ಮಾರ್ಚ್ 15 ರೊಳಗೆ Paytm FASTag ಬದಲಿಸಿ – ಬಳಕೆದಾರರಿಗೆ NHAI ಸಲಹೆ

Public TV
1 Min Read
FASTAG

ನವದೆಹಲಿ: Paytm FASTag ಬಳಕೆದಾರರು ಮಾರ್ಚ್ 15 ರೊಳಗೆ ಇತರೆ ಬ್ಯಾಂಕ್‌ಗಳ FASTagಗೆ ಬದಲಾಯಿಸಬೇಕು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಸಲಹೆಯನ್ನು ನೀಡಿದೆ. ತಡೆರಹಿತ ಪ್ರಯಾಣಕ್ಕೆ ಮತ್ತು ಟೋಲ್ ಪ್ಲಾಜಾಗಳಲ್ಲಿ ಅನಾನುಕೂಲತೆಯನ್ನು ತಪ್ಪಿಸಲು ಫಾಸ್ಟ್ ಟ್ಯಾಗ್ ಬದಲಿಸಲು ಮನವಿ ಮಾಡಿದೆ.

Paytm ಬ್ಯಾಕಿಂಗ್ ವ್ಯವಸ್ಥೆಗೆ ಆರ್‌ಬಿಐ ತಡೆ ನೀಡಿರುವ ಹಿನ್ನಲೆ Paytm FASTag ಬಳಕೆದಾರರಿಗೆ ಮಾರ್ಚ್ 15 ನಂತರ ಬ್ಯಾಲೆನ್ಸ್ ರೀಚಾರ್ಜ್ ಮಾಡಲು ಅಥವಾ ಟಾಪ್-ಅಪ್ ಮಾಡಲು ಸಾಧ್ಯವಾಗುವುದಿಲ್ಲ. ಆದಾಗ್ಯೂ ಅಸ್ತಿತ್ವದಲ್ಲಿರುವ ಬ್ಯಾಲೆನ್ಸ್ ಬಳಸಬಹುದು ಎಂದು ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಹೇಳಿದೆ. ಇದನ್ನೂ ಓದಿ: ಷೇರು ಮಾರುಕಟ್ಟೆಯಲ್ಲಿ ರಕ್ತಪಾತ – ಒಂದೇ ದಿನ ಕರಗಿತು ಹೂಡಿಕಾದರರ 14 ಲಕ್ಷ ಕೋಟಿ ಸಂಪತ್ತು

Paytm FASTag ಗೆ ಸಂಬಂಧಿಸಿದ ಯಾವುದೇ ಹೆಚ್ಚಿನ ಪ್ರಶ್ನೆಗಳು ಅಥವಾ ಸಹಾಯಕ್ಕಾಗಿ, ಬಳಕೆದಾರರು ತಮ್ಮ ಬ್ಯಾಂಕ್‌ಗಳನ್ನು ಸಂಪರ್ಕಿಸಬಹುದು ಅಥವಾ IHMCL ವೆಬ್‌ಸೈಟ್‌ನಲ್ಲಿ ಒದಗಿಸಲಾದ FAQ ಗಳನ್ನು ಉಲ್ಲೇಖಿಸಬಹುದು. ದೇಶದಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ತಡೆರಹಿತ ಪ್ರಯಾಣದ ಅನುಭವವನ್ನು ಖಚಿತಪಡಿಸಿಕೊಳ್ಳಲು ಪೂರ್ವಭಾವಿ ಕ್ರಮಗಳನ್ನು ತೆಗೆದುಕೊಳ್ಳುವಂತೆ NHAI ಎಲ್ಲಾ Paytm FASTag ಬಳಕೆದಾರರಿಗೆ ಸೂಚಿಸಿದೆ. ಇದನ್ನೂ ಓದಿ: ಮೈಸೂರಿನಿಂದ ಯದುವೀರ್‌, ಬೆಂಗಳೂರು ಉತ್ತರದಿಂದ ಕರಂದ್ಲಾಜೆ – ಯಾರಿಗೆ ಎಲ್ಲಿ ಟಿಕೆಟ್‌?

Share This Article