ಬಣ್ಣದ ಕಾರ್ಖಾನೆಯಲ್ಲಿ ಭೀಕರ ಅಗ್ನಿ ದುರಂತ – 11 ಮಂದಿ ಸಜೀವ ದಹನ

Public TV
1 Min Read
Delhi Factory

– ನಾಲ್ವರು ಪೊಲೀಸ್ ಪೇದೆಗಳು ಗಂಭೀರ

ನವದೆಹಲಿ: ಇಲ್ಲಿನ ಅಲಿಪುರದ (Alipur) ಮಾರುಕಟ್ಟೆಯಲ್ಲಿರುವ ಬಣ್ಣದ ಕಾರ್ಖಾನೆಯೊಂದರಲ್ಲಿ (Paint Factory) ಭೀಕರ ಅಗ್ನಿ ಅವಘಡ ಸಂಭವಿಸಿದ ಪರಿಣಾಮ 11 ಮಂದಿ ಕಾರ್ಮಿಕರು (Workers) ಸಜೀವ ದಹನವಾದ ಘಟನೆ ಗುರುವಾರ ನಡೆದಿದೆ.

ಅಲಿಪುರದ ದಯಾಲ್‌ಪುರ ಮಾರುಕಟ್ಟೆಯಲ್ಲಿರುವ ಬಣ್ಣದ ಫ್ಯಾಕ್ಟರಿಯಲ್ಲಿ ಈ ದುರಂತ ಸಂಭವಿಸಿದ್ದು, 11 ಮಂದಿ ಕಾರ್ಮಿಕರ ಸುಟ್ಟ ಮೃತದೇಹಗಳು ಪತ್ತೆಯಾಗಿವೆ ಎಂದು ಅಗ್ನಿಶಾಮಕ ಅಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆಯಲ್ಲಿ ಓರ್ವ ಪೊಲೀಸ್ ಸೇರಿದಂತೆ ನಾಲ್ವರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದನ್ನೂ ಓದಿ: ಕೇರಳದಿಂದ ಉಡುಪಿಗೆ ಶಂಕಿತ ನಕ್ಸಲ್ ಉಣ್ಣಿಮಾಯಾ; ಕೋರ್ಟ್‌ಗೆ ಕರೆತರುವಾಗ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ

ಅಗ್ನಿ ಅವಘಡಕ್ಕೂ ಮುನ್ನ ಕಾರ್ಖಾನೆಯಲ್ಲಿ ಸ್ಫೋಟದ ಸದ್ದು ಕೇಳಿಬಂದಿದ್ದು, ಅಲ್ಲಿ ಸಂಗ್ರಹಿಸಿಡಲಾಗಿದ್ದ ರಾಸಾಯನಿಕಗಳಿಂದ ಸ್ಫೋಟ ಸಂಭವಿಸಿದೆ ಎಂದು ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬೆಂಕಿಯ ಜ್ವಾಲೆ ಪಕ್ಕದ ಮನೆ ಹಾಗೂ ಮುಕ್ತಿ ಕೇಂದ್ರಕ್ಕೂ ಹಬ್ಬಿದೆ. ಸ್ಫೋಟ ಸಂಭವಿಸಿದ ಪರಿಣಾಮ ಕಟ್ಟಡ ಕುಸಿದು ಬಿದ್ದಿದ್ದು, 11 ಮಂದಿ ಕಾರ್ಮಿಕರು ಮೃತಪಟ್ಟಿದ್ದಾರೆ. ಇದನ್ನೂ ಓದಿ: ಫ್ಲಾಟ್‌ಗೆ ಕರೆಸಿಕೊಂಡು ಅಪ್ರಾಪ್ತ ವಿದ್ಯಾರ್ಥಿನಿ ಮೇಲೆ ಗ್ಯಾಂಗ್‌ ರೇಪ್‌; ನಾಲ್ವರ ಬಂಧನ

ಮೃತದೇಹಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅವುಗಳನ್ನು ಗುರುತಿಸುವುದು ಕಷ್ಟಕರ ಎಂದು ದೆಹಲಿ ಅಗ್ನಿಶಾಮಕ ಸೇವೆಯ ನಿರ್ದೇಶಕ ಅತುಲ್ ಗಾರ್ಗ್ ತಿಳಿಸಿದ್ದಾರೆ. ಅಗ್ನಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಘಟನೆಯಲ್ಲಿ ನಾಲ್ವರು ಪೊಲೀಸ್ ಪೇದೆಗಳು ಗಾಯಗೊಂಡಿದ್ದಾರೆ. ಇದನ್ನೂ ಓದಿ: ಜೈಲಿನಲ್ಲಿದ್ದುಕೊಂಡೇ ಮಹಿಳೆಗೆ ಬೆತ್ತಲೆ ಫೋಟೊ ಕಳಿಸಿ ಬ್ಲ್ಯಾಕ್‌ಮೇಲ್‌ – 5 ಲಕ್ಷಕ್ಕೆ ರೌಡಿ ಶೀಟರ್ ಡಿಮ್ಯಾಂಡ್

Share This Article