ಬೆಂಗಳೂರು: ನಾಡಿನ ಜನರಿಗೆ ಉತ್ತಮ ಆರೋಗ್ಯ ಸೇವೆ ಸಿಗಬೇಕು ಎಂಬ ನಿಟ್ಟಿನಲ್ಲಿ ಬಿಬಿಎಂಪಿ (BBMP) ಮಹತ್ವದ ಹೆಜ್ಜೆ ಇಟ್ಟಿದೆ. ಎಲ್ಲವೂ ಬಿಬಿಎಂಪಿ ಅಂದುಕೊಂಡಂತೆಯೇ ಆದರೆ ಬೆಂಗಳೂರಿನಲ್ಲಿ (Bengaluru) ಬಿಬಿಎಂಪಿಯಿಂದಲೇ ಮೆಡಿಕಲ್ ಕಾಲೇಜು (Medicle College) ಸ್ಥಾಪನೆಯಾಗಲಿದೆ.
2024ರ ಬಿಬಿಎಂಪಿ ಬಜೆಟ್‌ನಲ್ಲಿ ಮೆಡಿಕಲ್ ಕಾಲೇಜು ವಿಷಯ ಪ್ರಸ್ತಾಪವಾಗಿದ್ದು, ಇದರ ಡಿಪಿಆರ್ ಸಿದ್ಧಪಡಿಸಲು ಕ್ರಮಕೈಗೊಳ್ಳಲು ಬಿಬಿಎಂಪಿ ಮುಂದಾಗಿದೆ. ಇದನ್ನೂ ಓದಿ: BBMP Budget 2024: ಬಡವರ ಹಸಿವು ನೀಗಿಸಲು 50 ಹೊಸ ಇಂದಿರಾ ಕ್ಯಾಂಟೀನ್
- Advertisement -
- Advertisement -
ಮುಂಬೈ ಮಾದರಿ ಮೆಡಿಕಲ್ ಕಾಲೇಜು:
‘ಆರೋಗ್ಯಕರ ಬೆಂಗಳೂರು’ ಯೋಜನೆಯಡಿ ಈ ವಿಷಯವನ್ನು ಬಿಬಿಎಂಪಿ ಬಜೆಟ್‌ನಲ್ಲಿ ಮಂಡಿಸಲಾಗಿದೆ. ಈಗಾಗಲೇ ಬೃಹತ್ ಮುಂಬೈ ನಗರ ಪಾಲಿಕೆ ಅಡಿಯಲ್ಲಿ ವೈದ್ಯಕೀಯ ಮಹಾ ವಿದ್ಯಾಲಯ ನಡೆಯುತ್ತಿದೆ. ಹಲವಾರು ವರ್ಷಗಳಿಂದ ಉತ್ತಮ ಆರೋಗ್ಯ ಸೇವೆ ನೀಡುತ್ತಾ ಮುಂಬೈ ಪಾಲಿಕೆಯ ಮೆಡಿಕಲ್ ಕಾಲೇಜುಗಳು ಮೇಲ್ಪಂಕ್ತಿಯಲ್ಲಿವೆ. ಇದನ್ನೂ ಓದಿ: BBMP Budget 2024: ಪಾಲಿಕೆಯ ಶಾಲಾ/ಕಾಲೇಜು ವಿದ್ಯಾರ್ಥಿಗಳು, ಪೋಷಕರಿಗೆ ‘ಆಯುಷ್ಮಾನ್ ಭಾರತ್’ ವಿಮೆ!
- Advertisement -
ಅದೇ ಮಾದರಿಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಕೂಡಾ ಹೊಸದಾಗಿ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ ಡಿಪಿಆರ್ ಸಿದ್ಧಪಡಿಸಲು ಕ್ರಮಕೈಗೊಳ್ಳಲಾಗುವುದು ಎಂದು ಬಜೆಟ್‌ನಲ್ಲಿ ಘೋಷಿಸಲಾಗಿದೆ. ಇದನ್ನೂ ಓದಿ: BBMP Budget 2024: ಆಟದ ಮೈದಾನದ ಕೆಳಗೆ ಬರಲಿದೆ ಅಂಡರ್‌ಗ್ರೌಂಡ್ ಪಾರ್ಕಿಂಗ್!
- Advertisement -
ಬಿಎಂಸಿ ಮಾದರಿ ಏನು?
ಬೃಹನ್ಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಒಟ್ಟು 4 ಮೆಡಿಕಲ್ ಕಾಲೇಜು ಹಾಗೂ 1 ಡೆಂಟಲ್ ಕಾಲೇಜುಗಳನ್ನು ನಡೆಸುತ್ತಿದೆ. ಪ್ರತಿವರ್ಷ ಈ ಕಾಲೇಜುಗಳಲ್ಲಿ ಒಟ್ಟು 1,600 ವಿದ್ಯಾರ್ಥಿಗಳು ಸೇರ್ಪಡೆಯಾಗುತ್ತಿದ್ದಾರೆ. ಈ ಐದು ಮೆಡಿಕಲ್ ಕಾಲೇಜುಗಳಲ್ಲಿ ವರ್ಷಕ್ಕೆ ಸರಾಸರಿ 1.10 ಕೋಟಿ ಹೊರರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. ಇದನ್ನೂ ಓದಿ: BBMP Budget 2024: ಬೆಂಗಳೂರು ನಗರದಲ್ಲಿ ನಿರ್ಮಾಣವಾಗಲಿದೆ 2 ಸುರಂಗ ಮಾರ್ಗ