ಹೆಣ್ಣು ಕರುಣಿಸೆಂದು ಮಾದಪ್ಪನ ಮೊರೆ ಹೋದ ಯುವಕರು

Public TV
1 Min Read
Male Madeshwara

ಚಾಮರಾಜನಗರ: ಹೆಣ್ಣು ಕರುಣಿಸೆಂದು ಮಾದಪ್ಪನ ಸನ್ನಿಧಿಗೆ ಕಾಲ್ನಡಿಗೆಯಲ್ಲಿ ಮಂಡ್ಯ (Mandya) ಜಿಲ್ಲೆಯ ಮಳವಳ್ಳಿ (malavalli) ತಾಲೂಕಿನ ಅಂಚೆದೊಡ್ಡಿಯಿಂದ ಒಂದು ಸಾವಿರಕ್ಕೂ ಹೆಚ್ಚು ಜನರು ಬಂದಿದ್ದಾರೆ.

ನಗರದಲ್ಲಿರುವ ಮಲೆ ಮಾದೇಶ್ವರನ (Male Madeshwara) ಸನ್ನಿಧಿಗೆ ಅಂಚೆದೊಡ್ಡಿಯ ಸುತ್ತಮುತ್ತಲ ನಾಲ್ಕೈದು ಗ್ರಾಮಗಳ ಜನರು ಕಾಲ್ನಡಿಗೆಯಲ್ಲಿ ಯಾತ್ರೆ ಮಾಡಿದ್ದಾರೆ. ಊರಿಗೆ ಊರೇ ಸುಮಾರು 115 ಕಿಲೋಮೀಟರ್ ದೂರದಿಂದ ಮಹದೇಶ್ವರ ಬೆಟ್ಟಕ್ಕೆ ಪಾದಯಾತ್ರೆ ಮಾಡಿದ್ದಾರೆ. ಇದನ್ನೂ ಓದಿ: ತಮಿಳುನಾಡಿಗೆ ಕಾವೇರಿ ನೀರು ಹರಿಸಲು CWRC ಶಿಫಾರಸು

ಗ್ರಾಮದಲ್ಲಿ ಮದುವೆ ವಯಸ್ಸಿಗೆ ಬಂದಿರುವ ನೂರಕ್ಕೂ ಹೆಚ್ಚು ಗಂಡು ಮಕ್ಕಳಿದ್ದಾರೆ. ಕೃಷಿ ಮಾಡುವ ತಮ್ಮ ಗಂಡು ಮಕ್ಕಳಿಗೆ ಯಾರೂ ಹೆಣ್ಣು ಕೊಡುತ್ತಿಲ್ಲ ಎಂದು ಪೋಷಕರ ಅಳಲು ತೊಡಿಕೊಂಡಿದ್ದಾರೆ. ಮಕ್ಕಳಿಗೆ ಮದುವೆ ವಯಸ್ಸು ಮೀರುತ್ತಿದೆ ಎಂಬ ಆತಂಕ ಪೋಷಕರಲ್ಲಿ ಕಾಡುತ್ತಿದೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

ಇದೇ ಹಿನ್ನೆಲೆಯಲಿ ಹೆಣ್ಣು ಕರುಣಿಸಪ್ಪ ಎಂದು ಪೋಷಕರು ಮಹದೇಶ್ವರನ ಮೊರೆ ಹೋಗಿದ್ದಾರೆ. ಚಿನ್ನದ ತೇರು ಎಳೆಸ್ತೀವಿ, ಹುಲಿವಾಹನ ಎಳೆಸ್ತೀವಿ, ಭಿಕ್ಷೆ ಎತ್ತಿ ಹುಂಡಿಗೆ ಹಣ ಹಾಕ್ತೀವಿ, ತಮ್ಮ ಶಕ್ತಿ ಇರುವವರೆಗೂ ಪಾದಯಾತ್ರೆ ಮಾಡಿ ನಿನ್ನ ಸೇವೆ ಮಾಡ್ತೀವಿ ಎಂದು ಹಲವಾರು ಹರಕೆಗಳನ್ನು ಕಟ್ಟಿಕೊಂಡಿದ್ದಾರೆ. ಇದನ್ನೂ ಓದಿ: ಪಬ್ಲಿಕ್‌ ಟಿವಿಗೆ ದ್ವಾದಶಿ ಸಂಭ್ರಮ – ರಾಮಮಂದಿರ ನಿರ್ಮಾಣದಲ್ಲಿ ಭಾಗಿಯಾದ ಕನ್ನಡಿಗರಿಗೆ ಅಭಿನಂದನೆ

ಈ ಮೊದಲು ಶಿವರಾತ್ರಿ ಹಾಗೂ ದೀಪಾವಳಿ ಸಂದರ್ಭದಲ್ಲಿ ಪಾದಯಾತ್ರೆ ಮಾಡುತ್ತಿದ್ದರು. ಇತ್ತೀಚಿನ ವರ್ಷಗಳಲ್ಲಿ ಇದು ಬದಲಾಗಿದ್ದು, ಈಗ ಬೇರೆ ಬೇರೆ ದಿನಗಳಲ್ಲೂ ಭಕ್ತ ಸಮೂಹ ಪಾದಯಾತ್ರೆ ಕೈಗೊಳ್ಳುತ್ತಿದೆ. ಇದನ್ನೂ ಓದಿ: ತೆರಿಗೆ ತಾರತಮ್ಯ; ರಾಜ್ಯಪಾಲರ ಭಾಷಣ ಮೂಲಕ ಕೇಂದ್ರದ ವಿರುದ್ಧ ರಾಜ್ಯ ಸರ್ಕಾರ ಕಿಡಿ

Share This Article