Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಕೇರಳದಿಂದ ಉಡುಪಿಗೆ ಶಂಕಿತ ನಕ್ಸಲ್ ಉಣ್ಣಿಮಾಯಾ; ಕೋರ್ಟ್‌ಗೆ ಕರೆತರುವಾಗ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Crime | ಕೇರಳದಿಂದ ಉಡುಪಿಗೆ ಶಂಕಿತ ನಕ್ಸಲ್ ಉಣ್ಣಿಮಾಯಾ; ಕೋರ್ಟ್‌ಗೆ ಕರೆತರುವಾಗ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ

Crime

ಕೇರಳದಿಂದ ಉಡುಪಿಗೆ ಶಂಕಿತ ನಕ್ಸಲ್ ಉಣ್ಣಿಮಾಯಾ; ಕೋರ್ಟ್‌ಗೆ ಕರೆತರುವಾಗ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ

Public TV
Last updated: February 15, 2024 9:35 pm
Public TV
Share
2 Min Read
Maoist leader Unnimaya
SHARE

ಉಡುಪಿ: ಕೇರಳ (Kerala) ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದ ಶಂಕಿತ ನಕ್ಸಲ್ ನಾಯಕಿ ಶ್ರೀಮತಿ ಅಲಿಯಾಸ್ ಉಣ್ಣಿಮಾಯಾ (Maoist Leader Unnimaya) ಉರೂಫ್ ಸಂಗೀತಾಳನ್ನು ಉಡುಪಿಗೆ (Udupi) ಕರೆತರಲಾಗಿದೆ. ಹೆಬ್ರಿ ತಾಲೂಕಿನಲ್ಲಿ ನಡೆದ ಪ್ರಕರಣಗಳ ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ಸಂದರ್ಭದಲ್ಲಿ ಸಿಪಿಐ ಮಾವೋಯಿಸ್ಟ್ ಪರ ಘೋಷಣೆ ಮೊಳಗಿಸಿದ್ದಾಳೆ.

ಚಿಕ್ಕಮಗಳೂರಿನ ಶೃಂಗೇರಿಯಿಂದ 2007 ರಲ್ಲಿ ತನ್ನ 17ನೇ ವಯಸ್ಸಿಗೆ ಕಣ್ಮರೆಯಾಗಿ ತಲೆಮರೆಸಿಕೊಂಡು ದಶಕಗಳ ಕಾಲ ಕಾಡಲ್ಲಿ ಓಡಾಡಿದ್ದಳು. ಬರೋಬ್ಬರಿ 16 ವರ್ಷಗಳ ನಂತರ 2023ರ ನವೆಂಬರ್ 7ರಂದು ಕೇರಳ ಪೊಲೀಸರಿಗೆ ಸೆರೆಸಿಕ್ಕಿದ್ದಳು. ಕೇರಳದಲ್ಲಿ ಸಂಗೀತಾ ಉಣ್ಣಿಮಾಯಾ ಆಗಿ ನಾಮಕರಣಗೊಂಡು ಹೋರಾಟದಲ್ಲಿ ತೊಡಗಿಸಿಕೊಂಡಿದ್ದಳು. ಹಲವಾರು ಪ್ರಕರಣಗಳಲ್ಲಿ ಕೇರಳ ಜೈಲಿನಲ್ಲಿ ನ್ಯಾಯಾಂಗ ಬಂಧನದಲ್ಲಿದ್ದಾಳೆ. ಇದನ್ನೂ ಓದಿ: ಪೊಲೀಸ್ ಕಾನ್‌ಸ್ಟೇಬಲ್‌ ಪರೀಕ್ಷೆ; ಪೂರ್ಣ ತೋಳಿನ ಶರ್ಟ್‌, ಜೀನ್ಸ್‌ ಪ್ಯಾಂಟ್‌ ಧರಿಸುವಂತಿಲ್ಲ

Maoists

ಫೆಬ್ರವರಿ 13 ರಂದು ಕಾರ್ಕಳ ನಗರ ಠಾಣೆ ಪೊಲೀಸರು ಕೇರಳ ಜೈಲಿನಿಂದ ಬಿಗಿ ಭದ್ರತೆಯಲ್ಲಿ ಕರೆತಂದಿದ್ದಾರೆ. ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಫೆಬ್ರವರಿ 17ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. ವಿಚಾರಣೆ ನಡೆಸಿ ಕೋರ್ಟ್‌ಗೆ ಒಪ್ಪಿಸಲಾಗಿದೆ. 2011ರ ನವೆಂಬರ್ 19ರಂದು ಹೆಬ್ರಿಯ ಕಬ್ಬಿನಾಲೆಯಲ್ಲಿ ನಡೆದ ಸದಾಶಿವ ಗೌಡ ಅವರ ಅಪಹರಣ ಮತ್ತು ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ಕೋರ್ಟ್ ಪ್ರೊಡ್ಯೂಸ್ ಮಾಡಲಾಯ್ತು. ಈ ಸಂದರ್ಭ ಸಿಪಿಐ ಮಾವೋಯಿಸ್ಟ್ ಜಿಂದಾಬಾದ್.. ಎಂದು ಶ್ರೀಮತಿ ಘೋಷಣೆಗಳನ್ನು ಕೂಗಿದ್ದಾಳೆ.

ಸದಾಶಿವ ಗೌಡ ಅವರನ್ನು ಶ್ರೀಮತಿಯನ್ನು ಒಳಗೊಂಡ ನಕ್ಸಲ್ ತಂಡ ಅಪಹರಿಸಿ ಗುಂಡು ಹಾರಿಸಿ ಕೊಲೆ ನಡೆಸಿತ್ತು. ಪೊಲೀಸರಿಂದ ತಲೆಮರೆಸಿಕೊಂಡಿದ್ದ ಶ್ರೀಮತಿ ಕೇರಳದಲ್ಲಿದ್ದು, ಕಳೆದ ನವೆಂಬರ್‌ನಲ್ಲಿ ಆಕೆಯನ್ನು ಪತ್ತೆಹಚ್ಚಿ ಕೇರಳ ಪೊಲೀಸರು ಬಂಧಿಸಿದ್ದರು. ಇದನ್ನೂ ಓದಿ: ‘ಕರಿಮಣಿ ಮಾಲೀಕ ನೀನಲ್ಲ’- ಪತ್ನಿ ರೀಲ್ಸ್‌ನಿಂದ ಬೇಸತ್ತು ಪತಿ ಸೂಸೈಡ್

ಇದೀಗ ವಿಚಾರಣೆಗಾಗಿ ಕಾರ್ಕಳಕ್ಕೆ ಕರೆತಂದಿದ್ದು ಡಿವೈಎಸ್‌ಪಿ ಅರವಿಂದ್ ಎನ್. ಕಲಗುಜ್ಜಿ ಅವರ ನೇತೃತ್ವದ ತಂಡ ತೀವ್ರ ವಿಚಾರಣೆ ನಡೆಸುತ್ತಿದೆ. ಪ್ರಕರಣ ನಡೆದ ಕಬ್ಬಿನಾಲೆಗೆ ನಕ್ಸಲ್ ನಾಯಕಿ ಶ್ರೀಮತಿಯನ್ನು ಕರೆದುಕೊಂಡು ಹೋಗಿ ಸ್ಥಳ ಮಹಜರು ನಡೆಸಿದ್ದಾರೆ.

2004ರ ಅವಧಿಯಲ್ಲಿ ಹೆಬ್ರಿ – ಕಾರ್ಕಳ ಭಾಗದಲ್ಲಿ ನಕ್ಸಲ್ ಚಟುವಟಿಕೆಗಳು ಜೋರಾಗಿತ್ತು. ಹೆಬ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಕಬ್ಬಿನಾಲೆ ಗ್ರಾಮದ ಮತ್ತಾವಿನಲ್ಲಿ ಬಾಂಬ್ ಸ್ಫೋಟ ಕೂಡ ನಡೆಸಿದ್ದರು. 2005ರ ಜುಲೈ 28ರಂದು ಕಾರ್ಕಳದ ಸರ್ಕಲ್ ಇನ್‌ಸ್ಪೆಕ್ಟರ್ ಆಗಿದ್ದ ರಾಮಚಂದ್ರ ನಾಯ್ಕ ಮತ್ತವರ ತಂಡ ನಕ್ಸಲ್ ಕೂಬಿಂಗ್‌ಗೆಂದು ಜೀಪಿನಲ್ಲಿ ಕೊಂಕಣರಬೆಟ್ಟಿನಿಂದ ಮುಟ್ಟುಪಾಡಿ ಕಡೆ ತೆರಳುತ್ತಿದ್ದಾಗ ಮತ್ತಾವು ಕ್ರಾಸ್ ಬಳಿ ನಕ್ಸಲರು ಇರಿಸಿದ್ದ ನೆಲಬಾಂಬ್ ಸ್ಫೋಟಿಸಿ ರಾಮಚಂದ್ರ ನಾಯ್ಕ ಹಾಗೂ 14 ಮಂದಿ ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದರು. ಎರಡು ಜೀಪುಗಳು ನೆಲಬಾಂಬ್ ಸ್ಫೋಟಕ್ಕೆ ಹಾನಿಗೊಂಡಿದ್ದವು. ಇದನ್ನೂ ಓದಿ: ಕೆಇಎ: ಸ್ಯಾಟ್ಸ್ ಮಾಹಿತಿ ತಿದ್ದುಪಡಿಗೆ ಅವಕಾಶ

2011ರಲ್ಲಿ ಕಬ್ಬಿನಾಲೆಯಲ್ಲಿ ಸದಾಶಿವ ಗೌಡ ಅವರನ್ನು ಅಪಹರಿಸಿ ನಕ್ಸಲ್ ತಂಡ ಕೊಲೆ ಮಾಡಿತ್ತು. ನಂತರ 2016ರಲ್ಲಿ ನೂರಾಲ್‌ಬೆಟ್ಟು ಶಾಲಾ ಪರಿಸರದಲ್ಲಿ ಚುನಾವಣಾ ಬಹಿಷ್ಕಾರ ಮಾಡುತ್ತೇವೆ ಎಂಬ ಬ್ಯಾನರ್‌ಗಳನ್ನು ನಕ್ಸಲ್ ತಂಡ ಅಳವಡಿಸಿತ್ತು. ಹೀಗೆ 2004 ರಿಂದ 2016ರವರೆಗೆ ನಕ್ಸಲ್ ಚಟುವಟಿಕೆಗಳು ಸಕ್ರಿಯವಾಗಿತ್ತು. ಉಡುಪಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ಪ್ರಕರಣಗಳ ವಿಚಾರಣೆ ಒಂದೊಂದಾಗಿ ನಡೆಯಲಿದೆ. ಕರ್ನಾಟಕದಲ್ಲಿ ಒಟ್ಟು 13 ಮತ್ತು ಕೇರಳದಲ್ಲಿ 30 ಪ್ರಕರಣಗಳಿದ್ದು ಎಲ್ಲವೂ ವಿಚಾರಣೆ ಹಂತದಲ್ಲಿದೆ.

TAGGED:keralaMaoist leader UnnimayaudupiUnnimaya
Share This Article
Facebook Whatsapp Whatsapp Telegram

Cinema news

jayamala
ಹಿರಿಯ ನಟಿ ಜಯಮಾಲಾಗೆ ಡಾ. ರಾಜ್‌ಕುಮಾರ್‌ ಪ್ರಶಸ್ತಿ
Cinema Latest Main Post Sandalwood
Kichcha Sudeep Rocking Star Yash
ಈ ಹೊಸ ಹೆಜ್ಜೆ ನಿಮಗೆ ಅದೃಷ್ಟ ತರಲಿ – ಯಶ್‍ಗೆ ಕಿಚ್ಚನ ಹಾರೈಕೆ
Cinema Latest Sandalwood Top Stories
Toxic Teaser RGV
ಟಾಕ್ಸಿಕ್ ಟೀಸರ್ ನೋಡಿ ಆರ್‌ಜಿವಿ ಹೇಳಿದ್ದೇನು ಗೊತ್ತಾ..?
Cinema Latest Top Stories
Toxic Movie Yash
ಟಾಕ್ಸಿಕ್ ರಾಯ ಹೆಸರಿನ ಗುಟ್ಟು ಇದೇನಾ..?
Cinema Latest Sandalwood Top Stories

You Might Also Like

Hubballi Keshwapur
Dharwad

ಹುಬ್ಬಳ್ಳಿ ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ವಿವಾದ – ಕೇಶ್ವಾಪುರ ಠಾಣೆ ಇನ್ಸ್‌ಪೆಕ್ಟರ್‌ ವರ್ಗಾವಣೆ

Public TV
By Public TV
45 minutes ago
Vijayapura 3
Districts

PUBLiC TV Impact | 4 ದಶಕಗಳ ಕನಸು ನನಸು – ವಿಜಯಪುರದ ಸೈಕ್ಲಿಂಗ್ ಪಥ ಲೋಕಾರ್ಪಣೆಗೆ ಸಿದ್ಧ

Public TV
By Public TV
51 minutes ago
Teacher
Crime

ಕೆಲಸ ಗಿಟ್ಟಿಸಿಕೊಳ್ಳಲು ಪಾಕ್‌ ರಾಷ್ಟ್ರೀಯತೆ ಮುಚ್ಚಿಟ್ಟಿದ್ದ ಶಿಕ್ಷಕಿ ವಿರುದ್ಧ FIR

Public TV
By Public TV
1 hour ago
Internet shutdown in Iran Massive protest at Khameneis hometown Mashhad
Latest

ಇರಾನ್‌ನಲ್ಲಿ ಇಂಟರ್‌ನೆಟ್‌ ಬಂದ್‌ – ಖಮೇನಿ ತವರಿನಲ್ಲೇ ಭಾರೀ ಪ್ರತಿಭಟನೆ

Public TV
By Public TV
1 hour ago
Sujata Handi
Dharwad

ಬಿಜೆಪಿ ಕಾರ್ಯಕರ್ತೆ ವಿವಸ್ತ್ರ ಪ್ರಕರಣದಲ್ಲಿ ಟ್ವಿಸ್ಟ್‌ – ʻಹನಿಟ್ರ್ಯಾಪ್ʼ ಲೇಡಿ ಸುಜಾತಾ ಹಂಡಿಯ ಅಸಲಿ ಮುಖ ಅನಾವರಣ!

Public TV
By Public TV
2 hours ago
RCB 3
Cricket

ಆರ್‌ಸಿಬಿ ತವರಿನ ಪಂದ್ಯಗಳು ರಾಯ್‌ಪುರ ಅಥವಾ ಇಂದೋರ್‌ಗೆ ಶಿಫ್ಟ್‌?

Public TV
By Public TV
3 hours ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?