ಬಿಜೆಪಿ, ಜೆಡಿಎಸ್‍ಗೆ ಅಲ್ಪಸಂಖ್ಯಾತರನ್ನು ಕಂಡರೆ ಆಗಲ್ಲ: ಡಿ.ಕೆ ಶಿವಕುಮಾರ್

Public TV
1 Min Read
DK Shivakumar

– ರಾಮನಗರದಲ್ಲಿ ಗಲಾಟೆಗೆ ಬಿಜೆಪಿ, ಕುಮಾರಸ್ವಾಮಿನೇ ಕಾರಣ

ರಾಮನಗರ: ವಕೀಲರ ಪ್ರತಿಭಟನೆ ವಿಚಾರವಾಗಿ, ಪಿಎಸ್‍ಐ ತಪ್ಪಿದ್ದರೆ ಕಾನೂನು ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೆ. ಇಲ್ಲಿ ಯಾರಿಗೂ ಅನ್ಯಾಯ ಆಗಬಾರದು ಎಂದು ಸೂಚಿಸಿದ್ದೆ. ಈ ವಿಚಾರದಲ್ಲಿ ಬಿಜೆಪಿ ಹಾಗೂ ಜೆಡಿಎಸ್‍ನವರು ರಾಜಕೀಯ ಮಾಡುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ (DK Shivakumar) ವಾಗ್ದಾಳಿ ನಡೆಸಿದ್ದಾರೆ.

ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ (BJP) ಹಾಗೂ ಜೆಡಿಎಸ್ (JDS) ಮೊಸರಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವ್ರು ಅಶಾಂತಿ ಸೃಷ್ಟಿಸೋದು ಮಾಮೂಲಿ. ಕಮ್ಯೂನಲ್ ವಿಚಾರ ತೆಗೆದುಕೊಂಡು ರಾಜಕೀಯ ಮಾಡುತ್ತಾರೆ. ಅವರಿಗೆ ಮೈನಾರಿಟಿ ಅವರನ್ನು ಕಂಡರೆ ಆಗಲ್ಲ. ಸ್ಥಳೀಯ ಶಾಸಕ ಹಾಗೂ ಅಧಿಕಾರಿ ಮೈನಾರಿಟಿ ಇರುವುದರಿಂದ ರಾಜಕೀಯ ಮಾಡಿದ್ದಾರೆ. ಅಸೆಂಬ್ಲಿಯಲ್ಲೇ ಮೈನಾರಿಟಿ ಅಧಿಕಾರಿ ಬೇಡ ಎನ್ನುತ್ತಿದ್ದರು ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ಖಾಸಗಿ ಶಾಲೆಗಳಲ್ಲಿ ನಾಡಗೀತೆ ಕಡ್ಡಾಯವಲ್ಲ ವಿವಾದ – ಪಬ್ಲಿಕ್ ಟಿವಿ ಫಟಾಫಟ್ ಇಂಪ್ಯಾಕ್ಟ್ : ಮುದ್ರಣ ದೋಷ ಎಂದ ತಂಗಡಗಿ

ರಾಮನಗರದಲ್ಲಿ ಡಿಕೆ ಸಹೋದರರಿಂದ ಅಶಾಂತಿ ಸೃಷ್ಟಿ ಎಂಬ ಆರೋಪಕ್ಕೆ, ರಾಮನಗರದಲ್ಲಿ ಗಲಾಟೆ ಮಾಡಿಸುತ್ತಿರುವುದೇ ಜೆಡಿಎಸ್. ಆ ಎಲ್ಲಾ ಗಲಾಟೆಗೆ ಕುಮಾರಸ್ವಾಮಿ (HD Kumaraswamy) ಹಾಗೂ ಬಿಜೆಪಿಯೇ ಕಾರಣ ಎಂದು ಅವರು ಆರೋಪಿಸಿದ್ದಾರೆ.

ಲೋಕಸಭಾ ಚುನಾವಣೆಗೆ ತಯಾರಿ ವಿಚಾರವಾಗಿ, ನಾವು ಕಳೆದ ಚುನಾವಣೆ ಮುಗಿದ ಮರುದಿನದಿಂದಲೇ ಕೆಲಸ ಆರಂಭಿಸಿದ್ದೇವೆ. ನಮ್ಮನ್ನ ಕಟ್ಟಿ ಹಾಕ್ತಿವಿ ಅಂತಿದ್ದಾರಲ್ಲ ನೋಡೋಣ, ಕಟ್ಟಿಹಾಕಲಿ ಎಂದು ಸವಾಲು ಹಾಕಿದ್ದಾರೆ.

ಕನಕಪುರದಲ್ಲಿ ಕಾಡಾನೆ ಹಾವಳಿ ಹೆಚ್ಚಳ ವಿಚಾರವಾಗಿ, ನನ್ನ ಕ್ಷೇತ್ರದಲ್ಲಿ ಕಾಡಾನೆ ಹಾವಳಿ ಇರೋದು ನಿಜ. ಈಗಾಗಲೇ 9 ಮಂದಿ ಸಾವನ್ನಪ್ಪಿದ್ದಾರೆ. ಈ ಬಗ್ಗೆ ಅರಣ್ಯ ಸಚಿವರ ಬಳಿ ಮಾತನಾಡಿದ್ದೇನೆ. ರೈಲ್ವೆ ಬ್ಯಾರಿಕೇಡ್ ಹೆಚ್ಚಿಸುವಂತೆ ಹೇಳಿದ್ದೇನೆ. ಕಾಡು ಜಾಸ್ತಿ ಬೆಳೆಯುತ್ತಿದೆ, ಆನೆಗಳು ನಗರಕ್ಕೆ ಬರುತ್ತಿವೆ. ಇದು ಪ್ರಕೃತಿ ಏನು ಮಾಡೋಕಾಗಲ್ಲ. ಸಾಧ್ಯವಾದಷ್ಟು ಕ್ರಮ ಕೈಗೊಳ್ಳುತ್ತೇವೆ ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ಕೆರಗೋಡು ಹನುಮಧ್ವಜ ವಿವಾದ – ಅಯೋಧ್ಯೆ ರಾಮ ಮಂದಿರ ಮುಂದೆ ಪಣ ತೊಟ್ಟ ಹಿಂದೂ ಕಾರ್ಯಕರ್ತರು

Share This Article