ಖಾಸಗಿ ಬಸ್, ಇನ್ನೋವಾ ಮುಖಾಮುಖಿ ಡಿಕ್ಕಿ – ಅತ್ತೆ, ಸೊಸೆ ಸ್ಥಳದಲ್ಲೇ ಸಾವು

Public TV
1 Min Read
Raichur Accident

ರಾಯಚೂರು: ಖಾಸಗಿ ಬಸ್ (Private Bus) ಹಾಗೂ ಇನ್ನೋವಾ (Innova Car) ಮುಖಾಮುಖಿ ಡಿಕ್ಕಿಯಾದ ಪರಿಣಾಮ ಅತ್ತೆ, ಸೊಸೆ ಸ್ಥಳದಲ್ಲೇ ಸಾವನ್ನಪ್ಪಿದ್ದು, ಐವರು ಗಾಯಗೊಂಡ ಘಟನೆ ರಾಯಚೂರಿನ  (Raichur) ಕಸಬೆ ಕ್ಯಾಂಪ್ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಡೆದಿದೆ.

ಭೀಕರ ಅಪಘಾತದ ಪರಿಣಾಮ ಇನ್ನೋವಾ ಕಾರ್‌ನಲ್ಲಿದ್ದ ಮಾರಿಯಾ ಗೀತಾ (38) ಹಾಗೂ ಅಮಲ್ ಪಾಲ್ ಮೇರಿ (64) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹೈದರಾಬಾದ್‌ನಿಂದ ಸಿಂಧನೂರು ಮಾರ್ಗವಾಗಿ ಹೊರಟಿದ್ದ ಖಾಸಗಿ ಬಸ್, ಗದಗದಿಂದ ರಾಯಚೂರು ಮಾರ್ಗವಾಗಿ ಬರುತ್ತಿದ್ದ ಇನ್ನೋವಾ ಕಾರ್‌ಗೆ ಡಿಕ್ಕಿ ಹೊಡೆದು ಘಟನೆ ಸಂಭವಿಸಿದೆ. ಇದನ್ನೂ ಓದಿ: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೇ ಚಾಕು ಇರಿದ!

ಕಾರ್‌ನಲ್ಲಿ ಒಟ್ಟು ಏಳು ಜನ ಪ್ರಯಾಣಿಸುತ್ತಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಗಾಯಗೊಂಡ ಉಳಿದ ಐದು ಜನರನ್ನು ರಾಯಚೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ರಾಯಚೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಸಂಧಾನಕ್ಕೆ ಹೋಗಿದ್ದ ಗರ್ಭಿಣಿ ಮೇಲೆ ಗ್ಯಾಂಗ್‌ ರೇಪ್‌; ಪೆಟ್ರೋಲ್‌ ಸುರಿದು ಬೆಂಕಿ ಹಚ್ಚಿದ ದುರುಳರು!

Share This Article