ಬೆಂಗಳೂರು: ಸೋಮವಾರ ನಡೆಯಲಿರುವ ರಾಜ್ಯಸಭೆ ಚುನಾವಣೆ (Rajya Sabha Election) ಕುತೂಹಲ ಕೆರಳಿಸಿದೆ. ಮೂರು ಪಕ್ಷಗಳು ನಂಬರ್ ಗೇಮ್ ರಾಜಕೀಯದಲ್ಲಿ ಮುಳುಗಿವೆ.
ಸುರಪುರ ಶಾಸಕ ರಾಜಾ ವೆಂಕಟಪ್ಪ ನಾಯಕ ನಿಧನದಿಂದ ಕಾಂಗ್ರೆಸ್ (Congress) ಸಂಖ್ಯಾಬಲ 134ಕ್ಕೆ ಕುಸಿದಿದೆ. ಜೊತೆಗೆ ಅಡ್ಡಮತದಾನದ (Cross Voting) ಭೀತಿಯೂ ಎದುರಾಗಿದೆ. ಹೀಗಾಗಿ ಕಾಂಗ್ರೆಸ್ ತನ್ನೆಲ್ಲಾ ಶಾಸಕರನ್ನು ಹೋಟೆಲ್ ಒಂದಕ್ಕೆ ಶಿಫ್ಟ್ ಮಾಡಿದ್ದು, ಸಭೆಗಳನ್ನು ನಡೆಸುತ್ತಿದೆ
ಇತ್ತ ಬಿಜೆಪಿ-ಜೆಡಿಎಸ್ (BJP-JDS) ಜಂಟಿಯಾಗಿ ಸಭೆ ನಡೆಸಿ ಐದನೇ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಗೆಲ್ಲಿಸಿಕೊಳ್ಳುವ ತಂತ್ರ ರೂಪಿಸಿದೆ. ಈ ಮಧ್ಯೆ ಜನಾರ್ದನ ರೆಡ್ಡಿ ಸಿಎಂ-ಡಿಸಿಎಂ ಅವರನ್ನು ಭೇಟಿ ಮಾಡಿದ್ದು, ಅವರು ಕಾಂಗ್ರೆಸ್ ಪರ ಮತ ಚಲಾಯಿಸಬಹುದು ಎಂದು ಹೇಳಲಾಗಿದೆ. ಇದಕ್ಕೆ ಪೂರಕವಾಗಿ ಡಿಕೆಶಿಯ ಆಪ್ತ ಯೋಗೇಂದ್ರ ಕೆಆರ್‌ಪಿಸಿ ಏಜೆಂಟ್ ಆಗಿ ನಿಯುಕ್ತಿಗೊಂಡಿದ್ದಾರೆ. ಇದನ್ನೂ ಓದಿ: ಗ್ಯಾರಂಟಿಯಿಂದ ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದಲ್ಲಿ ದುಡ್ಡಿಲ್ಲ: ಸ್ವಪಕ್ಷದ ವಿರುದ್ಧ ಶಾಸಕ ಅಲ್ಲಮಪ್ರಭು ಪಾಟೀಲ್ ಅಸಮಾಧಾನ
- Advertisement
- Advertisement
ವಿಧಾನಸಭೆ ಸಭಾಂಗಣದಲ್ಲಿ ಜಿಟಿ ದೇವೇಗೌಡರು ಸೇರಿ ಹಲವರ ಜೊತೆ ಡಿಕೆ ಶಿವಕುಮಾರ್ (DK Shivakumar) ಚರ್ಚೆ ನಡೆಸಿದ್ದಾರೆ. ಅಡ್ಡಮತದಾನದ ಭೀತಿ ನಡುವೆಯೂ ಕಾಂಗ್ರೆಸ್ ಸುಲಭ ಗೆಲುವಿನ ನಿರೀಕ್ಷೆಯಲ್ಲಿದೆ.
ಕುಪೇಂದ್ರ ರೆಡ್ಡಿ ವಿಶ್ವಾಸದ ಮತಗಳ ನಿರೀಕ್ಷೆಯಲ್ಲಿದ್ದಾರೆ. ಮತ್ತೊಂದು ಕಡೆ ಧಮ್ಕಿ ಆರೋಪಕ್ಕೆ ಸಂಬಂಧಿಸಿ ಮಾನಹಾನಿ ಕೇಸ್ ಹಾಕುತ್ತೇವೆ ಎಂಬ ಜೆಡಿಎಸ್‌ನ ಪುಟ್ಟರಾಜು ಮಾತಿಗೆ ಕಾಂಗ್ರೆಸ್‌ನ ಗಣಿಗ ರವಿ ಗರಂ ಆಗಿದ್ದಾರೆ. ಬೆಳಗ್ಗೆ 9 ಗಂಟೆಗೆ ಮತದಾನ ಆರಂಭ ಆಗಲಿದ್ದು, ಸಂಜೆ 4 ಗಂಟೆಗೆ ಮುಗಿಯಲಿದೆ. ನಂತರ ಮತ ಎಣಿಕೆ ನಡೆಯಲಿದೆ. ಇದನ್ನೂ ಓದಿ: ಪಾವಗಡ ಆಸ್ಪತ್ರೆಯಲ್ಲಿ ವಿವಿಧ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮೂವರು ಮಹಿಳೆಯರು ಸಾವು
ಕಾಂಗ್ರೆಸ್‌ನಿಂದ ಅಜಯ್ ಮಾಕೆನ್, ಜಿ.ಸಿ. ಚಂದ್ರಶೇಖರ್, ಡಾ| ನಾಸೀರ್ ಹುಸೇನ್, ಬಿಜೆಪಿಯ ನಾರಾಯಣಸಾ ಭಾಂಡಗೆ ಮತ್ತು ಜೆಡಿಎಸ್‌ನ ಕುಪೇಂದ್ರ ರೆಡ್ಡಿ ಕಣದಲ್ಲಿ ಇದ್ದಾರೆ.
ಕಾಂಗ್ರೆಸ್‌ನ ಎಲ್ಲ 134 ಶಾಸಕರ ಮತಗಳು ಚಲಾವಣೆಯಾದರೆ ಮೂವರು ಆತಂಕ ಇಲ್ಲದೇ ಜಯಗಳಿಸುತ್ತಾರೆ. ಒಂದು ವೇಳೆ ಅಡ್ಡ ಮತದಾನವಾದರೆ (Cross Vote) ಲೆಕ್ಕಾಚಾರ ಬುಡಮೇಲಾಗುತ್ತದೆ.
ಗೆಲುವಿಗೆ ಎಷ್ಟು ಮತಗಳು ಬೇಕು?
ಪ್ರತಿ ಅಭ್ಯರ್ಥಿ ಗೆಲ್ಲಲು 45 ಮತಗಳ ಅಗತ್ಯ ಇದೆ. ಕಾಂಗ್ರೆಸ್‌ನಲ್ಲಿ 134 ಶಾಸಕರಿದ್ದಾರೆ. ಈ ಶಾಸಕರ ಜೊತೆ ಪಕ್ಷೇತರ ಶಾಸಕರಾದ ಪುಟ್ಟಸ್ವಾಮಿಗೌಡ,ಪುಟ್ಟಣ್ಣಯ್ಯ,ಲತಾ, ಜನಾರ್ದನ ರೆಡ್ಡಿ ಮತ ಹಾಕಿದರೆ ಮೂವರು ರಾಜ್ಯಸಭೆಗೆ ಸುಲಭವಾಗಿ ಆಯ್ಕೆ ಆಗುತ್ತಾರೆ.
ಬಿಜೆಪಿಯಲ್ಲಿ 66 ಮತಗಳು ಇದ್ದರೆ ಜೆಡಿಎಸ್‌ನಲ್ಲಿ 19 ಮತಗಳು ಇದೆ. ಬಿಜೆಪಿ ಅಭ್ಯರ್ಥಿ ಬಾಂಡಗೆಗೆ ಬಿಜೆಪಿ 46 ಮತ ಹಾಕಲಿದೆ. ಕುಪೇಂದ್ರ ರೆಡ್ಡಿಗೆ ಬಿಜೆಪಿಯ ಹೆಚ್ಚುವರಿ 21 ಮತಗಳು ಹಾಗೂ ಜೆಡಿಎಸ್‌ನ 16 ಮತಗಳು ಚಲಾವಣೆಯಾದರೂ ಗೆಲುವಿಗೆ ಇನ್ನೂ 8 ಮತಗಳ ಅಗತ್ಯವಿದೆ. ಈ ಅಗತ್ಯ ಮತಗಳನ್ನು ಎಲ್ಲಿಂದ ಪಡೆಯುತ್ತಾರೆ ಎಂಬುದು ಈಗ ಸದ್ಯದ ಕುತೂಹಲ. ಈ ಕಾರಣಕ್ಕೆ ಜೆಡಿಎಸ್ ಕಾಂಗ್ರೆಸ್ ಮತಬುಟ್ಟಿಗೆ ಕೈ ಹಾಕುವ ಪ್ರಯತ್ನ ನಡೆಸುತ್ತಿದೆ.