ಡಿಕೆಶಿ ಮತ್ತೆ ತಿಹಾರ್ ಜೈಲು ಸೇರುತ್ತಾರೆ: ಈಶ್ವರಪ್ಪ ಭವಿಷ್ಯ

Public TV
1 Min Read
DK SHIVAKUMAR ESHWARAPPA

ಮೈಸೂರು: ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮತ್ತೆ ತಿಹಾರ್ ಜೈಲು ಸೇರುತ್ತಾರೆ ಎಂದು ಮಾಜಿ ಸಚಿವ ಕೆ.ಎಸ್ ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಶಿವಕುಮಾರ್ (D.K Shivakumar) ಹಾಗೂ ಡಿ.ಕೆ ಸುರೇಶ್ (DK Suresh) ಇಬ್ಬರು ಗೂಂಡಾಗಳು ಎಂಬುದು ಜನರಿಗೆ ಗೊತ್ತಿದೆ. ನನ್ನ ಮಾತಿಗೆ ಸಿನ್ಮಾ ಸ್ಟೈಲ್‍ನಲ್ಲಿ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದ್ದಾರೆ. ಅವರ ಅರ್ಧ ಜೀವನ ತಿಹಾರ್ ಜೈಲಿನಲ್ಲಿ ಸೆಟ್ಲ್‍ಮೆಂಟ್ ಆಗಿದೆ. ಉಳಿದ ಇನ್ನೊಂದು ಪಾರ್ಟ್ ಕೂಡ ಜೈಲಿನಲ್ಲೇ ಸೆಟ್ಲ್‍ಮೆಂಟ್ ಆಗುತ್ತೆ. ನೋಡ್ತಾ ಇರಿ ಇಷ್ಟರಲ್ಲೆ ಡಿಕೆಶಿ ಮತ್ತೆ ತಿಹಾರ್ ಜೈಲು (Tihar Jail) ಸೇರುತ್ತಾರೆ ಎಂದಿದ್ದಾರೆ.

ಬಿಜೆಪಿ (BJP) ರಾಜ್ಯದ ಕೋರ್ ಕಮಿಟಿ ಸಭೆ ಇದೆ. ರಾಜ್ಯದ ಕಾರ್ಯಕರ್ತರ ದೃಷ್ಟಿಯಲ್ಲಿ ಒಳ್ಳೆಯದು. ಮುಂದಿನ ಅಭ್ಯರ್ಥಿಗಳ ಅಯ್ಕೆ ಬಗ್ಗೆ ಚರ್ಚೆ ಅಗಬಹುದು. ಮೈತ್ರಿ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆಯಾಗುವ ಸಾಧ್ಯತೆಗಳಿವೆ ಎಂದರು. ಇದನ್ನೂ ಓದಿ: ಅಮಿತ್ ಶಾ ಚುನಾವಣೆ ಇದ್ದಾಗ ರಾಜ್ಯಕ್ಕೆ ಬಂದೇ ಬರ್ತಾರೆ: ಜಿ.ಪರಮೇಶ್ವರ್

ರಾಷ್ಟ್ರದ್ರೋಹಿ ಹೇಳಿಕೆಗೆ ಡಿಕೆ ಸುರೇಶ್ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಪ್ರಶ್ನಿಸಿರುವ ಈಶ್ವರಪ್ಪ, ಕ್ರಮ ಕೈಗೋಳ್ಳಿ ಅಂದರೆ ನನಗೆ ನೋಟಿಸ್ ಕಳುಹಿಸುತ್ತಾರೆ. ರಾಷ್ಟ್ರ ದ್ರೋಹಿಗಳನ್ನ ರಕ್ಷಣೆ ಮಾಡಿದ್ದಾರೆ ಎಂದು ಕಿಡಿಕಾರಿದರು.

Share This Article