಕತ್ತಾ ವಾಸಿ. ಅತಿ ಸುಲಭವಾಗಿ ಯಾರ ಕೈಗಳಿಗೂ ಸಿಗದ ಇವರು ಸದ್ಯಕ್ಕೆ ಸ್ಟಾರ್ ಡ್ರೇಪರ್ ಎನ್ನಬಹುದು. ಕೇವಲ ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಟ್ಯಾಲೆಂಟ್, ಅದರಲ್ಲೂ ಕೇವಲ ಸೀರೆಯನ್ನು ಆಕರ್ಷಕವಾಗಿ ಉಡಿಸಿ ಹೇಗೆಲ್ಲಾ ದುಡಿಯಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ.

anant ambani 6

ಡಾಲಿ ಜೈನ್ (Dolly Jain) ಅವರು 357 ರೀತಿಯ ಸ್ಟೈಲಿನಲ್ಲಿ ವಿಭಿನ್ನವಾಗಿ ಸೀರೆ ಉಡಿಸುತ್ತಾರೆ. ವಿಶೇಷ ಅಂದರೆ 18.5 ಸೆಕೆಂಡ್ಸ್‌ನಲ್ಲಿ ಸೀರೆ ಉಡಿಸುವ ಮೂಲಕ ಡಾಲಿ ಜೈನ್ ದಾಖಲೆ ಮಾಡಿದ್ದಾರೆ. ಇವರೇ ಸೀರೆ ಉಡಿಸಬೇಕು ಎಂದು ಡಿಮ್ಯಾಂಡ್ ಇದ್ದರೆ, ಕೆಲ ತಿಂಗಳುಗಳ ಮುಂಚೆಯೇ ಅಡ್ವಾನ್ಸ್ ಬುಕ್ಕಿಂಗ್ ಮಾಡಿಸಿಕೊಳ್ಳಬೇಕಾಗುತ್ತದೆ.

ಸಾಮಾನ್ಯ ಬ್ಯೂಟಿ ಪಾರ್ಲರ್ ಹಾಗೂ ಸೀರೆ ಉಡಿಸುವವರಾದಲ್ಲಿ ಒಂದು ಸೀರೆಗೆ ಕನಿಷ್ಠ ಎಂದರೂ 300 ರೂ.ಗಳಿಂದ 2 ಸಾವಿರ ರೂ.ಗಳವರೆಗೂ ಚಾರ್ಜ್ ಮಾಡುತ್ತಾರೆ. ಅದು ಯಾವ ಶೈಲಿಯ ಸೀರೆ ಎಂಬುದರ ಮೇಲೆ ಡಿಪೆಂಡ್ ಆಗುತ್ತದೆ. ಆದರೆ ಡಾಲಿ ಜೈನ್ ಕೇವಲ ಒಂದು ಸೀರೆ ಡ್ರೇಪಿಂಗ್ ಹಾಗೂ ಮೇಕೋವರ್‌ಗೆ ಲಕ್ಷಗಟ್ಟಲೆ ಚಾರ್ಜ್ ಮಾಡುತ್ತಾರೆ. ಇದು ಹೆಣ್ಣುಮಕ್ಕಳು ಸ್ಫೂರ್ತಿಯಾಗುವಂತಹ ವಿಚಾರ. ಯಾವುದೇ ಖರ್ಚು-ವೆಚ್ಚವಿಲ್ಲದೆ ದುಡಿಯಬಹುದಾದ ಮಾರ್ಗ. ಇಂದು ಸೋಷಿಯಲ್ ಮೀಡಿಯಾದಲ್ಲಿ ಸರಿಯಾದ ವೇದಿಕೆ ಸೃಷ್ಟಿಸಿಕೊಂಡಲ್ಲಿ ಹೀಗೆಲ್ಲಾ ಖ್ಯಾತಿ ಗಳಿಸುತ್ತಾ ಹಣವನ್ನು ಗಳಿಸಬಹುದು.

Share This Article