ಗದಗ: ಕಾಂಗ್ರೆಸ್ ಮುಖಂಡನನ್ನು (Congress Leader) ಹತ್ಯೆಗೈದು ಮರಕ್ಕೆ ನೇಣು ಹಾಕಿರುವ ಘಟನೆ ಮುಂಡರಗಿ ತಾಲೂಕಿನ ಡೋಣಿ ಗ್ರಾಮದ ಬಳಿ ನಡೆದಿದೆ.
ಡೋಣಿ ಗ್ರಾಮದ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಕಾರ್ಯನಿರ್ವಹಿಸುತ್ತಿದ್ದ ಶರಣಪ್ಪ ಸಂದೀಗೌಡರ್ (40) ಕೊಲೆಯಾದ ದುರ್ದೈವಿ. ಕೊಲೆಗೂ ಮುನ್ನ ಅವರನ್ನು ಅಟ್ಟಾಡಿಸಿ ಹೊಡೆದು, ಕಣ್ಣಿಗೆ ಖಾರದ ಪುಡಿ ಎರಚಿ, ಮರಕ್ಕೆ ಕೈಕಾಲು ಕಟ್ಟಿ ವಿಕೃತಿ ಮೆರೆದಿದ್ದಾರೆ. ಬಳಿಕ ಹತ್ಯೆಗೈದು ಮರಕ್ಕೆ ನೇಣು ಬಿಗಿಯಲಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮೊದಲ ಬಾರಿಗೆ ತೇಜಸ್ ಫೈಟರ್ ಜೆಟ್ ಪತನ- ಪೈಲಟ್ ಸೇಫ್
ಹತ್ಯೆಯಾದ ಶರಣಪ್ಪ ಮರಳು ದಂಧೆ ನಡೆಸುತ್ತಿದ್ದ. ಆತನ ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಘಟನೆಯಿಂದ ಡೋಣಿ ಹಾಗೂ ಡಾಂಬಳ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.
ಸ್ಥಳಕ್ಕೆ ಮುಂಡರಗಿ ಪೊಲೀಸರು (Police), ಶ್ವಾನದಳ, ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಬೈಕ್ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಇದನ್ನೂ ಓದಿ: ಮಗಳನ್ನು ಪೀಡಿಸುತ್ತಿದ್ದ ಯುವಕನಿಗೆ ಬುದ್ಧಿ ಹೇಳಿದ್ದಕ್ಕೆ ಯುವತಿಯ ತಂದೆಯನ್ನೇ ಕೊಚ್ಚಿ ಕೊಂದ!