ಶಿವಮೊಗ್ಗ: ಮನೆಯಲ್ಲಿ ಕೆಲಸಕ್ಕೆ (Job) ಹೋಗು ಎಂದಿದ್ದಕ್ಕೆ ಯುವಕ (Youth) ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಶಿವಮೊಗ್ಗ (Shivamogga) ಜಿಲ್ಲೆಯ ಭದ್ರಾವತಿ (Bhadravathi) ತಾಲೂಕಿನ ಹಳೆ ಕೋಡಿಹಳ್ಳಿಯಲ್ಲಿ ನಡೆದಿದೆ.
ಸಾಗರ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆಲಸಕ್ಕೆ ಹೋಗು ಎಂದು ಮನೆಯವರು ಹೇಳಿದ್ದಕ್ಕೆ ಮನನೊಂದು ಯುವಕ ಫೆಬ್ರವರಿ 19ರಂದು ಜ್ಯೂಸ್‌ಗೆ ಇಲಿಪಾಷಾಣ ಬೆರಸಿಕೊಂಡು ಕುಡಿದು ಆತ್ಮಹತ್ಯೆಗೆ (Suicide) ಯತ್ನಿಸಿದ್ದ. ಇದನ್ನೂ ಓದಿ: ನಾದಿನಿಯ ಮೇಲೆ ಕಣ್ಣಾಕಿ ಹೆಣವಾದ ಬಾವ – ಸಿನಿಮೀಯ ಶೈಲಿಯಲ್ಲಿ ಅಪಹರಿಸಿ ಬರ್ಬರ ಕೊಲೆ
ವಿಷಯ ತಿಳಿದ ಕೂಡಲೇ ಯುವಕನ ಪೋಷಕರು ಆತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೇ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ. ಇದನ್ನೂ ಓದಿ: ಪ್ರೀತಿಸಿ ಮದುವೆಯಾದವ್ಳು ಪರಪುರುಷನ ಜೊತೆ ಡೇಟಿಂಗ್- ರೊಚ್ಚಿಗೆದ್ದ ಪತಿ ಮಚ್ಚಿನಿಂದ ಅಟ್ಯಾಕ್