Public TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Font ResizerAa
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
  • Home
  • State
  • LIVE
  • Latest
  • Districts
  • National
  • World
  • Cinema
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Karnataka

ಆಗುಂಬೆ ಘಾಟ್- ಒಂದು ಬಾರಿ ಹೋದ್ರೆ ಮತ್ತೆ ಮತ್ತೆ ಸೆಳೆಯುವ ಏಕೈಕ ಸ್ಥಳ

Public TV
Last updated: February 23, 2024 4:03 pm
Public TV
Share
3 Min Read
AGUMBE GHAT
SHARE

ಕರಾವಳಿಯಂತೆ ಶಿವಮೊಗ್ಗದಲ್ಲಿಯೂ ಸಾಕಷ್ಟು ಅದ್ಭುತ ಪ್ರವಾಸಿ ತಾಣಗಳಿವೆ. ಅವುಗಳಲ್ಲಿ ಆಗುಂಬೆ ಘಾಟ್ ಕೂಡ ಒಂದು. ಇದು ಭಾರತದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳಗಳಲ್ಲಿ ಒಂದಾಗಿದ್ದು, ಈ ಹಿನ್ನೆಲೆಯಲ್ಲಿ ಆಗುಂಬೆಯನ್ನು ದಕ್ಷಿಣದ ಚಿರಾಪುಂಜಿ ಎಂದೂ ಕರೆಯುತ್ತಾರೆ. ಚಾರಣಪ್ರಿಯರಿಗೆ ಹೇಳಿ ಮಾಡಿಸಿದ ಜಾಗ ಈ ಆಗುಂಬೆ ಘಾಟ್. ಹೀಗಾಗಿ ಪ್ರಕೃತಿಯ ಈ ಸೌಂದರ್ಯವನ್ನು ಸವಿಯಲು ನೀವು ಈ ಸ್ಥಳಕ್ಕೆ ಭೇಟಿ ನೀಡಲೇಬೇಕು. ಈ ಸ್ಥಳಕ್ಕೆ ನೀವು ಒಂದು ಬಾರಿ ಭೇಟಿ ಕೊಟ್ಟರೆ ಮತ್ತೆ ಮತ್ತೆ ಹೋಗಬೇಕು ಎನ್ನುವ ಅದ್ಭುತ ಸ್ಥಳ ಇದಾಗಿದೆ.

ಆಗುಂಬೆ ಘಾಟ್ ಎಲ್ಲಿದೆ?: ಪಶ್ಚಿಮ ಘಟ್ಟದಲ್ಲಿರುವ ಆಗುಂಬೆ ಘಾಟ್ ಉಡುಪಿ ಜಿಲ್ಲೆ ಮತ್ತು ಶಿವಮೊಗ್ಗ ಜಿಲ್ಲೆಗಳನ್ನು ಸಂಪರ್ಕಿಸುತ್ತದೆ. ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನಲ್ಲಿ ಈ ಪ್ರವಾಸಿ ಸ್ಥಳ ಬರುತ್ತದೆ. ಇಲ್ಲಿನ ಪ್ರಕೃತಿ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸುತ್ತದೆ. ಆಗುಂಬೆಯು ಸೂರ್ಯಾಸ್ತ, ಟ್ರಕ್ಕಿಂಗ್, ಫೋಟೋಗ್ರಫಿ, ವಾತಾವರಣ, ರಾಜ ನಾಗರಹಾವಿನ ಸಂಶೋಧನಾ ಕೇಂದ್ರ ಹಾಗೂ ಔಷಧೀಯ ಸಸ್ಯಗಳಿಗೆ ಹೆಸರುವಾಸಿಯಾಗಿದೆ. ಎಲ್ಲದಕ್ಕಿಂತಲೂ ಮುಖ್ಯವಾಗಿ ಸಂಜೆಯ ವೇಳೆ ಸೂರ್ಯಾಸ್ತವಾಗುವ ದೃಶ್ಯವನ್ನು ಕಾಣಲು ಸಾವಿರಾರು ಮಂದಿ ಇಲ್ಲಿಗೆ ಆಗಮಿಸುತ್ತಾರೆ. ಮಳೆಗಾಲದಲ್ಲಿ ಕಾದು ಕುಳಿತು ಸೂರ್ಯಾಸ್ತವನ್ನು ಕಣ್ತುಂಬಿಕೊಳ್ಳುವುದೇ ಸಡಗರವಾಗಿರುತ್ತದೆ. ಹೆಚ್ಚಿನ ಪ್ರವಾಸಿಗರು ಆಗುಂಬೆಯನ್ನು ಅದರ ಕಾಡುಗಳ ಮೂಲಕ ಚಾರಣ ಮಾಡಲು ಅಥವಾ ಜಲಪಾತಗಳನ್ನು ವೀಕ್ಷಿಸಲು ಭೇಟಿ ನೀಡುತ್ತಾರೆ.

agumbe ghat photo

ತಲುಪುವುದು ಹೇಗೆ?: ಆಗುಂಬೆ ಘಾಟ್‍ಗೆ ತೆರಳಲು ವಿಮಾನದಲ್ಲಿ ಬರುವವರಾದರೆ ನೀವು ಮಂಗಳೂರು ವಿಮಾನ ನಿಲ್ದಾಣಕ್ಕೆ ಬರಬೇಕು. ನಂತರ ಅಲ್ಲಿಂದ ಬಸ್ಸಿನ ಮೂಲಕ ಸುಮಾರು 100 ಕಿ.ಮೀ ದೂರ ಸಾಗಿದರೆ ಆಗುಂಬೆ ಘಾಟ್ (Agumbe Ghat) ಸಿಗುತ್ತದೆ. ಇನ್ನು ರೈಲಿನ ಮೂಲಕ ಬರುವವರಾದರೆ ಮಂಗಳೂರು ಮತ್ತು ಶಿವಮೊಗ್ಗ ಹತ್ತಿರದ ರೈಲು ನಿಲ್ದಾಣಗಳಿವೆ. ಇದನ್ನೂ ಓದಿ: ಪ್ರಕೃತಿ ರಮಣೀಯ ನರಹರಿ ಪರ್ವತದ ಸೌಂದರ್ಯ ಸವಿಯಲು ನೀವೂ ಭೇಟಿ ಕೊಡಿ

ಭೇಟಿ ನೀಡಬೇಕಾದ ಪ್ರಮುಖ ಸ್ಥಳಗಳು: ಆಗುಂಬೆಯು ಕರ್ನಾಟಕದ ಒಂದು ಗಿರಿಧಾಮವಾಗಿದ್ದು, ಇದು ಹಚ್ಚ ಹಸಿರಿನ ಜೊತೆಗೆ ಬೆರಗುಗೊಳಿಸುವ ಸೂರ್ಯಾಸ್ತಗಳಿಗೆ ಹೆಸರುವಾಸಿಯಾಗಿದೆ. ವಾರಾಂತ್ಯದಲ್ಲಿ ಸ್ನೇಹಿತರು ಅಥವಾ ಕುಟುಂಬದೊಂದಿಗೆ ವಿಹಾರಕ್ಕೆ ಭೇಟಿ ನೀಡಲು ಇದು ಸೂಕ್ತ ಸ್ಥಳವಾಗಿದೆ. ಆಗುಂಬೆಯ ಜೊತೆಗೆ, ನೀವು ಭೇಟಿ ನೀಡಬಹುದಾದ ಕುಂದಾದ್ರಿ ಬೆಟ್ಟಗಳು, ಶೃಂಗೇರಿ ಮತ್ತು ಕುಪ್ಪಳ್ಳಿಯಂತಹ ಅನೇಕ ಹತ್ತಿರದ ಆಕರ್ಷಣೆಗಳಿವೆ. ಈ ಸ್ಥಳಗಳು ಅದ್ಭುತ ನೋಟಗಳು, ದೇವಾಲಯಗಳು, ಜಲಪಾತಗಳು, ವನ್ಯಜೀವಿಗಳು ಮತ್ತು ಸಾಹಸ ಚಟುವಟಿಕೆಗಳನ್ನು ನೀಡುತ್ತವೆ.

ಇದರ ಜೊತೆಗೆ ಗೋಪಾಲಕೃಷ್ಣ ದೇವಾಲಯ, ಸನ್ಸೆಟ್ ಪಾಯಿಂಟ್ ಗಳಿಗೆ ಭೇಟಿ ನೀಡಿದರೆ ನಿಮಗೆ ಅದ್ಭುತ ಅನುಭವ ಸಿಗುವುದರಲ್ಲಿ ಎರಡು ಮಾತಿಲ್ಲ. ಇದರ ಜೊತೆಗೆ ಒಂದಷ್ಟು ಜಲಪಾತಗಳಿಗೂ ಭೇಟಿ ಕೊಟ್ಟು ಎಂಜಾಯ್ ಮಾಡಬಹುದು. ಅವುಗಳೆಂದರೆ ಕುಂಚಿಕಲ್ ಜಲಪಾತ, ಬರ್ಕಾನ ಜಲಪಾತ, ಒನಕೆ ಅಬ್ಬಿ ಜಲಪಾತ, ಜೋಗಿಗುಂಡಿ ಹಾಗೂ ಕೂಡ್ಲು ತೀರ್ಥ ಜಲಪಾತ.

AGUMBE 222

ಇಷ್ಟು ಮಾತ್ರವಲ್ಲದೇ ಆಗುಂಬೆಯಲ್ಲಿ ನಾರಿಷ್ಮ ಪರ್ವತ ಅನ್ನುವ ಎತ್ತರದ ಶಿಖರವಿದೆ. ಕೆಲಸದ ಜಂಜಾಟದಲ್ಲಿದ್ದವರು ಮನಸ್ಸಿಗೆ ಏಕಾಂತವನ್ನು ಬಯಸುವವರು ಹಾಗೂ ವಿಶ್ರಾಂತಿ ತೆಗೆದುಕೊಳ್ಳಬೆಕೆಂಬ ಬಯಕೆ ಇರುವವರಿಗೆ ಈ ಚಾರಣವು ಬಹಳಷ್ಟು ಮುದ ನೀಡುತ್ತದೆ. ಇದು ಎತ್ತರದ ಹುಲ್ಲುಗಾವಲು ಮತ್ತು ದಟ್ಟವಾದ ಅರಣ್ಯ ಪ್ರದೇಶವನ್ನು ಹೊಂದಿದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ಒಳಗೆ ಹಲವಾರು ಬಗೆಯ ಪಕ್ಷಿಗಳು ಮತ್ತು ಇತರ ಪ್ರಾಣಿಗಳನ್ನು ನೋಡಬಹುದು.

ಸ್ವರ್ಗದ ಅನುಭವ: ನೀವು ಕಾಡಿನೊಳಗೆ ಹೋಗುತ್ತಿದ್ದಂತೆಯೇ ನಿಮಗೆ ಸ್ವರ್ಗದ ಅನುಭವಾಗುತ್ತದೆ. ಸುತ್ತಮುತ್ತಲೂ ಹಚ್ಚ ಹಸುರಿನಿಂದ ಕಂಗೊಳಿಸುವ ಮರಗಳು, ಪಕ್ಷಿಗಳ ಕೂಗು.. ಅಲ್ಲಲ್ಲಿ ಝುಳು ಝುಳು ನೀರಿನ ಶಬ್ಧ ಇವೆಲ್ಲವೂ ನಿಮ್ಮ ಮನಸ್ಸಿನ ಭಾರವನ್ನು ಇಳಿಯುವಂತೆ ಮಾಡುತ್ತವೆ. ಈ ಜಾಡು ನಿಮ್ಮನ್ನು ದಟ್ಟವಾದ ಕಾಡುಗಳ ಮೂಲಕ ಕರೆದೊಯ್ಯುತ್ತದೆ. ಹೀಗೆ ಸಾಗುವಾಗ ಕೆಲವರು ವಿವಿಧ ಸಸ್ಯ ಮತ್ತು ಪ್ರಾಣಿಗಳನ್ನು ವೀಕ್ಷಿಸಬಹುದು, ಇನ್ನೂ ಕೆಲವರು ದಾರಿಯಲ್ಲಿರುವ ಜಲಪಾತಗಳಲ್ಲಿ ಆನಂದಿಸಬಹುದು ಅಥವಾ ವಿಶ್ರಾಂತಿ ಪಡೆಯಬಹುದು.

ಕೊನೆಯದಾಗಿ ನೀವು ಸೂರ್ಯಾಸ್ತದ ಸ್ಥಳಕ್ಕೆ ಗಿರಿಧಾಮಕ್ಕೆ ಚಾರಣ ಮಾಡಬಹುದು. ನೀವು ಹೋಗುವ ಸಂದರ್ಭದಲ್ಲಿ ಮಂಜು ಕಡಿಮೆ ಇದ್ದರೆ ಅರಬ್ಬಿ ಸಮುದ್ರದ ಸುಂದರವಾದ ದೂರದ ನೋಟವನ್ನು ಸವಿಯಬಹುದು. ಇಲ್ಲಿ ವಿಶ್ರಾಂತಿಯನ್ನು ಪಡೆದುಕೊಳ್ಳಬಹುದು. ಪ್ರಶಾಂತವಾದ ವಾತಾವರಣದ ನಡುವೆ ಕುಳಿತು ಅದ್ಭುತ ನೋಟಗಳು ನಿಮ್ಮನ್ನೇ ನೀವು ಮರೆಯುಂತೆ ಮಾಡುತ್ತದೆ.

agumbe ghat 1

ಉತ್ತಮ ಸಮಯ: ಆಗುಂಬೆಗೆ ನೀವು ಯಾವಾಗ ಬೇಕಾದರೂ ಭೇಟಿ ಕೊಡಬಹುದು. ಯಾಕೆಂದರೆ ಈ ಸ್ಥಳ ತಂಪಾದ ವಾತಾವರಣವನ್ನು ಹೊಂದಿದೆ. ಮಳೆಗಾಲ ಮತ್ತು ಚಳಿಗಾಲವು ಆಗುಂಬೆಗೆ ಭೇಟಿ ನೀಡಲು ಉತ್ತಮ ತಿಂಗಳುಗಳಾಗಿವೆ. ಈ ಸಮಯದಲ್ಲಿ ಪ್ರಕೃತಿ ವಿಸ್ಮಯವನ್ನು ನೀವು ಆನಂದಿಸಬಹುದು. ಅಕ್ಟೋಬರ್‍ನಿಂದ ಫೆಬ್ರವರಿ ನಡುವೆ ಯಾವಾಗ ಬೇಕಾದರೂ ಭೇಟಿ ನೀಡಬಹುದು, ಇದು ಸರಾಸರಿ ಮಾನ್ಸೂನ್ ಋತುವಾಗಿದೆ, ಇದು ಸೌಮ್ಯವಾದ ಮತ್ತು ಶುಷ್ಕ ಋತುವಾಗಿದ್ದು, ಪಾದಯಾತ್ರೆಗೆ ಸೂಕ್ತವಾಗಿದೆ.

TAGGED:Agumbe GhatTourist placetrekking placeಆಗುಂಬೆಆಗುಂಬೆ ಘಾಟ್ಚಾರಣ ಸ್ಥಳಪ್ರವಾಸಿ ತಾಣ
Share This Article
Facebook Whatsapp Whatsapp Telegram

Cinema News

Is Dhanush Dating Mrunal Thakur
ಧನುಶ್ ಜೊತೆ ಮೃಣಾಲ್ ಠಾಕೂರ್ ಡೇಟಿಂಗ್?
Cinema Karnataka Latest
Actress Sumalatha condoles the death of Malayalam Actor Shanawas
ʼಕೇರಂ, ಬ್ಯಾಡ್ಮಿಂಟನ್ ಆಡುವಾಗ ಸೆಕೆಂಡ್‍ನಲ್ಲಿ ಸೋಲಿಸುತ್ತಿದ್ದರು’- ಸುಮಲತಾ ನೆನಪು ಹಂಚಿಕೊಂಡಿದ್ದು ಯಾರ ಬಗ್ಗೆ?
Cinema Latest South cinema Top Stories
janaki vs state of kerala
ಜಾನಕಿ V v/s ಸ್ಟೇಟ್ ಆಫ್ ಕೇರಳ ಚಿತ್ರ ಸ್ಟ್ರೀಮಿಂಗ್: ಸ್ವಾತಂತ್ರ್ಯ ದಿನಕ್ಕೆ ಗಿಫ್ಟ್
Cinema Latest South cinema Top Stories
Santhosh balaraj 1
ಸ್ಯಾಂಡಲ್‌ವುಡ್‌ನ ಯುವ ನಟ ಸಂತೋಷ್ ಬಾಲರಾಜ್ ನಿಧನ
Cinema Latest Sandalwood Top Stories
Ramya Prajwal Devaraj
ರಮ್ಯಾಗೆ ಅಶ್ಲೀಲ ಮೆಸೇಜ್ ಕೇಸ್: ಪ್ರಜ್ವಲ್ ಕಿಡಿ
Cinema Latest Sandalwood Top Stories

You Might Also Like

Tamil Nadu CRPF Woman Home gold theft
Crime

CRPF ಅಧಿಕಾರಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ – ದೂರು ಕೊಟ್ರೂ ಕ್ರಮವಿಲ್ಲ ಅಂತ ಕಣ್ಣೀರು

Public TV
By Public TV
7 minutes ago
IndianArmy
Latest

ಆಪರೇಷನ್‌ ಸಿಂಧೂರ ಬಳಿಕ ಮೊದಲ ಬಾರಿಗೆ ಪಾಕ್‌ನಿಂದ ಕದನ ವಿರಾಮ ಉಲ್ಲಂಘನೆ

Public TV
By Public TV
20 minutes ago
Muslim Marriage
Bengaluru City

ಆರ್ಥಿಕವಾಗಿ ಹಿಂದುಳಿದ ಅಲ್ಪಸಂಖ್ಯಾತರ ಸಾಮೂಹಿಕ ಮದುವೆ, ಪ್ರತಿ ಜೋಡಿಗೆ 50 ಸಾವಿರ – ಸರ್ಕಾರದ ಮಂಜೂರಾತಿ

Public TV
By Public TV
47 minutes ago
dk shivakumar 1 1
Bengaluru City

ಬೆಂಗಳೂರಿಗೆ ಮತ್ತೊಂದು ಟನಲ್‌ ರೋಡ್‌ ಘೋಷಿಸಿದ ಡಿಕೆಶಿ

Public TV
By Public TV
2 hours ago
karnataka High Court
Bengaluru City

ಚಿನ್ನಸ್ವಾಮಿ ಕಾಲ್ತುಳಿತ | ಕುನ್ಹಾ ಆಯೋಗದ ವರದಿ ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿ – ರಾಜ್ಯಕ್ಕೆ ಹೈಕೋರ್ಟ್ ಸೂಚನೆ

Public TV
By Public TV
2 hours ago
Pralhad Joshi 1
Belgaum

ಬೆಂಗಳೂರು-ಬೆಳಗಾವಿ ನೂತನ `ವಂದೇ ಭಾರತ್’ ರೈಲು; ಆ.10ಕ್ಕೆ ಪ್ರಧಾನಿ ಹಸಿರು ನಿಶಾನೆ – ಸಚಿವ ಪ್ರಹ್ಲಾದ್ ಜೋಶಿ

Public TV
By Public TV
2 hours ago
Public TV - Latest Kannada News, Public TV Kannada Live, Public TV NewsPublic TV - Latest Kannada News, Public TV Kannada Live, Public TV News
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?