ರಾಮೇಶ್ವರಂ ಕೆಫೆಯಲ್ಲಿ ಬಾಂಬ್‌ ಸ್ಫೋಟ: ತೇಜಸ್ವಿ ಸೂರ್ಯ ಅನುಮಾನ

Public TV
1 Min Read
Tejasvi Surya

ಬೆಂಗಳೂರು: ಹೆಚ್‌ಎಎಲ್‌ ಬಳಿಯ ರಾಮೇಶ್ವರಂ ಕೆಫೆಯಲ್ಲಿ (Rameshwaram Café) ಬಾಂಬ್‌ ಸ್ಫೋಟಗೊಂಡಿರಬಹುದು (Bomb Blast) ಎಂಬ ಅನುಮಾನವನ್ನು ಬೆಂಗಳೂರು ದಕ್ಷಿಣ ಕೇತ್ರದ ಬಿಜೆಪಿ ಸಂಸದ ತೇಜಸ್ವಿ ಸೂರ್ಯ (Tejasvi Surya)  ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ ಅವರು, ನಾನು ರಾಮೇಶ್ವರಂ ಕೆಫೆ ಸಂಸ್ಥಾಪಕ ನಾಗರಾಜ್ ಅವರೊಂದಿಗೆ ರೆಸ್ಟೋರೆಂಟ್‌ನಲ್ಲಿ ನಡೆದ ಸ್ಫೋಟದ ಬಗ್ಗೆ ಮಾತನಾಡಿದೆ. ಗ್ರಾಹಕರು ಬಿಟ್ಟು ಹೋಗಿದ್ದ ಬ್ಯಾಗ್‌ನಿಂದ ಸ್ಫೋಟ ಸಂಭವಿಸಿದೆ ಮತ್ತು ಯಾವುದೇ ಸಿಲಿಂಡರ್ ಸ್ಫೋಟಗೊಂಡಿಲ್ಲ ಎಂದು ಅವರು ನನಗೆ ಮಾಹಿತಿ ನೀಡಿದರು ಎಂದು ಹೇಳಿದ್ದಾರೆ.  ಇದನ್ನೂ ಓದಿ: ರಾಮೇಶ್ವರ ಕೆಫೆಯಲ್ಲಿ ಸ್ಫೋಟ – ಸ್ಥಳಕ್ಕೆ ಭಯೋತ್ಪಾದನಾ ನಿಗ್ರಹ ದಳ ಎಂಟ್ರಿ

ಇದು ಬಾಂಬ್ ಸ್ಫೋಟದ ಸ್ಪಷ್ಟ ಪ್ರಕರಣ ಎಂದು ತೋರುತ್ತದೆ. ಇದಕ್ಕೆ ಸಿಎಂ ಸಿದ್ದರಾಮಯ್ಯ (CM Siddaramaiah) ಸ್ಪಷ್ಟ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.

ಶುಕ್ರವಾರ ಮಧ್ಯಾಹ್ನ 1:05ಕ್ಕೆ ಕೆಫೆಯ ಕೈ ತೊಳೆಯುವ ಜಾಗದಲ್ಲಿಈ ಸ್ಫೋಟ ಸಂಭವಿಸಿದೆ. ಸ್ಥಳದಲ್ಲಿ ಬ್ಯಾಟರಿ, ಬೋಲ್ಟ್‌ಗಳು ಪತ್ತೆಯಾಗಿದೆ. ಪೊಲೀಸರ ಜೊತೆ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ (FSL) ಅಧಿಕಾರಿಗಳು, ಭಯೋತ್ಪಾದನಾ ನಿಗ್ರಹ ದಳ ಭೇಟಿ ನೀಡಿದ್ದು ಪರಿಶೀಲನೆ ನಡೆಯುತ್ತಿದೆ.

 

Share This Article