ಗಾಂಧಿನಗರ: ರಿಲಯನ್ಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರ (Mukesh Ambani) ಪುತ್ರ ಅನಂತ್ ಅಂಬಾನಿಯವರು (Ananth Ambani) ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ ತಮಗೆ ಕಾಡಿದ್ದ ಅನಾರೋಗ್ಯದ ಬಗ್ಗೆ ಮಾತಾಡಿದ್ದು, ಈ ವೇಳೆ ಮುಖೇಶ್ ಅಂಬಾನಿ ಭಾವುಕರಾಗಿದ್ದಾರೆ.
ಗುಜರಾತ್‍ನ ಜಾಮ್‍ನಗರದಲ್ಲಿ ಪ್ರೀ ವೆಡ್ಡಿಂಗ್ ಸಮಾರಂಭದಲ್ಲಿ (Pre Wedding Festivities) ಅನಂತ್ ಅಂಬಾನಿ ಮಾತಾಡಿದ್ದಾರೆ. ಈ ವೇಳೆ ನನ್ನ ಕುಟುಂಬ ನನಗೆ ವಿಶೇಷ ಒಲವನ್ನು ನೀಡಿದೆ. ನನ್ನ ಜೀವನವು ಸಂಪೂರ್ಣವಾಗಿ ಗುಲಾಬಿ ಹೂಗಳ ಹಾಸಿಗೆಯಾಗಿರಲಿಲ್ಲ. ನಾನು ಮುಳ್ಳಿನ ನೋವನ್ನೂ ಅನುಭವಿಸಿದ್ದೇನೆ. ನಾನು ಬಾಲ್ಯದಿಂದಲೂ ಅನೇಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಿದ್ದು, ನನ್ನ ತಂದೆ ಮತ್ತು ತಾಯಿ ಬಹಳ ಕಾಳಜಿಯಿಂದ ನೋಡಿಕೊಂಡಿದ್ದಾರೆ. ಈ ಮೂಲಕ ಅನಾರೋಗ್ಯದ ಭಾವನೆ ಕಾಡದಂತೆ ನನ್ನನ್ನು ನೋಡಿಕೊಂಡಿದ್ದಾರೆ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದನ್ನೂ ಓದಿ: ತಮನ್ನಾ ಭಾಟಿಯಾ ಸಿನಿಮಾದಲ್ಲಿ ವಸಿಷ್ಠ ಸಿಂಹ
ಮಗನ ಮಾತನ್ನು ಕೇಳುತ್ತಿದ್ದಂತೆ ಮುಖೇಶ್ ಅಂಬಾನಿ ಭಾವುಕರಾಗಿ, ಕಣ್ಣೀರಿಟ್ಟಿದ್ದಾರೆ. ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಈ ಸಮಾರಂಭದಲ್ಲಿ ವಿಶ್ವದ ಕೆಲವು ಶ್ರೀಮಂತರು ಸೇರಿದಂತೆ 1,000 ಕ್ಕೂ ಹೆಚ್ಚು ಅತಿಥಿಗಳು ಭಾಗಿಯಾಗಿದ್ದರು. ವಿಶೇಷ ಆಹ್ವಾನಿತರಲ್ಲಿ ಬಿಲ್ ಗೇಟ್ಸ್, ಮೆಟಾ ಸಿಇಒ ಮಾರ್ಕ್ ಜುಕರ್‌ಬರ್ಗ್, ಅಮಿತಾಬ್ ಬಚ್ಚನ್, ಶಾರುಖ್ ಖಾನ್, ಆಮೀರ್ ಖಾನ್, ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಸೇರಿದಂತೆ ಅನೇಕರು ಹಾಜರಿದ್ದರು.
ಈ ಸಮಾರಂಭದಲ್ಲಿ ಪಾಪ್ ತಾರೆ ರಿಹಾನ್ನಾ ಅವರು ಭಾರತದಲ್ಲಿ ಮೊದಲ ಬಾರಿಗೆ ಕಾರ್ಯಕ್ರಮ ನೀಡಿದರು. ಇದನ್ನೂ ಓದಿ: ಬಾಂಬ್ ಸ್ಫೋಟ – ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಗಾಯಾಳು ಡಿಶ್ಚಾರ್ಜ್