ರಾಜ್ಯಕ್ಕೆ ಆದ ಅನ್ಯಾಯ ಕೇಳಿದ್ರೆ ಗುಂಡಿಕ್ಕಿ ಅಂತಾರೆ, ನಾಡಿಗೋಸ್ಕರ ನನ್ನ ದೇಹ ಕೊಡಲು ಸಿದ್ಧ: ಡಿ.ಕೆ.ಸುರೇಶ್

Public TV
2 Min Read
d.k.suresh

ರಾಮನಗರ: ಲೋಕಸಭಾ ಚುನಾವಣೆ ಸಮೀಪ ಹಿನ್ನೆಲೆ ಸಿದ್ಧತೆ ಆರಂಭಿಸಿರುವ ಕಾಂಗ್ರೆಸ್, ಗ್ಯಾರಂಟಿ ಸಮಾವೇಶದ ಮೂಲಕ ಮತಬೇಟೆಗೆ ಮುಂದಾಗಿದೆ. ಇಂದು (ಭಾನುವಾರ) ಬಿಡದಿ ಹೋಬಳಿಯ ಅವರಗೆರೆ ಗ್ರಾಮದಲ್ಲಿ ನಡೆದ ಗೃಹಲಕ್ಷ್ಮಿ ಸಮಾವೇಶದಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್, ಸಂಸದ ಡಿ.ಕೆ.ಸುರೇಶ್ (D.K.Suresh) ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ವಾಕ್ ಪ್ರಹಾರ ನಡೆಸಿದ್ದಾರೆ.

ಸಮಾವೇಶದಲ್ಲಿ ಮಾತನಾಡಿದ ಸಂಸದ ಡಿ.ಕೆ.ಸುರೇಶ್, ಇವತ್ತು ಬಿಜೆಪಿಯವ್ರು ನನ್ನನ್ನ ರಾಷ್ಟ್ರದ್ರೋಹಿ ಅಂದ್ರು. ನನ್ನನ್ನ ಗುಂಡಿಕ್ಕಿ ಕೊಲ್ಲಿ ಅಂದ್ರು. ನಾನು ನನ್ನ ಸ್ವಂತಕ್ಕೆ ಏನನ್ನು ಕೇಳಲಿಲ್ಲ. ಕರ್ನಾಟಕದ ರೈತರಿಗೆ, ಮಹಿಳೆಯರಿಗೆ, ಜನರ ಹಣವನ್ನ ಕೇಳಿದ್ದೇನೆ. ವರ್ಷಕ್ಕೆ ಪ್ರತಿಯೊಂದು ಕುಟುಂಬ 13 ಸಾವಿರ ರೂ. ತೆರಿಗೆ ಕಟ್ತಿದೆ. ಆದ್ರೂ ನಮಗೆ ಸಿಗಬೇಕಾದ ಅನುದಾನ ಸಿಗ್ತಿಲ್ಲ. ನಮ್ಮ 4.30 ಲಕ್ಷ ಕೋಟಿ ಹಣ ತೆರಿಗೆ ನಮಗೆ ಬರಬೇಕು. ಆದ್ರೆ ಬಿಜೆಪಿ ಸರ್ಕಾರ ಅನ್ಯಾಯ ಮಾಡ್ತಿದೆ ಎಂದು ಗುಡುಗಿದ್ದಾರೆ. ಇದನ್ನೂ ಓದಿ: ಕರಂದ್ಲಾಜೆ ಕಳೆದ ಬಾರಿಯ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ : ಬಿಎಸ್‌ವೈ ಭವಿಷ್ಯ

K.S Eshwarappa

ಅನ್ಯಾಯವನ್ನ ಪ್ರಶ್ನಿಸಿದ್ದಕ್ಕೆ ಈಶ್ವರಪ್ಪ ನನ್ನನ್ನ ಗುಂಡಿಕ್ಕಿ ಕೊಲ್ಲಿ ಅಂತಾರೆ. ಅವ್ರು ಬೆಂಗಳೂರು ಕಡೆಗೆ ಬರಲಿ ನಾನೇ ಅವರನ್ನ ಮೀಟ್ ಮಾಡ್ತೀನಿ. ಕನ್ನಡಿಗರಿಗೋಸ್ಕರ ನನ್ನ ದೇಹವನ್ನೇ ಕೊಡ್ತೀನಿ ಎಂದು ಡಿ.ಕೆ.ಸುರೇಶ್‌ ವಾಗ್ದಾಳಿ ನಡೆಸಿದ್ದಾರೆ.

ಕುಮಾರಸ್ವಾಮಿ ಸುಮ್ನೆ ರೀಲ್ ಬಿಡ್ತಾವ್ನೆ. ನಾನು ಕಲ್ಲು ಹೊಡಿತಿದ್ನೋ, ಅವನು ಕಸ ಹೊಡಿತಿದ್ನೋ ಎಂಬುದನ್ನ ಮುಂದೆ ಮಾತನಾಡ್ತೀನಿ. ಅವನು ಡಬ್ಬಾ ಮಾಡಿಕೊಂಡು ನಮ್ಮತ್ರ ಬರುವವನು. ನಾವು ರೀಲ್ ಬಿಟ್ಟು ಬಂದಿರುವವರು ಎಂದು ಹೆಚ್ಡಿಕೆಗೆ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ವಿದೇಶಾಂಗ ಸಚಿವ ಜೈಶಂಕರ್ ಫೆ.28ಕ್ಕೆ ಹುಬ್ಬಳ್ಳಿಗೆ ಆಗಮನ

ದೇಶಕ್ಕೆ ಮೋದಿ ಗ್ಯಾರಂಟಿ ಅಂತಾರೆ. ಆದರೆ ಬೆಂಗಳೂರು ಗ್ರಾಮಾಂತರಕ್ಕೆ ಡಿ.ಕೆ.ಸುರೇಶ್ ಗ್ಯಾರಂಟಿ. ನಾವು ನಮ್ಮ ಅನುದಾನ ಕೇಳಿದ್ರೆ ಜನಸಂಖ್ಯೆ ಕಡಿಮೆ ಅಂತಾರೆ. ನಾವು ಮಕ್ಕಳು ಕಡಿಮೆ‌ ಮಾಡಿಕೊಂಡಿದ್ದೆ ತಪ್ಪಾ? ನಾವು ಜನಸಂಖ್ಯೆ ನಿಯಂತ್ರಣ ಮಾಡಿದ್ದೇ ತಪ್ಪಾ? ಉತ್ತರ ಪ್ರದೇಶದಲ್ಲಿ ಹೆಚ್ಚು ಮಕ್ಕಳು ಮಾಡವ್ರೆ ಅಂತ ನಮ್ಮ ದುಡ್ಡನ್ನ ಅಲ್ಲಿಗೆ ಕೊಡ್ತೀರಾ? ಇದರ ವಿರುದ್ಧ ರಾಜ್ಯದ ಜನ ಧ್ವನಿ ಎತ್ತಬೇಕು ಎಂದು ಕರೆ ನೀಡಿದ್ದಾರೆ.

Share This Article