ಸುರಪುರ ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ ಹೃದಯಾಘಾತದಿಂದ ನಿಧನ

Public TV
1 Min Read
Raja Venkatappa Naik

ಯಾದಗಿರಿ: ಜಿಲ್ಲೆಯ ಸುರಪುರ (Shorapur) ಕಾಂಗ್ರೆಸ್‌ ಶಾಸಕ ರಾಜಾ ವೆಂಕಟಪ್ಪ ನಾಯಕ (Raja Venkatappa) (67) ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಶಾಸಕ ಕೊನೆಯುಸಿರೆಳೆದಿದ್ದಾರೆ. ರಾಜಾ ವೆಂಕಟಪ್ಪ ನಾಯಕ ಅವರು ಮೊನ್ನೆಯಷ್ಟೇ ಉಗ್ರಾಣ ನಿಗಮದ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ್ದರು. ಇದನ್ನೂ ಓದಿ: ಕರಂದ್ಲಾಜೆ ಕಳೆದ ಬಾರಿಯ ಮತಗಳಿಗಿಂತ ಹೆಚ್ಚಿನ ಅಂತರದಿಂದ ಗೆಲ್ಲುತ್ತಾರೆ : ಬಿಎಸ್‌ವೈ ಭವಿಷ್ಯ

Raja Venkatappa Naik 1 scaled

10 ದಿನದ ಹಿಂದೆ ಲಿವರ್ ಸಮಸ್ಯೆಯಿಂದಾಗಿ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. 4 ದಿನದ ಹಿಂದೆ ಐಸಿಯುನಿಂದ ವಾರ್ಡ್‌ಗೆ ಶಿಫ್ಟ್ ಮಾಡಲಾಗಿತ್ತು. ರಾಜ್ಯಸಭಾ ಚುನಾವಣೆಗೆ ಮತ ಹಾಕಲು 3 ದಿನದ ಮೊದಲೇ ಪ್ರೊಸಿಡಿಂಗ್ ಮಾಡಬೇಕಿತ್ತು. ನಿನ್ನೆಯಷ್ಟೆ ಆಸ್ಪತ್ರೆಯಲ್ಲಿ ಕಾಂಗ್ರೆಸ್‌ ನಾಯಕರು ಪ್ರೊಸಿಡಿಂಗ್ ಮುಗಿಸಿದ್ದರು. ಅಂಬುಲೆನ್ಸ್‌ನಲ್ಲಿ ಕರೆತಂದು ಅವರ ಜೊತೆ ಅವರ ಪುತ್ರ ಮತದಾನದಲ್ಲಿ ಭಾಗವಹಿಸಲು ಅನುಮತಿ ಪಡೆಯಲಾಗಿತ್ತು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕುಟುಂಬಕ್ಕೆ ಆಪ್ತರಾಗಿದ್ದ ರಾಜಾ ವೆಂಕಟಪ್ಪ ನಾಯಕ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. ಕಾಂಗ್ರೆಸ್ ಪಕ್ಷದಿಂದಲೇ ರಾಜಕೀಯ ಜೀವನ ಆರಂಭಿಸಿದ್ದರು. ಇದನ್ನೂ ಓದಿ: ದೇವಾಲಯದ ಹಣ ಸರ್ಕಾರದ ಒಳ್ಳೆಯ ಕೆಲಸಕ್ಕೆ ಉಪಯೋಗವಾಗುತ್ತಿದೆ: ಬಿಜೆಪಿ ವಿರುದ್ಧ ಅರ್ಚಕರ ಸಂಘ ಕಿಡಿ

ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರವಾದ ಸುರಪುರದಿಂದ ಒಟ್ಟು 7 ಬಾರಿ ಚುನಾವಣೆಗೆ ಸ್ಪರ್ಧೆ ಮಾಡಿದ್ದ ರಾಜಾ ವೆಂಕಟಪ್ಪ ನಾಯಕ 4 ಬಾರಿ ಗೆಲುವು ಕಂಡಿದ್ರೆ, 3 ಬಾರಿ ಪರಾಭವಗೊಂಡಿದ್ದರು (1994, 1999, 2013, 2023 ಗೆಲುವು) (2004, 2008, 2018 ಸೋಲು).

 

Share This Article