Bigg Boss: ನಟನೆಯತ್ತ ಸಿಂಗರ್ ನವೀನ್ ಸಜ್ಜು

Public TV
2 Min Read
naveen sajju 1

‘ಬಿಗ್ ಬಾಸ್ ಸೀಸನ್ 6’ರ (Bigg Boss Kannada 6) ರನ್ನರ್ ಅಪ್ ನವೀನ್ ಸಜ್ಜು (Naveen Sajju) ಇದೀಗ ನಟನೆಯತ್ತ ವಾಲಿದ್ದಾರೆ. ತಮ್ಮ ಗಾಯನದ ಮೂಲಕ ಜನರ ಮನಗೆದ್ದ ನವೀನ್ ಈಗ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ‘ಚುಕ್ಕಿತಾರೆ’ ಎಂಬ ಹೊಸ ಸೀರಿಯಲ್ ಕಥೆ ಹೇಳಲು ರೆಡಿಯಾಗಿದ್ದಾರೆ. ಇದನ್ನೂ ಓದಿ:ಅಭಿಮಾನಿಯ ಆಟೋ ಓಡಿಸಿ ಶುಭಹಾರೈಸಿದ ಡ್ರೋನ್ ಪ್ರತಾಪ್

naveen sajju 1

ಬಿಗ್ ಬಾಸ್ ಕನ್ನಡ 10ರ ಶೋ ಮುಗಿದ ಬಳಿಕ ಸಾಲು ಸಾಲು ರಿಯಾಲಿಟಿ ಶೋ ಮತ್ತು ಧಾರಾವಾಹಿಗಳು ಪ್ರಸಾರವಾಗುತ್ತಿವೆ. ‘ಕರಿಮಣಿ’ ಎಂಬ ಸೀರಿಯಲ್ ನಂತರ ಈಗ ‘ಚುಕ್ಕಿತಾರೆ’ ಎಂಬ ಭಿನ್ನ ಕಥೆ ತೋರಿಸಲು ವಾಹಿನಿ ಸಜ್ಜಾಗಿದೆ. ‌ಸದ್ಯ ಸೀರಿಯಲ್ ಪ್ರೋಮೋ ನೋಡುಗರ ಗಮನ ಸೆಳೆಯುತ್ತಿದೆ.

naveen sajju

ಸದ್ಯ ರಿವೀಲ್ ಆಗಿರುವ ಪ್ರೋಮೋದಲ್ಲಿ ಹಳೆಯ ಕಾರಿನ ಮುಂದೆ ಇಬ್ಬರು ಹುಡುಗಿಯರು ನಿಂತು, ತಮ್ಮಿಷ್ಟದ ಹೆಸರುಗಳನ್ನು ಬರೆದಿದ್ದಾರೆ. ಅದೇ ಸಮಯಕ್ಕೆ ನವೀನ್ ಸಜ್ಜು ಕಲರ್‌ಫುಲ್ ಬಲೂನ್‌ಗಳನ್ನು ತಂದಿದ್ದಾರೆ. ಬಳಿಕ ಕಾರಿನ ಮೇಲೆ ‘ಚುಕ್ಕಿತಾರೆ’ ಎಂದು ಬರೆದು ನಗುತ್ತಲೇ ಮುಂದೆ ಸಾಗಿದ್ದಾರೆ.

ನವೀನ್ ಸಜ್ಜು ಅವರು ಶರ್ಟ್ ಮತ್ತು ಪಂಚೆ ಧರಿಸಿ ಹಳ್ಳಿ ಹುಡುಗನ ಗೆಟಪ್‌ನಲ್ಲಿ ಕಾಣಿಸಿಕೊಂಡಿರೋದು ಪ್ರೇಕ್ಷಕರ ಗಮನ ಸೆಳೆದಿದೆ. ಕಥೆ ಹೇಗಿರಬಹುದು, ನವೀನ್ ನಟನೆ ಹೇಗೆ ಮೂಡಿ ಬಂದಿದೆ ಎಂಬುದರ ಬಗ್ಗೆ ಅಭಿಮಾನಿಗಳಲ್ಲಿ ಕೌತುಕ ಮೂಡಿಸಿದೆ.

naveen sajju

ನವೀನ್ ಸಜ್ಜುಗೆ ಕಿರುತೆರೆ ಹೊಸದಲ್ಲ. 2018ರಲ್ಲಿ ಬಿಗ್ ಬಾಸ್ ಸೀಸನ್ 6ರಲ್ಲಿ ಸ್ಪರ್ಧಿಯಾಗಿ ಭಾಗವಹಿಸಿದ್ದರು. 100 ದಿನಗಳ ಕಾಲ ಮನೆಯಲ್ಲಿದ್ದು, ನವೀನ್ ಅಪಾರ ಅಭಿಮಾನಿಗಳ ಮನಗೆದ್ದಿದ್ದರು. ಮಾಡ್ರನ್ ರೈತ ಶಶಿ ಬಿಗ್ ಬಾಸ್ ವಿನ್ನರ್ ಆಗಿದ್ರೆ, ನವೀನ್ ಸಜ್ಜು ಮೊದಲ ರನ್ನರ್ ಅಪ್ ಆಗಿ ಹೊರಹೊಮ್ಮಿದ್ದರು.

ಲೂಸಿಯಾ, ಸಿಂಗ, ಗೋಲಿ ಸೋಡ, ಕನಕ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ಗಾಯಕರಾಗಿ ಹಾಡಿದ್ದಾರೆ. ಸಂಗೀತ ನಿರ್ದೇಶಕ ಕಮ್ ಗಾಯಕರಾಗಿರುವ ನವೀನ್ ಇದೀಗ ನಟನೆಯ ಮೂಲಕ ಅಭಿಮಾನಿಗಳ ಮನಗೆಲ್ಲಲು ರೆಡಿಯಾಗಿದ್ದಾರೆ. ನಟನಾಗಿ ಕೂಡ ನವೀನ್ ಗೆದ್ದು ಬೀಗುತ್ತಾರಾ ಎಂದು ಕಾಯಬೇಕಿದೆ.

Share This Article