ದೇಹದ ತೂಕ ಇಳಿಸಿಕೊಂಡು ಸ್ಲಿಮ್ ಆದ ಸಪ್ತಮಿ

Public TV
2 Min Read
sapthami

‘ಕಾಂತಾರ’ (Kantara) ಬೆಡಗಿ ಸಪ್ತಮಿ ಗೌಡ (Sapthami Gowda) ಸ್ಲಿಮ್ ಆಗಿದ್ದಾರೆ. ಆದರೆ ಏಕಾಏಕಿ ಈ ಫೋಟೊ ನೋಡಿದವರು ಇವರು ಲೀಲಾನೇನಾ? ಅಂತ ಅಚ್ಚರಿಪಡ್ತೀದ್ದಾರೆ. ಯಾಕೆ ಸ್ಲಿಮ್ ಆಗಿಬಿಟ್ಟಿದ್ದಾರೆ? ಮೊನ್ನೆ ಮೊನ್ನೆ ಚೆನ್ನಾಗಿದ್ದರಲ್ಲ. ಮೈ ಕೈ ತುಂಬಿಕೊಂಡು ನಗುತ್ತಿದ್ದರಲ್ಲ. ಹೀಗೆ ಒಂದಾ ಎರಡಾ ಕಾಮೆಂಟ್ಸ್? ಅವರಿಗೆಲ್ಲ ತಕ್ಕ ಉತ್ತರ ನೀಡಲು ಬಂದಿದ್ದಾರೆ ಕಾಡುಶಿವನ ಮಾಜಿ ಬೆಡಗಿ ಸಪ್ತಮಿ ಗೌಡ.

sapthami gowda 1 1

ಸಪ್ತಮಿ ಗೌಡ ಅವರು ‘ಕಾಂತಾರ’ (Kantara) ಸಿನಿಮಾ ಬರೋವರೆಗೂ ಇವರು ಯಾರೆಂದು ಗೊತ್ತಿರಲಿಲ್ಲ. ಅದಕ್ಕೂ ಮುನ್ನ ಒಂದೆರಡು ಸಿನಿಮಾದಲ್ಲಿ ನಟಿಸಿದ್ದರು. ಅದ್ಭುತ ಅಭಿನಯ ತೋರಿಸಿದ್ದರು. ಆದರೆ ಅವು ಹಿಟ್ ಆಗಿರಲಿಲ್ಲ. ಯಾವಾಗ ಕಾಂತಾರದಲ್ಲಿ ಕಾಡು ಶಿವನ ಜೊತೆ ಸಿಂಗಾರ ಸಿರಿಯೇ ಎಂದು ಹೆಜ್ಜೆ ಹಾಕಿದರೋ ಅಂದಿನಿಂದ ಸಪ್ತಮಿಗೆ ಫುಲ್ ಡಿಮ್ಯಾಂಡ್. ಸಪ್ತಮಿ ಕನ್ನಡಕ್ಕೆ ಮಾತ್ರ ಅಲ್ಲ ಇಡೀ ದೇಶಕ್ಕೆ ಗೊತ್ತಾದರು. ಈಗ ‘ಯುವ’ (Yuva) ಸಿನಿಮಾದಲ್ಲಿ ಯುವರಾಜ್‌ಕುಮಾರ್‌ಗೆ ನಾಯಕಿಯಾಗಿದ್ದಾರೆ. ಈ ಹೊತ್ತಲ್ಲೇ ದೇಹದ ತೂಕ ಇಳಿಸಿಕೊಂಡಿದ್ದಾರೆ. ಸ್ಲಿಮ್ ಅಂಡ್ ಟ್ರಿಮ್ ಆಗಿದ್ದಾರೆ. ಬಣ್ಣದ ಲೋಕದಲ್ಲಿ ಹೀಗಿದ್ದರೇ ತೂಕ ಜಾಸ್ತಿ ಎನ್ನುವುದನ್ನು ಈ ಹುಡುಗಿಯೂ ಪ್ರೂವ್ ಮಾಡಿದ್ದಾರೆ. ಇದನ್ನೂ ಓದಿ:ಗಾಸಿಪ್‌ಗೆಲ್ಲಾ ಬ್ರೇಕ್, ‘ಅನಿಮಲ್’ ಸಕ್ಸಸ್ ಬಗ್ಗೆ ರಶ್ಮಿಕಾ ಮಂದಣ್ಣ ಪ್ರತಿಕ್ರಿಯೆ

sapthami 1

‘ಕಾಂತಾರ’ ಸಿನಿಮಾದಲ್ಲಿ ಸಪ್ತಮಿ ಗೌಡ ದಪ್ಪಗಿದ್ದರು. ಅಫ್‌ಕೋರ್ಸ್ ಆ ಪಾತ್ರಕ್ಕೆ ಹಾಗೆ ಬೇಕಿತ್ತು. ಅದನ್ನೇ ಮಾಡಿದರು. ಆದರೆ ಆಮೇಲೆ ಅದು ಸಾಲಲ್ಲ ಎಂದು ಗೊತ್ತಾಯಿತು. ಅದಕ್ಕಾಗಿಯೇ ಜಿಮ್‌ನಲ್ಲಿ ಬೆವರು ಹರಿಸಿದ್ದಾರೆ. ನಿತ್ಯ ಇಂತಿಷ್ಟು ಗಂಟೆ ವ್ಯಾಯಾಮಕ್ಕೆ ಮೀಸಲಿಟ್ಟಿದ್ದಾರೆ. ನಾಲಿಗೆಗೆ ಕಡಿವಾಣ ಹಾಕಿದ್ದಾರೆ. ಎಣ್ಣೆ ಪದಾರ್ಥ ತ್ಯಜಿಸಿದ್ದಾರೆ. ಕೆಲವೇ ತಿಂಗಳಲ್ಲಿ ಸಪ್ತಮಿ ಗೌಡ ಇವರೇನಾ ಎನ್ನುವಷ್ಟು ಬದಲಾಗಿದ್ದಾರೆ. ಈಗಾಗಲೇ ಬಾಲಿವುಡ್‌ಗೆ ಹೋಗಿ ಬಂದಿದ್ದಾರೆ. ಬಹುಶಃ ತಮಿಳು ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಕನ್ನಡದ ಮತ್ತೊಂದು ಹುಡುಗಿ ಆಕಾಶದಲ್ಲಿ ಹಾರಾಡಲು ಸಜ್ಜಾಗಿದ್ದಾರೆ. ಸ್ಯಾಂಡಲ್‌ವುಡ್ ಬಾವುಟ ಪರಭಾಷೆಯಲ್ಲಿ ತೇಲಾಡಲು ಸಜ್ಜಾಗಿದೆ. ಹಾಗಾಗಿ ಡಯಟ್, ಜಿಮ್, ಫುಡ್ ಕಡೆ ಸಪ್ತಮಿ ನಿಗಾ ವಹಿಸುತ್ತಿದ್ದಾರೆ.

sapthami gowda

‘ಕಾಂತಾರ’ (Kantara) ಚಿತ್ರದ ಸಕ್ಸಸ್ ಅನ್ನು ನಟಿ ಸದುಪಯೋಗಪಡಿಸಿಕೊಂಡಿದ್ದಾರೆ. ಅದಷ್ಟೇ ಅಲ್ಲ, ಕನ್ನಡ ಕಿರುತೆರೆಯಲ್ಲೂ ಫುಲ್ ಡಿಮ್ಯಾಂಡ್ ಇದೆ. ಸತ್ಯ, ಅಮೃತಧಾರೆ, ಶ್ರೀರಸ್ತು ಶುಭಮಸ್ತು ಸೀರಿಯಲ್‌ಗಳಿಗೆ ಇತ್ತೀಚೆಗೆ ನಟಿ ಪ್ರಚಾರ ಮಾಡಿದ್ದರು.

ತೆಲುಗು ಅಂಗಳದಲ್ಲಿ ಮೊದಲೇ ಕನ್ನಡತಿಯರ ದರ್ಬಾರ್ ಜಾಸ್ತಿಯಾಗಿದೆ. ರಶ್ಮಿಕಾ ಮಂದಣ್ಣ, ಶ್ರೀಲೀಲಾ, ರುಕ್ಮಿಣಿ ವಸಂತ್ ಮಧ್ಯೆ ಸಪ್ತಮಿ ಕೂಡ ತಮ್ಮ ಚಾರ್ಮ್ ಉಳಿಸಿಕೊಂಡಿದ್ದಾರೆ.

Share This Article