ಕಾಮಿಡಿ ಶೋನಲ್ಲಿ ಡೈಲಾಗ್ ಹೇಳಲು ಒದ್ದಾಡಿದ ಡ್ರೋನ್ ಪ್ರತಾಪ್

Public TV
1 Min Read
drone prathap 2

ಯಾರು ಯಾವುದನ್ನು ಮಾಡಬೇಕು ಅದನ್ನು ಮಾಡಿದರೇ ಚಂದ ಎನ್ನುವ ಮಾತಿದೆ. ಆಗದೇ ಇರೋದನ್ನು ನೋಡಿಯೇ ಬಿಡೋಣ ಎಂದರೆ ಅಲ್ಲೊಂದು ಎಡವಟ್ಟು ಕಾದಿರುತ್ತದೆ. ಅಂತಹ ಎಡವಟ್ಟಿಗೆ ಸಾಕ್ಷಿಯಾಗಿದ್ಧಾರೆ ಡ್ರೋನ್ ಪ್ರತಾಪ್.

Drone Prathap

ಬಿಗ್ ಬಾಸ್‌ನಿಂದ ಬಂದ್ಮೇಲೆ ಡ್ರೋನ್ ಪ್ರತಾಪ್ (Drone Pratap) ಹವಾ ಜೋರಾಗಿದೆ. `ಗಿಚ್ಚಿ ಗಿಲಿಗಿಲಿ 3′ (Gichchi Giligili) ಶೋಗೆ ಎಂಟ್ರಿ ಕೊಟ್ಟು ಕಾಮಿಡಿ ಮಾಡಲು ಪ್ರತಾಪ್ ಶುರು ಮಾಡಿದ್ದಾರೆ. ಇದೀಗ ವೇದಿಕೆಯಲ್ಲಿ ಡೈಲಾಗ್ ಹೇಳಲು ಪ್ರತಾಪ್ ತಿಣುಕಾಡಿದ್ದಾರೆ.

drone prathap 1

ಬಿಗ್ ಬಾಸ್ ಮನೆಗೆ ಕಾಲಿಡುವ ಮುನ್ನ ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದರು ಪ್ರತಾಪ್. ದೊಡ್ಮನೆಗೆ ಕಾಲಿಟ್ಟ ಮೇಲೆ ಸ್ಪರ್ಧಿಗಳಿಂದಲೂ ಭಾರೀ ಟಾರ್ಗೆಟ್ ಆಗಿದ್ದರು. ಬಳಿ ಎದುರಾಳಿಗಳಿಗೆ ಠಕ್ಕರ್ ಕೊಟ್ಟು ಬಿಗ್ ಬಾಸ್ ಫಿನಾಲೆಯಲ್ಲಿ ಪ್ರತಾಪ್ ಮೊದಲ ರನ್ನರ್ ಅಪ್ ಆಗಿ ಸ್ಥಾನ ಗಿಟ್ಟಿಸಿಕೊಂಡರು.

drone prathap 1

ಡ್ರೋನ್ ಪ್ರತಾಪ್ ಡ್ಯಾನ್ಸ್ನಲ್ಲಿ ಸೈ.. ಆದರೆ ಕಾಮಿಡಿ ಅಂತ ಬಂದಾಗ ಪ್ರತಾಪ್ ಕೊಂಚ ಹಿಂದೆ. ಇದೀಗ ಅಭಿನಯದ ಕಾಗುಣಿತ ಗೊತ್ತಿಲ್ಲದ ಪ್ರತಾಪ್ ಗಿಚ್ಚಿಗಿಲಿ ಗಿಲಿಗೆ ಎಂಟ್ರಿ ಕೊಟ್ಟು ಆ್ಯಕ್ಟಿಂಗ್ ಕಲಿಯುತ್ತಿದ್ದಾರೆ. ಅದಷ್ಟೇ ಅಲ್ಲ.. ಎಲ್ಲರನ್ನೂ ಹೊಟ್ಟೆ ಹುಣ್ಣಾಗುವಂತೆ ನಗಿಸುತ್ತಿದ್ದಾರೆ.

ಪ್ರತಾಪ್ ಈ ಬಾರಿ ಮಂತ್ರವಾದಿಯ ಗೆಟಪ್‌ನಲ್ಲಿ ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ. ಆಗ ಆತ್ಮವನ್ನು ಬದಲಿಸುವ ಸೀನ್‌ನಲ್ಲಿ ಆತ್ಮ ಆವಾಹಯಾಮಿ ಎಂದು ಡೈಲಾಗ್ ಹೇಳಬೇಕಿತ್ತು. ಆಗ ಪ್ರತಾಪ್.. ಡೈಲಾಗ್ ಹೇಳಲು ಆಗದೇ ತಿಣುಕಾಡಿದ್ದಾರೆ. ಹಾವಾಹಯಾಮಿ ಎಂದು ತಪ್ಪಾಗಿ ಡೈಲಾಗ್ ಹೇಳಿದ್ದಾರೆ. ಪ್ರತಾಪ್ ಮಾತಿಗೆ ಜಡ್ಜ್ಗಳಾದ ನಟಿ ಶ್ರುತಿ, ಕೋಮಲ್, ಸಾಧುಕೋಕಿಲ ಬಿದ್ದು ಬಿದ್ದು ನಕ್ಕಿದ್ದಾರೆ. ಒಟ್ನಲ್ಲಿ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಪ್ರತಾಪ್‌ನ ಹೊಸ ಜರ್ನಿಗೆ ಅಭಿಮಾನಿಗಳು ಸ್ವೀಟ್ ಆಗಿ ವಿಶ್ ಮಾಡ್ತಿದ್ದಾರೆ.

Share This Article