ಕಾಡುಗಳ್ಳ ವೀರಪ್ಪನ್ ಗ್ಯಾಂಗ್ ಸದಸ್ಯೆಗೆ ಕ್ಲೀನ್‌ಚಿಟ್

Public TV
1 Min Read
veerappan 5

– ಪಾಲಾರ್ ಬಾಂಬ್ ಸ್ಫೋಟ; ರಾಮಾಪುರ ಪೊಲೀಸ್ ಠಾಣೆ ಮೇಲಿನ ದಾಳಿ ಪ್ರಕರಣದಲ್ಲಿದ್ದ ಸ್ಟೆಲ್ಲಾಮೇರಿ

ಚಾಮರಾಜನಗರ: ಕಾಡುಗಳ್ಳ ವೀರಪ್ಪನ್ (Veerappan) ಗ್ಯಾಂಗ್‌‌ನ ಸದಸ್ಯೆಯಾಗಿದ್ದ ಸ್ಟೆಲ್ಲಾಮೇರಿಗೆ ಕ್ಲೀನ್‌ಚಿಟ್ ಸಿಕ್ಕಿದೆ. ಪಾಲಾರ್ ಬಾಂಬ್ ಸ್ಫೋಟ, ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ಪ್ರಕರಣದಲ್ಲಿ ಸ್ಟೆಲ್ಲಾಮೇರಿ ಆರೋಪಿಯಾಗಿದ್ದಳು. ಇದೀಗಾ ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿ ಚಾಮರಾಜನಗರ (Chamarajanagara) ಬಾಲ ನ್ಯಾಯಮಂಡಳಿ ಆದೇಶ ಹೊರಡಿಸಿದೆ.

2020ರ ಫೆಬ್ರವರಿಯಲ್ಲಿ ಸ್ಟೆಲ್ಲಾಮೇರಿಯನ್ನು ಬಂಧಿಸಲಾಗಿತ್ತು. ಟಾಡಾ, ಶಸ್ತ್ರಾಸ್ತ್ರ ಕಾಯ್ದೆ, ಸ್ಫೋಟಕ ಕಾಯ್ದೆ ಸೇರಿದಂತೆ ವಿವಿಧ ಆರೋಪಗಳಡಿ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ಬುಧವಾರ ರಾಜ್ಯದ 28 ಲೋಕಸಭಾ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ: ಬಿಎಸ್‌ವೈ

ಮಾನವ ಹಕ್ಕುಗಳ ಸಂಘಟನೆಗಳು ಸ್ಟೆಲ್ಲಾಮೇರಿ ಬಂಧನ ಪ್ರಶ್ನಿಸಿದ್ದವು. ಸ್ಟೆಲ್ಲಾಮೇರಿ ಬಿಡುಗಡೆ ಮಾಡಿ ಪ್ರಕರಣವನ್ನು ಬಾಲ ನ್ಯಾಯ ಮಂಡಳಿಗೆ ಚಾಮರಾಜನಗರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ವಹಿಸಿತ್ತು. ಪಾಲಾರ್ ಬಾಂಬ್ ಸ್ಫೋಟ ಮತ್ತು ರಾಮಾಪುರ ಪೊಲೀಸ್ ಠಾಣೆ ಮೇಲೆ ದಾಳಿ ನಡೆದಾಗ ಸ್ಟೆಲ್ಲಾಮೇರಿ ಅಪ್ರಾಪ್ತೆ ಎಂದು ಮಾನವ ಹಕ್ಕುಗಳ ಸಂಘಟನೆ ವಾದವಾಗಿತ್ತು.

ಸ್ಟೆಲ್ಲಾಮೇರಿಯನ್ನು ವೀರಪ್ಪನ್ ಸಹಚರ ಸುಂಡವಲಿಯಾರ್ ಎಂಬಾತ ಅಪಹರಿಸಿ ಮದುವೆಯಾಗಿದ್ದ ಎಂದು ಪ್ರತಿಪಾದಿಸಿದ್ದಾರೆ. ಪೊಲೀಸ್ ಎನ್‌‌ಕೌಂಟರ್‌ನಲ್ಲಿ ಸುಂಡವಲಿಯಾರ್ ಬಲಿಯಾಗಿದ್ದಾನೆ. ವಾದ ಪುರಸ್ಕರಿಸಿದ ಬಾಲ ನ್ಯಾಯ ಮಂಡಳಿ ಸ್ಟೆಲ್ಲಾಮೇರಿಯನ್ನು ಆರೋಪಗಳಿಂದ ಮುಕ್ತಗೊಳಿಸಿದೆ. ಇದನ್ನೂ ಓದಿ: ಬಸ್, ರೈಲು, ದೇವಸ್ಥಾನಗಳೇ ಟಾರ್ಗೆಟ್- ಬೆಂಗಳೂರಿಗೆ ಮತ್ತೊಂದು ಬಾಂಬ್ ಬೆದರಿಕೆ

Share This Article