– ಸ್ವಾವಲಿಂಬಿ ಬದುಕು ಕಟ್ಟಿಕೊಳ್ಳಲು 500 ಕ್ಕೂ ಹೆಚ್ಚು ಬಡ ಮಹಿಳೆಯರಿಗೆ ಟೈಲರಿಂಗ್ ಮಷಿನ್ ವಿತರಣೆ
ಬೆಂಗಳೂರು: ಇಲ್ಲಿನ ಲಗ್ಗೆರೆಯಲ್ಲಿ ವರ್ಚಸ್ ನ್ಯಾಷನಲ್ ಸೇವಾ ಟ್ರಸ್ಟ್ (Varchass National Seva Trust) ವತಿಯಿಂದ ಅಂತಾರಾಷ್ಟ್ರೀಯ ಮಹಿಳಾ ದಿನವನ್ನು (International Women’s Day) ಆಚರಿಸಲಾಯಿತು. ಕಾರ್ಯಕ್ರಮಕ್ಕೆ ನ್ಯಾಯಮೂರ್ತಿ ಕೆ.ಸೋಮಶೇಖರ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಮಹಿಳೆಯರು ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಬೇಕು ಎನ್ನುವ ಉದ್ದೇಶದಿಂದ 500 ಕ್ಕೂ ಹೆಚ್ಚು ಬಡ ಮಹಿಳೆಯರನ್ನು ಗುರುತಿಸಿ ಟೈಲರಿಂಗ್ ತರಬೇತಿ ನೀಡಿರುವ ವರ್ಚಸ್ ನ್ಯಾಷನಲ್ ಸೇವಾ ಸಂಸ್ಥೆ, ಆ ಮಹಿಳೆಯರಿಗೆ ಟೈಲರಿಂಗ್ ಮಷನ್ ವಿತರಣೆ ಮಾಡಿತು. ಆ ಮೂಲಕ ಇಂದು (ಭಾನುವಾರ) ಮಹಿಳಾ ದಿನವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಇದನ್ನೂ ಓದಿ: ನೆಲ್ಸನ್ ಮಂಡೇಲಾರಿಗೆ ದೊರೆತಿದ್ದ ಪ್ರಶಸ್ತಿಗೆ ಈಗ ನೀತಾ ಅಂಬಾನಿ ಆಯ್ಕೆ!