ತನಿಷಾ ಜೊತೆಗಿನ ಸಿನಿಮಾ ಬಗ್ಗೆ ವರ್ತೂರು ಸಂತೋಷ್ ಪ್ರತಿಕ್ರಿಯೆ

Public TV
1 Min Read
tanisha

‘ಬಿಗ್ ಬಾಸ್ ಸೀಸನ್ 10’ರ (Bigg Boss kannada 10) ಬಳಿಕ ವರ್ತೂರು ಸಂತೋಷ್ (Varthur Santhosh) ಸಖತ್ ಬ್ಯುಸಿಯಾಗಿದ್ದಾರೆ. ಹಳ್ಳಿಕಾರ್ ರೇಸ್ ಸಿದ್ಧತೆಯಲ್ಲಿ ಸಂತೋಷ್ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ತನಿಷಾ (Tanisha Kuppanda) ಜೊತೆಗಿನ ಸಿನಿಮಾ ಮಾಡ್ತಾರಾ? ಮಾತುಕತೆ ಆಗಿದ್ಯಾ ಎಂಬುದರ ಬಗ್ಗೆ ಸಂತೋಷ್ ಪ್ರತಿಕ್ರಿಯೆ ನೀಡಿದ್ದಾರೆ.

varthur santhosh 1 2ವರ್ತೂರು ಸಂತೋಷ್ ಜೊತೆ ಸಿನಿಮಾ ಮಾಡ್ತೀನಿ. ಆ ಚಿತ್ರವನ್ನು ನಾನೇ ನಿರ್ಮಾಣ ಮಾಡ್ತೀನಿ ಅಂತ ತನಿಷಾ ಕುಪ್ಪಂಡ ಮಾಧ್ಯಮಕ್ಕೆ ಕೆಲ ದಿನಗಳ ಹಿಂದೆ ಮಾತನಾಡಿದ್ದರು. ಹಾಗಾಗಿ ತನಿಷಾ ಜೊತೆ ಸಿನಿಮಾ ಮಾಡ್ತೀರಾ ಎಂದು ವರ್ತೂರುಗೆ ಸಂದರ್ಶನವೊಂದರಲ್ಲಿ ಪ್ರಶ್ನೆ ಕೇಳಲಾಯಿತು.

Tanisha Kuppanda 5

ಸಿನಿಮಾ ಕುರಿತು ತನಿಷಾ ನನ್ನ ಜೊತೆ ಮಾತನಾಡಿಲ್ಲ. ಆದರೆ ಅವರು ಕೇಳೋದು ಹೆಚ್ಚಾ, ನಾನು ಮಾಡೋದು ಹೆಚ್ಚಾ ಎಂದಿದ್ದಾರೆ.  ಖಂಡಿತಾ ಅವರ ಜೊತೆ ಸಿನಿಮಾ ಮಾಡ್ತೀನಿ ಎಂದು ವರ್ತೂರು ಸಂತೋಷ್ ಮಾತನಾಡಿದ್ದಾರೆ. ಇದನ್ನೂ ಓದಿ:ಪ್ರಣಿತಾ ನಟನೆಯ ಮಲಯಾಳಂ ಚಿತ್ರದ ಲುಕ್ ರಿವೀಲ್

tanisha kuppanda 1

ಅಭಿಮಾನಿಗಳ ಆಸೆಯಂತೆ ‘ಹಳ್ಳಿಕಾರ್’ ಕುರಿತು ಸಿನಿಮಾ ಮಾಡುವ ಬಗ್ಗೆ ಮಾಹಿತಿ ನೀಡಿದ್ದಾರೆ. ಇದರ ಬಗ್ಗೆ ನಿರ್ಮಾಪಕರ ಜೊತೆ ಮಾತುಕತೆ ಆಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡೋದಾಗಿ ತಿಳಿಸಿದ್ದಾರೆ.

ನಿಮಗೆ ಜನರ ಬೆಂಬಲವಿದೆ. ರಾಜಕೀಯಕ್ಕೆ ಬರುತ್ತೀರಾ ಎಂದು ಸಂತೋಷ್‌ಗೆ ಪ್ರಶ್ನೆ ಎದುರಾಗಿದೆ. ಅದಕ್ಕೆ ಪ್ರತಿಕ್ರಿಯಿಸಿ, ನಾನು ರಾಜಕೀಯಕ್ಕೆ ಬರಲ್ಲ. ಯಾವುದೇ ಪಕ್ಷ, ಸಂಘದ ಜೊತೆ ಗುರುತಿಸಿಕೊಳ್ಳಲು ಇಷ್ಟವಿಲ್ಲ. ಜನರ ಸೇವೆ ಮಾಡಲು ರಾಜಕೀಯವೇ ಬೇಕೆಂದು ಇಲ್ಲ. ದೇವರ ಆಶೀರ್ವಾದ ಇದ್ದರೆ ಸಾಕು ಎಂದು ವರ್ತೂರು ಸಂತೋಷ್ ಹೇಳಿದ್ದಾರೆ.

Share This Article