ಹೊನ್ನಾವರದಲ್ಲಿ ಭೀಕರ ಅಪಘಾತ – ಬಸ್ಸಿನಡಿಗೆ ಸಿಲುಕಿ ತಾಯಿ, ಮಗಳು ಸಾವು

Public TV
1 Min Read
Honnavar Accident

ಕಾರವಾರ: ಸ್ಕೂಟಿಗೆ (Scooty) ಕೆಎಸ್‌ಆರ್‌ಟಿಸಿ (KSRTC) ಬಸ್ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟಿಯಲ್ಲಿದ್ದ ತಾಯಿ-ಮಗಳು ಬಸ್ಸಿನಡಿಗೆ ಸಿಲುಕಿ ಸಾವು ಕಂಡ ಘಟನೆ ಉತ್ತರಕನ್ನಡ (Uttara Kannada) ಜಿಲ್ಲೆಯ ಹೊನ್ನಾವರದ ಮಂಕಿಯ ರಾಷ್ಟ್ರೀಯ ಹೆದ್ದಾರಿ 66ರ ಗುಳದಕೇರಿಯಲ್ಲಿ ನಡೆದಿದೆ.

ಸವಿತಾ ರಾಜು ಆಚಾರಿ (40) ಹಾಗೂ ಅಂಕಿತಾ ರಾಜು ಆಚಾರಿ (17) ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಮಂಕಿಯ ಜಾತ್ರೆ ಪೇಟೆಗೆ ತೆರಳಿ ವಾಪಾಸ್ಸಾಗುತ್ತಿದ್ದ ವೇಳೆ ಮಂಗಳೂರಿನಿಂದ ಬೆಳಗಾವಿಯತ್ತ ತೆರಳುತ್ತಿದ್ದ ಬಸ್, ಮಂಕಿಯಲ್ಲಿ ಸ್ಕೂಟಿಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಇದನ್ನೂ ಓದಿ: ರಾಡ್, ತಲ್ವಾರ್‌ನಿಂದ ಮಾರಣಾಂತಿಕ ಹಲ್ಲೆ – ಚಿಕಿತ್ಸೆ ಫಲಕಾರಿಯಾಗದೆ ಬಿಜೆಪಿ ಮುಖಂಡ ಸಾವು

ಅಪಘಾತವಾಗಿ ತೀವ್ರ ಗಾಯಗೊಂಡಿದ್ದ ತಾಯಿ ಹಾಗೂ ಮಗಳನ್ನು ಭಟ್ಕಳದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಸಾವು ಕಂಡಿದ್ದಾರೆ. ಘಟನೆ ಸಂಬಂಧ ಹೊನ್ನಾವರ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ರಷ್ಯಾ ಸೇನೆಯಲ್ಲಿ ಸಿಲುಕಿದ್ದಾರೆ 20 ಭಾರತೀಯರು – ವಾಪಸ್‌ ಕರೆತರಲು ಹರಸಾಹಸ

Share This Article