ಜಪಾನ್‌ ಖಾಸಗಿ ಉಪಗ್ರಹ ಉಡಾವಣೆಯಾದ ಕೆಲವೇ ಸೆಕೆಂಡುಗಳಲ್ಲಿ ಸ್ಫೋಟ

Public TV
1 Min Read
japanese space

ಟೋಕಿಯೊ: ಜಪಾನಿನ (Japan) ಕಂಪನಿಯೊಂದು ತಯಾರಿಸಿದ ರಾಕೆಟ್ ಬುಧವಾರ ಉಡಾವಣೆಯಾದ ಕೆಲವೇ ಹೊತ್ತಿನಲ್ಲಿ ಸ್ಫೋಟಗೊಂಡಿದೆ.

ಟೋಕಿಯೋ ಮೂಲದ ಸ್ಟಾರ್ಟ್ಅಪ್ ಸ್ಪೇಸ್ ಒನ್ ಉಪಗ್ರಹ ಉಡಾವಣೆ ಮಾಡಿತ್ತು. ಯಶಸ್ವಿಯಾಗಿ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಮೊದಲ ಜಪಾನಿನ ಖಾಸಗಿ ಸಂಸ್ಥೆಯಾಗುವ ಗುರಿ ಹೊಂದಿತ್ತು. ಇದನ್ನೂ ಓದಿ: ಆಸ್ಟ್ರೇಲಿಯಾದಲ್ಲಿ ಹೈದರಾಬಾದ್ ಮಹಿಳೆಯ ಶವ ಪತ್ತೆ – ಪತಿಯಿಂದಲೇ ಕೊಲೆ ಶಂಕೆ

ಕೈರೋಸ್ ರಾಕೆಟ್ ಪಶ್ಚಿಮ ಜಪಾನ್‌ನ ವಕಯಾಮಾ ಪ್ರಿಫೆಕ್ಚರ್‌ನಲ್ಲಿರುವ ಸ್ಟಾರ್ಟ್‌ಅಪ್‌ನ ಉಡಾವಣಾ ಕೇಂದ್ರದಿಂದ ಉಪಗ್ರಹ ಉಡಾವಣೆ ಮಾಡಲಾಗಿತ್ತು. ಆದರೆ ಉಡಾವಣೆಯಾದ ಕೆಲವೇ ಸೆಕೆಂಡುಗಳ ನಂತರ, ರಾಕೆಟ್ ಜ್ವಾಲೆಯ ಚೆಂಡಾಯಿತು. ಉಪಗ್ರಹ ಸ್ಫೋಟಗೊಂಡು ಉಡಾವಣಾ ಪ್ಯಾಡ್ ಪ್ರದೇಶದಲ್ಲಿ ಕಪ್ಪು ಹೊಗೆ ತುಂಬಿತ್ತು.

ಉಡಾವಣೆಯಾದ ಸುಮಾರು 51 ನಿಮಿಷಗಳ ಹೊತ್ತಿಗೆ ಉಪಗ್ರಹವನ್ನು ಕಕ್ಷೆಗೆ ಸೇರಿಸುವ ಭರವಸೆಯನ್ನು ಕೈರೋಸ್ ಹೊಂದಿತ್ತು. ಆದರೆ ಪ್ರಯತ್ನ ವಿಫಲವಾಗಿದೆ. ವಿಫಲತೆ ಸಂಬಂಧ ತನಿಖೆ ನಡೆಸಲಾಗುತ್ತಿದೆ ಎಂದು ಸ್ಪೇಸ್‌ ಒನ್‌ ತಿಳಿಸಿದೆ. ಇದನ್ನೂ ಓದಿ: ಇಂಡೋನೇಷ್ಯಾದಲ್ಲಿ ಭಾರೀ ಮಳೆ- 19 ಮಂದಿ ಸಾವು, ಹಲವರು ನಾಪತ್ತೆ

ಕ್ಯಾನನ್ ಎಲೆಕ್ಟ್ರಾನಿಕ್ಸ್, IHI ಏರೋಸ್ಪೇಸ್, ನಿರ್ಮಾಣ ಸಂಸ್ಥೆ ಶಿಮಿಜು ಮತ್ತು ಜಪಾನ್‌ನ ಸರ್ಕಾರಿ ಸ್ವಾಮ್ಯದ ಡೆವಲಪ್‌ಮೆಂಟ್ ಬ್ಯಾಂಕ್ ಸೇರಿದಂತೆ ಪ್ರಮುಖ ಜಪಾನೀಸ್ ಟೆಕ್ ವ್ಯವಹಾರಗಳ ತಂಡದಿಂದ ಸ್ಪೇಸ್ ಒನ್ ಅನ್ನು 2018 ರಲ್ಲಿ ಸ್ಥಾಪಿಸಲಾಯಿತು.

Share This Article