ಮಂಗಳೂರು: ರಾಮೇಶ್ವರಂ ಕೆಫೆ (Rameshwaram Cafe) ಸ್ಫೋಟ ಪ್ರಕರಣದಲ್ಲಿ ಆರೋಪಿ ಪತ್ತೆಗೆ ವಿಶ್ವ ಹಿಂದೂ ಪರಿಷತ್ ಸಾಥ್ ಕೊಡಲಿದೆ ಎಂದು ಪರಿಷತ್‍ನ (Vishwa Hindu Parishad) ಕಾರ್ಯದರ್ಶಿ ಶರಣ್ ಪಂಪ್‍ವೆಲ್ (Sharan Pumpwell) ಹೇಳಿದ್ದಾರೆ.
ಮಂಗಳೂರಿನಲ್ಲಿ (Mangaluru) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಶ್ವ ಹಿಂದೂ ಪರಿಷತ್ ಆರೋಪಿಯ ಪತ್ತೆಗಾಗಿ ಪೊಲೀಸರಿಗೆ ಸಹಕಾರ ನೀಡಲಿದೆ. ನಮ್ಮ ಸೋಶಿಯಲ್ ಮೀಡಿಯಾದಲ್ಲಿ ಆರೋಪಿ ಫೋಟೊ ಪ್ರಕಟಿಸುತ್ತೇವೆ. ಈ ಮೂಲಕ ಅಧಿಕಾರಗಳ ಕೆಲಸಕ್ಕೆ ನಾವು ಸಹಕಾರ ನೀಡಲಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣ- ಕಲಬುರಗಿಯಲ್ಲೇ ಬೀಡುಬಿಟ್ಟಿರೋ NIA
- Advertisement
ಆರೋಪಿ ಬಳ್ಳಾರಿಗೆ ಹೋಗಿ ಮಸೀದಿಗೆ ಹೋಗಿರುವುದು ಪತ್ತೆಯಾಗಿದೆ. ಮಸೀದಿ ಬಳಿ ಬಟ್ಟೆ ಬದಲಿಸಿ ಬಳಿಕ ಭಟ್ಕಳಕ್ಕೆ ಬಂದಿರುವುದು ಪತ್ತೆಯಾಗಿದೆ. ಹೀಗಾಗಿ ಭಟ್ಕಳ ಸೇರಿ ರಾಜ್ಯದಾದ್ಯಂತ ಮದರಸಾ, ಮಸೀದಿಗಳಲ್ಲಿ ತನಿಖೆ ನಡೆಸಿ ಶೋಧ ನಡೆಸಬೇಕು. ಭಟ್ಕಳದ ಮಸೀದಿಗಳಲ್ಲಿ ತನಿಖೆ ಮಾಡಿದರೆ ಬಾಂಬರ್ ಬಗ್ಗೆ ಮಾಹಿತಿ ಸಿಗಬಹುದು. ಭಟ್ಕಳದಲ್ಲಿ ಭಯೋತ್ಪಾದಕರಿಗೆ ಸಂಪರ್ಕ ಇರುವುದು ಬಹಳಷ್ಟು ಬಾರಿ ದೃಢವಾಗಿದೆ ಎಂದಿದ್ದಾರೆ.
- Advertisement
ಭಯೋತ್ಪಾದಕರಿಗೆ ಮಸೀದಿ, ಮದರಸಾಗಳೇ ತಾಣವಾಗುತ್ತಿದೆ. ಮದರಸಾ, ಮಸೀದಿಗಳಿಗೆ ಎನ್‍ಐಎ ದಾಳಿ ನಡೆಸಿದರೆ ಆರೋಪಿ ಪತ್ತೆಯಾಗಬಹುದು ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ಹೊಸದಾಗಿ ಮಂಡ್ಯದ ಗಂಡು ರೆಡಿ ಮಾಡಿದ್ದೇವೆ: ಡಿಕೆಶಿ