ಕರಟಕ ದಮನಕ ಸಿನಿಮಾದ ‘ಡೀಗ ದಿಗರಿ’ ಹಾಡು ಇಂದು ರಿಲೀಸ್

Public TV
2 Min Read
Karataka damanaka

ಯೋಗರಾಜ್ ಭಟ್ ನಿರ್ದೇಶನದಲ್ಲಿ ಮೂಡಿ ಬಂದಿರುವ ಕರಟಕ ದಮನಕ ಚಿತ್ರದ ‘ಡೀಗ ಡಿಗರಿ’ (Deega Digari) ಹಾಡಿನ ಬಿಡುಗಡೆ ಅಬುದಾಬಿಯಲ್ಲಿ ನಡೆಯಲಿದೆ. ಹಾಡು ಬಿಡುಗಡೆಗೂ ಮುನ್ನ ಚಿತ್ರತಂಡ ವಿಡಿಯೋ ಕಾನ್ಫರೆನ್ಸ್ ಮೂಲಕ ಪತ್ರಿಕಾಗೋಷ್ಠಿ ನಡೆಸಲಿದೆ‌. ಶಿವರಾಜಕುಮಾರ್, ಪ್ರಭುದೇವ, ರಾಕ್ ಲೈನ್ ವೆಂಕಟೇಶ್, ಯೋಗರಾಜ್ ಭಟ್ ಹಾಗೂ ಸಂಗೀತ ನಿರ್ದೇಶಕ ವಿ.ಹರಿಕೃಷ್ಣ ಭಾಗವಹಿಸುತ್ತಿದ್ದಾರೆ.

Karataka Damanaka

ಇದೇ ಮೊದಲ ಬಾರಿಗೆ ಪ್ರಭುದೇವ್ ಮತ್ತು ಶಿವರಾಜ್ ಕುಮಾರ್ ನಟಿಸಿರುವ ಕರಟಕ ದಮನಕ (Karataka Damanaka) ಸಿನಿಮಾ ಶಿವರಾತ್ರಿ ದಿನದಂದು ರಿಲೀಸ್ (Release)ಆಗಲಿದೆ. ಮಾರ್ಚ್ 8 ರಂದು ತಮ್ಮ ಚಿತ್ರವನ್ನು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಹೇಳಿಕೊಂಡಿದೆ. ಶಿವರಾತ್ರಿಗೆ ಶಿವಣ್ಣನ ಚಿತ್ರದ ಅಬ್ಬರ ಕೇಳಿ ಬರಲಿದೆ.

Karataka Damanaka 3

ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ ತಯಾರಾಗಿರುವ, ಯೋಗರಾಜ್ ಭಟ್ (Yogaraj Bhat) ನಿರ್ದೇಶನದ ಈ ಸಿನಿಮಾಗೆ ವಿಚಿತ್ರವಾಗಿರುವಂಥ ಶೀರ್ಷಿಕೆ ಇಡಲಾಗಿದೆ. ಈವರೆಗೂ ಟೈಟಲ್ ವಿಷಯದಲ್ಲಿ ಉಪೇಂದ್ರ ಮಾತ್ರ ತಲೆಕೆಡಿಸುತ್ತಿದ್ದರು. ಇದೀಗ ಆ ಸಾಲಿಗೆ ಯೋಗರಾಜ್ ಭಟ್ಟರು ಕೂಡ ಸೇರ್ಪಡೆಗೊಂಡಿದ್ದಾರೆ. ಟೈಟಲ್ ನೋಡಿದವರು, ಏನ್ ಗುರು ಇದರ ಅರ್ಥ ಎಂದು ಕೇಳುವಂತಾಗಿದೆ.

Karataka Damanaka 1

ಟೈಟಲ್ ಇಟ್ಟಾಗಿನಿಂದ ಈವರೆಗೂ ‘ಕರಟಕ ದಮನಕ’ ಎಂದರೇನು ಎನ್ನುವ ಕುರಿತು ಯೋಗರಾಜ್ ಭಟ್ ಎಲ್ಲಿಯೂ ಬಾಯಿ ಬಿಟ್ಟಿರಲಿಲ್ಲ. ಈ ಕುರಿತು ಅವರು ಇನ್ಸ್ಟಾದಲ್ಲಿ ಪೋಸ್ಟ್ ಮಾಡಿದ್ದರು. ಜೊತೆಗೆ ಚಿತ್ರದ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದ್ದರು. ‘ಒಂದಾನೊಂದು ಕಾಲದಲ್ಲಿ ಎರಡು ಕುತಂತ್ರಿ ನರಿಗಳಿದ್ದವು. ಒಂದರ ಹೆಸರು ಕರಟಕ ಇನ್ನೊಂದರ ಹೆಸರು ದಮನಕ. ಈ ಎರಡೂ ನರಿಗಳು ಕಾಡು ಮತ್ತು ನಾಡಿನ ತಲೆ ಕೆಡಿಸಿ ಇತಿಹಾಸವಾದವು. ಈ ಕುತಂತ್ರಿ ನರಿಗಳು ಇಂದು ಇಲ್ಲಿ ಮಾನವ ರೂಪ ತಾಳಿವೆ. ಎಚ್ಚರಿಕೆ’ ಎಂದು ಫೋಸ್ಟ್ ಮಾಡಿದ್ದರು.

 

ಸದಭಿರುಚಿ ಚಿತ್ರಗಳನ್ನು ಕನ್ನಡ ಚಿತ್ರರಂಗಕ್ಕೆ ನೀಡಿರುವ  ರಾಕ್ ಲೈನ್ ವೆಂಕಟೇಶ್ ನಿರ್ಮಾಣದಲ್ಲಿ, ಹೆಸರಾಂತ ನಿರ್ದೇಶಕ ಯೋಗರಾಜ್ ಭಟ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದ್ದು, ಮೊದಲ ಬಾರಿಗೆ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ (Shivaraj Kumar)  ಹಾಗೂ ಇಂಡಿಯನ್ ಮೈಕೆಲ್ ಜಾಕ್ಸನ್ ಪ್ರಭುದೇವ (Prabhudev) ಅಭಿನಯಿಸಿದ್ದು ವಿಶೇಷ.

Share This Article