ತಾಜ್ ಮಹಲ್‌ಗೆ ಈಗ ಮೆಟ್ರೋ ಸವಾರಿ; ಆಗ್ರಾ ಮೆಟ್ರೋ ಕಾರಿಡಾರ್ ಉದ್ಘಾಟಿಸಿದ ಮೋದಿ

Public TV
1 Min Read
Agra Metro Corridor

ಲಕ್ನೋ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇಂದು (ಬುಧವಾರ) ಆಗ್ರಾ ಮೆಟ್ರೋ ಕಾರಿಡಾರ್‌ (Agra Metro Corridor) ಉದ್ಘಾಟನೆ ಮಾಡಿದ್ದಾರೆ. ತಾಜ್‌ ಮಹಲ್‌ಗೆ ಈಗ ಮೆಟ್ರೋ ಸವಾರಿ ಮಾಡಬಹುದಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Yogi Adityanath) ಮತ್ತು ಇತರ ನಾಯಕರು ತಾಜ್ ಮಹಲ್ ನಿಲ್ದಾಣದಿಂದ ಆಗ್ರಾದ ತಾಜ್ ಮಹಲ್ ಈಸ್ಟ್ ಸ್ಟೇಷನ್‌ಗೆ ಉದ್ಘಾಟನಾ ರೈಲು ಸವಾರಿ ಮಾಡಿದ್ದಾರೆ. ಇದನ್ನೂ ಓದಿ: ದೇಶದ ಮೊದಲ ನದಿಯೊಳಗಿನ ಮೆಟ್ರೋ ಸುರಂಗ ಮಾರ್ಗ ಲೋಕಾರ್ಪಣೆ

Taj Mahal

6 ಕಿಮೀ ಕಾರಿಡಾರ್‌ನಲ್ಲಿ ಮೆಟ್ರೋ ಸೇವೆ ಗುರುವಾರದಿಂದ ಪ್ರಯಾಣಿಕರಿಗೆ ಲಭ್ಯವಿದೆ. ತಾಜ್ ಮಹಲ್ ಪೂರ್ವ ನಿಲ್ದಾಣ, ಕ್ಯಾಪ್ಟನ್ ಶುಭಂ ಗುಪ್ತಾ ನಿಲ್ದಾಣ, ಫತೇಹಾಬಾದ್ ರಸ್ತೆ ನಿಲ್ದಾಣ, ತಾಜ್ ಮಹಲ್ ನಿಲ್ದಾಣ ಮತ್ತು ಮಂಕಮೇಶ್ವರ ದೇವಸ್ಥಾನ ನಿಲ್ದಾಣಗಳಲ್ಲಿ ನಿಲುಗಡೆಯಾಗಲಿದೆ.

ತಾಜ್ ಮಹಲ್ ನಿಲ್ದಾಣದಲ್ಲಿ ಮಾತನಾಡಿದ ಯೋಗಿ ಆದಿತ್ಯನಾಥ್, ಆಗ್ರಾ ಮೆಟ್ರೋವು ಸ್ಥಳೀಯರು ಮತ್ತು ನಗರಕ್ಕೆ ಭೇಟಿ ನೀಡುವ ಪ್ರವಾಸಿಗರಿಗೆ ವಿಶ್ವದರ್ಜೆಯ ಸಾರ್ವಜನಿಕ ಸಾರಿಗೆ ಸೌಲಭ್ಯ ಒದಗಿಸುತ್ತದೆ. ಆಗ್ರಾ ಮೆಟ್ರೋವನ್ನು ಆಧುನಿಕ ಸೌಲಭ್ಯಗಳ ಕೇಂದ್ರವನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೋದಿ ರ‍್ಯಾಲಿಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸಂದೇಶ್‌ಖಾಲಿ ಮಹಿಳೆಯರಿದ್ದ ಬಸ್‌ಗಳಿಗೆ ತಡೆ

modi yogi

ಉತ್ತರ ಪ್ರದೇಶದ ಅತ್ಯಂತ ಹಳೆಯ ನಗರಗಳಲ್ಲಿ ಆಗ್ರ ಒಂದಾಗಿದೆ. ಇದು ‘ಬ್ರಜ್ ಭೂಮಿ’ಯ ಭಾಗವಾಗಿದೆ. ಈ ನಗರವು ಛತ್ರಪತಿ ಶಿವಾಜಿ ಮಹಾರಾಜರ ಶೌರ್ಯದ ಕಥೆಗಳೊಂದಿಗೆ ಸಂಬಂಧ ಹೊಂದಿದೆ ಎಂದು ಯೋಗಿ ಆದಿತ್ಯನಾಥ್‌ ಸ್ಮರಿಸಿದ್ದಾರೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು 2020, ಡಿಸೆಂಬರ್ 7 ರಂದು ಮೆಟ್ರೋದ ಶಂಕುಸ್ಥಾಪನೆ ನೆರವೇರಿಸಿದ್ದರು. ಇದು 23 ತಿಂಗಳಲ್ಲಿ ಪೂರ್ಣಗೊಂಡಿದೆ. ಇದನ್ನೂ ಓದಿ: ಅಮೇಥಿಯಿಂದ ರಾಹುಲ್‌ ಗಾಂಧಿ, ರಾಯ್‌ಬರೇಲಿ ಕ್ಷೇತ್ರದಿಂದ ಪ್ರಿಯಾಂಕಾ ಗಾಂಧಿ ಸ್ಪರ್ಧೆ?

Share This Article