Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Bengaluru City

ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಗೋದು ಅನುಮಾನ – ಮೈಸೂರಿನಿಂದ ಯದುವೀರ್‌ ಸ್ಪರ್ಧೆ?

Public TV
Last updated: March 9, 2024 10:24 am
Public TV
Share
3 Min Read
narendra Modi yaduveer wadiyar
SHARE

ಬೆಂಗಳೂರು/ಮೈಸೂರು: ಚುನಾವಣೆಯಲ್ಲಿ ಅಚ್ಚರಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬಿಜೆಪಿ ಹೈಕಮಾಂಡ್‌ (BJP High Command) ಮೈಸೂರಿನಲ್ಲಿ (Mysuru) ಈ ಬಾರಿ ಯದುವೀರ್‌ ಒಡೆಯರ್‌ (Yaduveer Wadiyar) ಅವರನ್ನು ಕಣಕ್ಕೆ ಇಳಿಸಲು ಚಿಂತನೆ ನಡೆಸಿದೆ.

ಹೌದು. ಹಾಲಿ ಸಂಸದರಾಗಿರುವ ಪ್ರತಾಪ್‌ ಸಿಂಹ (Pratap Simha) ಅವರಿಗೆ ಈ ಬಾರಿ ಟಿಕೆಟ್‌ ಸಿಗುವುದು ಅನುಮಾನ ಎನ್ನಲಾಗುತ್ತಿದ್ದು ಅವರ ಜಾಗದಲ್ಲಿ ಮೈಸೂರಿನ ರಾಜವಂಶಸ್ಥರ ಕುಡಿಗೆ ಟಿಕೆಟ್‌ ಸಿಗುವ ಸಾಧ್ಯತೆಯಿದೆ.

ಕಳೆದ ಕೆಲ ದಿನಗಳಿಂದ ಯದುವೀರ್‌ ಒಡೆಯರ್‌ ಹೆಸರು ಕೇಳಿ ಬರುತ್ತಿದ್ದರೂ ಅದು ಹೈಕಮಾಂಡ್‌ ಮಟ್ಟದಲ್ಲಿ ಚರ್ಚೆ ಆಗಿರಲಿಲ್ಲ. ಆದರೆ ಈಗ ಬಿಜೆಪಿ ಕೇಂದ್ರ ಚುನಾವಣಾ ಸಮಿತಿ ಸಭೆಯಲ್ಲಿ ಯದುವೀರ್‌ ಒಡೆಯರ್‌ ಹೆಸರು ಪ್ರಸ್ತಾಪವಾಗಿದೆ. ಇದನ್ನೂ ಓದಿ: ರಣಬಿಸಿಲ ನಡುವೆ ದಾಖಲೆಯ ವಿದ್ಯುತ್ ಬಳಕೆ – ಲೋಡ್ ಶೆಡ್ಡಿಂಗ್ ಭೀತಿ

yaduveer wadiyar and modi

ಈಗಾಗಲೇ ಯದುವೀರ್‌ ಒಡೆಯರ್‌ ಅವರನ್ನು ಬಿಜೆಪಿ ಸಂಪರ್ಕಿಸಿದ್ದು ಸ್ಪರ್ಧಿಸಲು ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ. ಆದರೆ ಪ್ರಮೋದಾ ದೇವಿ (Pramoda Devi) ಗ್ರೀನ್ ಸಿಗ್ನಲ್‌ಗೆ ನಾಯಕರು ಕಾಯುತ್ತಿದ್ದಾರೆ. ಒಂದು ವೇಳೆ ಪ್ರಮೋದಾ ದೇವಿ ಒಪ್ಪಿಗೆ ನೀಡಿದರೆ ಯದುವೀರ್‌ ಒಡೆಯರ್‌ ರಾಜಕಿಯ  ಪ್ರವೇಶಿಸಲಿದ್ದಾರೆ.

ಯಡಿಯೂರಪ್ಪ (Yediyurappa) ಮತ್ತು ಆರ್‌ಎಸ್‌ಎಸ್‌ ನಾಯಕರೊಬ್ಬರ ಮೂಲಕ ಯದುವೀರ್‌ ಅವರನ್ನು ಮನವೊಲಿಕೆ ಮಾಡಲಾಗಿದೆ. ಮನವೊಲಿಕೆಯ ಬೆನ್ನಲ್ಲೇ ಪ್ರತಾಪ್‌ ಸಿಂಹ ಜೊತೆ ಯದುವೀರ್‌ ಒಡೆಯರ್‌ ಹೆಸರನ್ನು ಅಮಿತ್‌ ಶಾ ನೇತೃತ್ವದಲ್ಲಿ ನಡೆದ ಸಭೆಯಲ್ಲೇ ಶಿಫಾರಸ್ಸು ಮಾಡಲಾಗಿತ್ತು.

 

ಯದುವೀರ್‌ ಯಾಕೆ?
ಮೈಸೂರಿನ ಕೊನೆಯ ಮಹಾರಾಜರಾದ ಜಯಚಾಮರಾಜೇಂದ್ರ ಒಡೆಯರ್‌ ಅವರ ಏಕೈಕ ಪುತ್ರ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಾಲ್ಕು ಬಾರಿ ಮೈಸೂರಿನ ಸಂಸದರಾಗಿದ್ದರಾಗಿ ಆಯ್ಕೆ ಅಗಿದ್ದರು. ಕಾಂಗ್ರೆಸ್ಸಿನಿಂದ ನಾಲ್ಕು ಬಾರಿ ಗೆದ್ದು ಎರಡು ಬಾರಿ ಅವರು ಸೋತಿದ್ದರು. 1984 ,1989, 1996, 1999ರಲ್ಲಿ ಗೆದ್ದಿದ್ದರೆ 1991 ಹಾಗೂ 2004ರಲ್ಲಿ ಸೋಲು ಅನುಭವಿಸಿದ್ದರು.

ಹಳೆ ಮೈಸೂರು ಭಾಗದಲ್ಲಿ ಮೈಸೂರು ರಾಜವಂಶಸ್ಥರ ಬಗ್ಗೆ ಈಗಲೂ ಜನರಲ್ಲಿ ಗೌರವವಿದೆ. ಮೈಸೂರಿನಲ್ಲಿ ಶಿಕ್ಷಣ,ನೀರಾವರಿ ಸೇರಿದಂತೆ ಹಲವು ಅಭಿವೃದ್ಧಿ ಕೆಲಸಗಳಿಗೆ ರಾಜರು ಭಾರೀ ಕೊಡುಗೆ ನೀಡಿದ್ದಾರೆ. ಈ ಸಮಾಜಮುಖಿ ಕೆಲಸದಿಂದ ಈಗಲೂ ರಾಜರ ಫೋಟೋವನ್ನು ಇಟ್ಟು ಪೂಜೆ ಮಾಡುವವರಿದ್ದಾರೆ. ಈ ಕಾರಣಕ್ಕೆ ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್‌ ನೀಡಿದರೆ ಹಳೆ ಮೈಸೂರು ಭಾಗ ಸೇರಿದಂತೆ ರಾಜ್ಯದಲ್ಲೂ ಪ್ರಭಾವ ಬೀರಬಹುದು ಎಂಬ ಲೆಕ್ಕಾಚಾರವನ್ನು ಬಿಜೆಪಿ ಹಾಕಿಕೊಂಡಿದೆ.

 

ಪ್ರತಾಪ್‌ ಸಿಂಹ ಭವಿಷ್ಯ ಏನು?
ಸತತ ಎರಡು ಬಾರಿ ಸಂಸದರಾಗಿ ಆಯ್ಕೆ ಆಗಿರುವ ಪ್ರತಾಪ್‌ ಸಿಂಹ ಮೂರನೇ ಬಾರಿ ಸ್ಪರ್ಧಿಸಲು ಸಿದ್ಧತೆ ನಡೆಸಿದ್ದಾರೆ. ರಾಜ್ಯದ ಹಲವು ಬಿಜೆಪಿ ಸಂಸದರು ತಮ್ಮ ಸಾಧನೆ ಕೈಪಿಡಿ ಹೊರತರದೇ ಇದ್ದರೂ ಪ್ರತಾಪ್‌ ಸಿಂಹ ಬಿಜೆಪಿಯ ಅಗ್ರ ನಾಯಕರಿಗೆ ತಮ್ಮ ಕೆಲಸದ ಸಾಧನೆಯ ಕೈಪಿಡಿಯನ್ನು ನೀಡಿದ್ದಾರೆ.

ಒಂದು ವೇಳೆ ಲೋಕಸಭೆ ಟಿಕೆಟ್‌ ಸಿಗದೇ ಇದ್ದರೆ ಪ್ರತಾಪ್‌ ಸಿಂಹ ಅವರ ಮುಂದಿನ ರಾಜಕೀಯ ಭವಿಷ್ಯ ಏನು ಎಂಬ ಪ್ರಶ್ನೆ ಬರುತ್ತದೆ. ಇನ್ನೂ ಮೈಸೂರು ಟಿಕೆಟ್‌ ಯಾರಿಗೆ ಸಿಗಲಿದೆ ಎನ್ನುವುದು ಅಂತಿಮವಾಗಿಲ್ಲ. ಯದುವೀರ್‌ ಒಡೆಯರ್‌ ಸ್ಪರ್ಧಿಸಿದರೆ ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಗುವುದು ಅನುಮಾನ. ಹೀಗಾಗಿ ಬೇರೆ ಲೋಕಸಭಾ ಕ್ಷೇತ್ರದ ಟಿಕೆಟ್‌ ಸಿಕ್ಕರೂ ಸಿಗಬಹುದು ಎಂಬ ಮಾತು ಕೇಳಿ ಬಂದಿದೆ.

ಮೊದಲ ಬಾರಿ ಸ್ಪರ್ಧೆ ಮಾಡಿದ್ದ 2014ರ ಚುನಾವಣೆಯಲ್ಲಿ ಪ್ರತಾಪ್‌ ಸಿಂಹ ಕಾಂಗ್ರೆಸ್‌ ಅಭ್ಯರ್ಥಿ ವಿರುದ್ಧ 31,608 ಮತಗಳಿಂದ ಗೆದ್ದರೆ, 2019ರ ಚುನಾವಣೆಯಲ್ಲಿ 1,38,647 ಮತಗಳ ಅಂತರದಿಂದ ಮೈತ್ರಿ ಅಭ್ಯರ್ಥಿಯನ್ನು ಸೋಲಿಸಿದ್ದರು. ಸದ್ಯ ಪ್ರತಾಪ್‌ ಸಿಂಹ ರಾಜಕೀಯ ಭವಿಷ್ಯ ಪ್ರಧಾನಿ ನರೇಂದ್ರ ಮೋದಿ (Narendra Modi)  ಅವರ ಕೈಯಲ್ಲಿದೆ.

 

TAGGED:bjpkarnatakamysurupratp simhaYaduveer Wadiyarಪ್ರತಾಪ್ ಸಿಂಹಬಿಜೆಪಿಯದುವೀರ್ ಒಡೆಯರ್ಲೋಕಸಭಾ ಚುನಾವಣೆ
Share This Article
Facebook Whatsapp Whatsapp Telegram

You Might Also Like

Gurugram Tennis Player Daughter Killed By Father
Latest

ರೀಲ್ಸ್ ಚಟ – ಟೆನ್ನಿಸ್ ಆಟಗಾರ್ತಿ ಮಗಳನ್ನು ಗುಂಡಿಕ್ಕಿ ಕೊಂದ ತಂದೆ

Public TV
By Public TV
3 minutes ago
the raja saab vs dhurandhar
Bollywood

ರಾಜಾಸಾಬ್ ವರ್ಸಸ್ ಧುರಂಧರ್ ಬಾಕ್ಸಾಫೀಸ್ ಕ್ಲ್ಯಾಶ್: ಸಂಜುಬಾಬ ಸ್ಫೋಟಕ ಹೇಳಿಕೆ

Public TV
By Public TV
12 minutes ago
Ashwin 2
Cricket

ಗಿಲ್‌ ಬದಲು ಆಕಾಶ್‌ ದೀಪ್‌ಗೆ ಪಂದ್ಯಶ್ರೇಷ್ಠ ನೀಡಬೇಕಿತ್ತು: ಅಶ್ವಿನ್‌

Public TV
By Public TV
27 minutes ago
Siddaramaiah 7
Bengaluru City

ಅಡ್ಡ ನಿಮ್ದು, ಖೆಡ್ಡಾ ನಂದು: ಡೆಲ್ಲಿಯಲ್ಲೇ ಸಿದ್ದರಾಮಯ್ಯ ಸಂದೇಶ

Public TV
By Public TV
34 minutes ago
Guwahati live in relationship
Crime

ನೇಣು ಬಿಗಿದುಕೊಂಡು ವ್ಯಕ್ತಿ ಆತ್ಮಹತ್ಯೆ – ಕೈ ಕೊಯ್ದುಕೊಂಡ ಲಿವ್‌-ಇನ್‌ ಪಾರ್ಟ್ನರ್‌

Public TV
By Public TV
45 minutes ago
ಸಾಂದರ್ಭಿಕ ಚಿತ್ರ
Bengaluru City

ʻಕೈʼ ಸರ್ಕಾರದಿಂದ ಬೀದಿ ನಾಯಿಗಳಿಗೂ ಗ್ಯಾರಂಟಿ – ಬಾಡೂಟಕ್ಕಾಗಿ ಬಿಬಿಎಂಪಿಯಿಂದ 2.80 ಕೋಟಿ ಟೆಂಡರ್

Public TV
By Public TV
50 minutes ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?