ಬಸ್ ಮೇಲೆ ಬಿದ್ದ 11,000 ವೋಲ್ಟ್ ಕರೆಂಟ್ ವೈರ್ – 10ಕ್ಕೂ ಹೆಚ್ಚು ಮಂದಿ ಸಜೀವ ದಹನ

Public TV
1 Min Read
Bus

– ಮದುವೆಗೆ ತೆರಳುತ್ತಿದ್ದ ಅತಿಥಿಗಳು ಮಸಣಕ್ಕೆ
– ಮೇಲ್ವಿಚಾರಣೆ ನಡೆಸುವಂತೆ ಉನ್ನತಾಧಿಕಾರಿಗಳಿಗೆ ಸಿಎಂ ಯೋಗಿ ಸೂಚನೆ

ಲಕ್ನೋ: ಮದುವೆಗೆ ತೆರಳುತ್ತಿದ್ದ ಬಸ್‌ ಮೇಲೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ ಬಿದ್ದು ಬಸ್‌ ಸ್ಥಳದಲ್ಲೇ ಸುಟ್ಟು ಕರಕಲಾಗಿರುವ (Ghazipur Bus Fire) ಘಟನೆ ಉತ್ತರ ಪ್ರದೇಶದ (Uttar Pradesh) ಗಾಜಿಪುರದಲ್ಲಿ ನಡೆದಿದೆ.

ಇಲ್ಲಿನ ಮರ್ದಾಹ್‌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ. ಒಟ್ಟು 36 ಮಂದಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು ಎಂದು ಪ್ರಾಥಮಿಕ ಮೂಲಗಳು ತಿಳಿಸಿವೆ.

36 ಜನ ಅತಿಥಿಗಳು ಮದುವೆಗೆ ತೆರಳುತ್ತಿದ್ದ ವೇಳೆ 11,000 ವೋಲ್ಟ್‌ನ ಹೈಟೆನ್ಷನ್ ಕರೆಂಟ್ ವೈರ್ (11,000 Volt Electricity Wire) ಬಸ್‌ ಮೇಲೆ ಬಿದ್ದು, ಕೂಡಲೇ ಬಸ್‌ಗೆ ಬೆಂಕಿ ಹೊತ್ತಿಕೊಂಡಿದೆ. ಭಾರೀ ಪ್ರಮಾಣದ ವಿದ್ಯುತ್‌ ಪ್ರವಹಿಸುತ್ತಿದ್ದರಿಂದ 10ಕ್ಕೂ ಹೆಚ್ಚು ಮಂದಿ ಸಜೀವ ದಹನಗೊಂಡಿದ್ದಾರೆ. ಉಳಿದವರ ಆರೋಗ್ಯ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇನ್ನಷ್ಟೇ ತಿಳಿಯಬೇಕಿದೆ.

ಘಟನಾ ದೃಶ್ಯಾವಳಿಗಳು ಜಾಲತಾಣದಲ್ಲಿ ಹರಿದಾಡುತ್ತಿವೆ. ಘಟನೆಯಲ್ಲಿ ಕೆಲವರು ಗಂಭೀರವಾಗಿ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.


ತನಿಖೆಗೆ ಸಿಎಂ ಸೂಚನೆ: ಈ ಘಟನೆ ತಿಳಿಯುತ್ತಿದ್ದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್‌ ಅವರು, ಅಪಘಾತ ಸ್ಥಳಕ್ಕೆ ಭೇಟಿ ನೀಡಿ ಮೇಲ್ವಿಚಾರಣೆ ನಡೆಸುವಂತೆ ಉನ್ನತ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Share This Article