ಸುಮಲತಾ ಅವರಷ್ಟು ಬುದ್ಧಿವಂತ ನಾನಲ್ಲ: ಚಲುವರಾಯಸ್ವಾಮಿ ಟಾಂಗ್

Public TV
1 Min Read
chaluvarayaswamy e1561785948532

ಮಂಡ್ಯ: ಸಂಸದೆ ಸುಮಲತಾ ಅಂಬರೀಶ್‌ (Sumalatha Ambareesh) ಅವರಷ್ಟು ಬುದ್ಧಿವಂತ ನಾನಲ್ಲ. ಅವರು ತುಂಬಾ ಬುದ್ಧಿವಂತರು ಎನ್ನುವ ಮೂಲಕ ಚಲುವರಾಯಸ್ವಾಮಿ (Chaluvarayaswamy) ಟಾಂಗ್ ನೀಡಿದ್ದಾರೆ.

ಚಲುವಣ್ಣ ನಾಟಿಯನ್ನು ಅಡುಗೆಯಲ್ಲಿ ಇಟ್ಟುಕೊಳ್ಳಬೇಕೆಂಬ ಸುಮಲತಾ ಹೇಳಿಕೆ ವಿಚಾರವಾಗಿ ಮಂಡ್ಯದಲ್ಲಿ (Mandya) ಪ್ರತಿಕ್ರಿಯೆ ನೀಡಿದ ಅವರು, ನಾನು ನಮ್ಮ ಜಿಲ್ಲೆಯ, ಮಣ್ಣಿನ ಒಬ್ಬರನ್ನು ಅಭ್ಯರ್ಥಿ ಮಾಡುತ್ತೇವೆ ಎಂದಿದ್ದೆ. ಅದಕ್ಕೆ ಸುಮಲತಾ ಅವರು ಏನು ವಿವರಣೆ ಕೊಡುತ್ತಾರೆ ಕೊಡಲಿ. ಅವರು ಸಂಸದರು, ರಾಷ್ಟ್ರೀಯ ಪಕ್ಷದಲ್ಲಿ ಟಿಕೆಟ್‌ಗೆ ಫೈಟ್ ಮಾಡುತ್ತಿದ್ದಾರೆ ಒಳ್ಳೆಯದಾಗಲಿ ಎಂದರು. ಇದನ್ನೂ ಓದಿ: ಹ್ಯಾರಿಸ್‍ಗೆ ಸಂಕಷ್ಟ – ಚುನಾವಣಾ ತಕರಾರು ಅರ್ಜಿ ವಿಚಾರಣೆಗೆ ಹೈಕೋರ್ಟ್ ಅಸ್ತು

ಇನ್ನೂ ಪಾರ್ಲಿಮೆಂಟ್‌ಗೆ (Parliament) ಯಾರು ಯಾವಾಗ ಸೂಟ್ ಹಾಕುತ್ತಾರೆ ಎಂದು ನಿರ್ಧಾರ ಮಾಡೋದು ಜನ. ನಾನು, ಸುಮಲತಾ, ಕುಮಾರಸ್ವಾಮಿ ಒಬ್ಬರ ಹೆಸರನ್ನು ಬರೆದು ಘೋಷಣೆ ಮಾಡುವ ಕಾಲ ಅಲ್ಲ. ಇದು ಪ್ರಜಾಪ್ರಭುತ್ವದ ಕಾಲ. ಈ ಜಿಲ್ಲೆಯ ಜನರೇ ತೀರ್ಮಾನ ಮಾಡಬೇಕಾಗಿದೆ. ಪಾರ್ಲಿಮೆಂಟ್ ಸ್ಟ್ರಾಂಗ್ ಇದ್ದವರು ಹೋಗಬೇಕೆಂದು ಅವರು ಹೇಳಿದ್ದಾರೆ. ಯಾರು ಯಾವ ಕಾಲದಲ್ಲಿ ಪಾರ್ಲಿಮೆಂಟ್‌ಗೆ ಹೋಗಿ ಸ್ಟ್ರಾಂಗ್ ಆಗಿದ್ದಾರೆ ಎಂಬ ಇತಿಹಾಸ ಗೊತ್ತಿದೆ. ಜನರು ಯಾರು ಹೋಗಬೇಕೆಂದು ತೀರ್ಮಾನ ಮಾಡುತ್ತಾರೆ. ಜನರು ತೀರ್ಮಾನ ಮಾಡುವವರೆಗೆ ತಡೆದುಕೊಂಡು ಇರಬೇಕು ಎಂದು ಹೇಳಿದರು. ಇದನ್ನೂ ಓದಿ: ಗಮನಿಸಿ: ಬೆಂಗಳೂರಿನಲ್ಲಿ 2 ದಿನ ನೀರು ಪೂರೈಕೆ ಇರಲ್ಲ

Share This Article