ನಿರ್ಮಾಪಕ ಉಮಾಪತಿ ಅವರಿಗೆ ನಟ ದರ್ಶನ್ (Darshan) ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಕನ್ನಡ ಪರ ಸಂಘಟನೆಯ ಕನ್ನಡ ಶಫಿ ಎನ್ನುವವರು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chambe) ದೂರು ನೀಡಿದ್ದರು. ದರ್ಶನ್ ಮೇಲೆ ಶಿಸ್ತು ಕ್ರಮ ತೆಗೆದುಕೊಳ್ಳಬೇಕು ಎಂದು ದೂರಿನಲ್ಲಿ ಉಲ್ಲೇಖಿಸಿದ್ದರು. ಇದೀಗ ಶಫಿ ಉಲ್ಟಾ ಹೊಡೆದಿದ್ದಾರೆ.
ಮೊನ್ನೆಯಷ್ಟೇ ದೂರು (Complaint) ನೀಡಿದ್ದ ಕನ್ನಡ ಶಫಿ (Kannada Shafi), ಇದೀಗ ದರ್ಶನ್ ಮತ್ತು ಅವರ ಅಭಿಮಾನಿಗಳಿಗೆ ಕ್ಷಮೆ ಕೇಳಿ ದೂರು ವಾಪಸ್ಸು ಪಡೆದುಕೊಳ್ಳುವುದಾಗಿ ತಿಳಿಸಿದ್ದಾರೆ. ದರ್ಶನ್ ಅವರನ್ನು ಶಫಿ ಬಾಯಿಗೆ ಬಂದಂತೆ ಬೈದಿದ್ದರು. ಆ ವಿಡಿಯೋ ವೈರಲ್ ಕೂಡ ಆಗಿತ್ತು. ಇದೀಗ ಆ ಕುರಿತಂತೆಯೂ ಶಫಿ ಕ್ಷಮೆ ಕೇಳಿದ್ದಾರೆ.
ಚಲನಚಿತ್ರ ವಾಣಿಜ್ಯ ಮಂಡಳಿಗೆ ದೂರು ನೀಡಿದ್ದಕ್ಕಾಗಿ ನಾನು ಕ್ಷಮೆ ಕೇಳುತ್ತೇನೆ. ದೂರು ನೀಡಿದ ಬಗ್ಗೆ ಕ್ಷಮೆ ಕೇಳುವುದಷ್ಟೇ ಅಲ್ಲ, ದೂರು ಹಿಂಪಡೆಯುವುದಾಗಿಯೂ ಕನ್ನಡ ಪ್ರಜಾಪರ ವೇದಿಕೆ ಕನ್ನಡ ಶಫಿ ವಿಡಿಯೋ ಮೂಲಕ ಹೇಳಿದ್ದಾರೆ. ಬೇರೆ ಸಂಘಟನೆಯವರು ಹಾಗೂ ನಾವು ಸೇರಿ ಆತುರದಿಂದ ನಿರ್ಧಾರ ಕೈಗೊಂಡೆವು. ಇದರಿಂದ ಹಿರಿಯ ನಟರ ಮನಸ್ಸಿಗೆ ನೋವಾಗಿದೆ. ಎಲ್ಲಾ ಕನ್ನಡ ಮನಸ್ಸುಗಳಿಗೂ ಕ್ಷಮೆ ಕೇಳುತ್ತೇನೆ ಎಂದಿದ್ದಾರೆ ಶಫಿ.