– ಮೋದಿ ಸರ್ಕಾರ ದಿವಾಳಿ ಆಗಿಲ್ಲ
ಕಾರವಾರ: ಸಿದ್ದರಾಮುಲ್ಲ ಖಾನ್ ಗೆ ಸರ್ಕಾರದ ನೌಕರರಿಗೆ ಸಂಬಳ ಕೊಡಲು ಹಣವಿಲ್ಲ, ಅಭಿವೃದ್ಧಿಗೆ ಹಾಗೂ ಶಾಸಕರಿಗೆ ಕೊಡಲು ಪಗಾರ ಇಲ್ಲ ಅಂತಾರೆ. ಹಿಂದುಳಿದವರಿಗೆ ಕೊಟ್ಟ 11 ಸಾವಿರ ಕೋಟಿ ನಾಪತ್ತೆಯಾಗಿಬಿಟ್ಟಿದೆ. ರಾಜ್ಯ ಸರ್ಕಾರ ದಿವಾಳಿಯಾಗಿಬಿಟ್ಟಿದೆ. ಸಿದ್ದರಾಮಯ್ಯನ ಸರ್ಕಾರದ ತರ ಮೋದಿ ಸರ್ಕಾರ ದಿವಾಳಿ ಆಗಿಲ್ಲ ಎಂದು ಸಂಸದ ಅನಂತ್ ಕುಮಾರ್ ಹೆಗಡೆ (Ananth Kumar Hegde) ಕಿಡಿಕಾರಿದ್ದಾರೆ.
ಇದೊಂದು ಹೇಸಿಗೆ ಸರ್ಕಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಮುಂಡಗೋಡಿನಲ್ಲಿ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯವನ್ನು ಲೂಟಿ ಹೊಡೆದು ದಿವಾಳಿ ಮಾಡಿ ವೋಟು ತಗೋಬೇಕು ಎಂದು ಕಾಂಗ್ರೆಸ್ ನವರು (Congress) ಹೊರಟಿದ್ದಾರೆ. ಇಷ್ಟು ಹೇಸಿಗೆ ಸರ್ಕಾರ ನಾನೆಲ್ಲೂ ನೋಡಿಲ್ಲ, ಇಷ್ಟು ದರಿದ್ರ ಸರ್ಕಾರ ನೋಡಿಲ್ಲ. ನಮಗೆ ಕೇಂದ್ರ ಸರ್ಕಾರ ಟ್ಯಾಕ್ಸ್ ಹಣ ಕೊಟ್ಟಿಲ್ಲ ಅಂತಾರೆ. ತಮಿಳುನಾಡು, ಆಂಧ್ರ, ಕೇರಳಕ್ಕೆ ಇರದ ವೇದನೆ ಇವರಿಗೇಕೆ? ಅವರು ಕೇಳಬಹುದಿತ್ತಲ್ಲ. ಅನ್ಯಾಯ ಮಾಡಿದ್ರೆ ಅವರಿಗೂ ಬಿಜೆಪಿಯವರಲ್ಲ (BJP) ಎಂದು ಮೋದಿಯವರು ಅವರಿಗೂ ಹಣ ಕೊಡದೇ ಕಳುಹಿಸಬಹಿದಿತ್ತು. ಅವರಿಗ್ಯಾಕೆ ಎಲ್ಲಾ ಸರಿಯಾಗುತ್ತಿದೆ. ನಮ್ಮ ಸಿದ್ದರಾಮುಲ್ಲಾ ಖಾನ್‍ಗೆ ಏಕೆ ಈ ತೊಂದರೆ? ಹೆತ್ತವರಿಗೆ ಹೆರಿಗೆ ಬೇನೆ ಗ್ಯಾರಂಟಿ ಆದ್ರೆ ಈ ಸಿದ್ದರಾಮಯ್ಯನಿಗೆ (Siddaramaiah) ಏಕೆ ಎಂದು ಪ್ರಶ್ನಿಸಿದರು.
ನಾವು ಕೊಟ್ಟ ಹಣಕ್ಕೆ ಲೆಕ್ಕ ಕೊಡಿ: ಈ ಮನುಷ್ಯನಿಗೆ ದುರಹಂಕಾರ, ದುರಹಂಕಾರಕ್ಕೋಸ್ಕರ ಯಾವ ಫೈಲ್ ಸಹ ಚೀಟಿ ಬರೆಯುತ್ತಾನೆ. ಓಸಿ ಚೀಟಿ ಬರೆದಂತೆ ಬರೆಯುತ್ತಾನೆ. ಓಸಿ ಚೀಟಿಗಾದರೂ ಬೆಲೆ ಇರುತ್ತದೆ. ಒಂದುರುಪಾಯಿ ಕೊಟ್ರೆ 80 ರೂ. ಕೊಡ್ತಾರೆ. ಸಿದ್ದರಾಮಯ್ಯನವರು ಬರೆದಂತ ಲೆಟರ್ ಗೆ ಎಷ್ಟು ದುರಂಕಾರದ ಸಹಿ ಹಾಕುತ್ತಾರೆ ಎಂದರೇ ಆ ಲೆಟರ್ ಕೂಡ ನೋಡಬಾರದು ಎಂದನಿಸುತ್ತದೆ. ಅಷ್ಟರಮಟ್ಟಿಗೆ ದುರಹಂಕಾರ. ನಿಮ್ಮಪ್ಪನದ್ದ ಆಸ್ತಿ ನಾವು ಕೊಟ್ಟಿರೋ ಸಾವಿರಾರು ಕೋಟಿ ದುಡ್ಡಿಗೆ ಲೆಕ್ಕ ಕೊಡಿ, ಆಮೇಲೆ ಮುಂದಿನದ್ದು ಕೊಡ್ತೀವಿ. ಈ ದೇಶದಲ್ಲಿ ತೆರಿಗೆ ಕಟ್ಟುವವರು 99% ಜನ ಹಿಂದೂಗಳು, ನಮ್ಮ ಹಾಳುಬಿದ್ದ ದೇವಸ್ಥಾನ ಸರಿಪಡಿಸಲು ಹಣ ನೀಡುವುದಿಲ್ಲ, ನಮ್ಮ ದುಡ್ಡು ತೆಗೆದುಕೊಂಡು ಹೋಗಿ ಮಸೀದಿಗೆ, ಚರ್ಚಿಗೆ ಯಾಕೆ ಕೊಟ್ರಿ?. ಇದನ್ನು ನಾವು ನಾಳೆ ಕೇಳಬೇಕಾ ಬೇಡ್ವಾ..? ಎಂದು ವಾಗ್ದಾಳಿ ನಡೆಸಿದರು.
ದೇವಸ್ಥಾನಗಳು ಹಾಳು ಬಿದ್ದಿವೆ: ನಮ್ಮ ತೆರಿಗೆ (Tax) ಹಣ ನಮಗೆ ಕೊಡಿ. ನಮ್ಮ ದೇವಸ್ಥಾನ ಹಾಳು ಬಿದ್ದಿದೆ. ಮಸೀದಿಗೆ ದುಡ್ಡು ಕೊಡ್ತೀರಾ, ಅಲ್ಪಸಂಖ್ಯಾತರ ತೃಷ್ಟಿಕರಣಕ್ಕೆ ದುಡ್ಡು ಕೊಡ್ತೀರಾ, ನಮ್ಮ ದೇವರು ಏನು ಅಪರಾಧ ಮಾಡಿದ್ದಾನೆ. ನಮ್ಮ ಹಿಂದೂಗಳು ಕೊಟ್ಟಿರುವ ಟ್ಯಾಕ್ಸ್ ಇದು. ನಾವು ಕೊಟ್ಟಿರೋ ತೆರಿಗೆ ಮೇಲೆ ಸರ್ಕಾರ ನಡೀತಿದೆ. ನಾವು ಹಿಂದೂಗಳ ತೆರಿಗೆ ಹಿಂದೂಗಳ ಹಕ್ಕು ಅಂತ ಕುಳಿತುಕೊಂಡರೇ ಪರಿಸ್ಥಿತಿ ಏನಾಗುತ್ತೆ? ನಾವು ಸಣ್ಣ ಬುದ್ಧಿ ಮಾಡುವುದಿಲ್ಲ. ಯಾರಿಗೆ ಬೇಕಾದ್ರೂ ಕೊಡಲಿ. ಆದರೆ ಹಿಂದೂಗಳ ಸಮಾಜ ಬೇವರ್ಸಿ ಸಮಾಜವೇ? ಯಾರೂ ಹೇಳೋರು ಕೇಳೋರು ಇಲ್ಲದ ಸಮಾಜವಾ ಇದು. ದಯವಿಟ್ಟು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಸಂಸದರು ಗರಂ ಆಗಿದ್ದಾರೆ.
ಎಲ್ಲಾದರೂ ಮೋದಿ ಹೆಸರು ಇಟ್ಟಿದ್ದೀರಾ..?: ಕಾಂಗ್ರೆಸ್ ಮಾಡಿದ ಅಪಪ್ರಚಾರ ಇದು. ಪ್ರಚಾರ ಯಾವತ್ತೂ ಕಾಂಗ್ರೆಸ್ ಮಾಡಿಲ್ಲ, ಸ್ವಾತಂತ್ರ ಬಂದ ನಂತರ ಎಲ್ಲಾ ರಸ್ತೆಗಳು, ಸರ್ಕಲ್, ಯೋಜನೆಗಳು ಗಾಂಧಿ ಹೆಸರುಗಳೇ ಇಟ್ಟಿದ್ದಾರೆ. ಅಪ್ಪ ಗಾಂಧಿ, ಮಗ ಗಾಂಧಿ, ಅಜ್ಜ ಗಾಂಧಿ, ಮೊಮ್ಮಗ ಗಾಂಧಿ ಎಲ್ಲಾ ಗಾಂಧಿ ಹೆಸರುಗಳೇ. ಮೋದಿಯವರು (Narendra Modi) ಎಲ್ಲಿಯಾದರೂ ಒಂದು ಹೆಸರು ಇಟ್ಟುಕೊಂಡಿದ್ದಾರಾ..? ನಮಗೆ ಕೆಲಸ ಮಾಡುವುದು ಮಾತ್ರ ಬೇಕು. ಅವರಿಗೆ ಹೆಸರು ಮಾತ್ರ ಬೇಕು. ಬ್ರಾಂಡ್ ಬ್ರಾಂಡ್ ನೋಡೇ ವೋಟು ಹಾಕಬೇಕು, ಅಪಪ್ರಚಾರ ಮಾಡುತ್ತಾ ದೇಶವನ್ನು ಲೂಟಿ ಹೊಡೆದ ಕುಟುಂಬವನ್ನೇ ಎಲ್ಲಾಕಡೆ ಇಟ್ಟುಕೊಂಡು ತಿರುಗುತ್ತಾರಲ್ಲ ಅವರಿಗೇ ಧೈರ್ಯ ಇರಬೇಕಾದರೇ ಎದೆಹಾಲು ಕುಡಿದ ನಮಗೆ ಬಾಟ್ಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಕಾಟನಿಕ್ ಆಗಿ ಕುಸ್ತಿಗೆ ಬರುವವರಿಗೆ ಅಮ್ಮನ ಎದೆಹಾಲು ಕುಡಿದವರಿಗೆ ಎಷ್ಟು ಧೈರ್ಯ ಇರಬಾರದು,ಬಾಟ್ಲಿ ಹಾಲು ಕುಡಿದುಕೊಂಡು ಇಷ್ಟೆಲ್ಲಾ ಗಲಾಟೆ ಮಾಡ್ತಾರೆ ಎಂದು ಕಾಂಗ್ರೆಸ್ ವಿರುದ್ಧ ಗುಡುಗಿದರು.