ಬೆಂಗಳೂರು: ಪೌರಕಾರ್ಮಿಕರಿಗೆ ನಿವೇಶನ ನೀಡಲಾಗುವುದೆಂದು ಅಪಪ್ರಚಾರ ಮಾಡುತ್ತಿರುವ ಬಗ್ಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಸ್ಪಷ್ಟನೆ ನೀಡಿದೆ.
ಪಾಲಿಕೆ ವತಿಯಿಂದ ಪೌರಕಾರ್ಮಿಕರಿಗೆ (Pourakarmika) ನಿವೇಶನಗಳನ್ನು ನೀಡುವ ಯೋಜನೆ ಸದ್ಯಕ್ಕೆ ಇಲ್ಲ. ನಿವೇಶನ ಹಂಚಿಕೆ ಕುರಿತು ಅಧಿಕೃತವಾಗಿ ಪಾಲಿಕೆಯಿಂದ ಯಾವುದೇ ಅಧಿಸೂಚನೆ ಹೊರಡಿಸಿಲ್ಲ. ವದಂತಿಗಳನ್ನ ನಂಬಬೇಡಿ. ನಂಬಿ ಹಣ ಕೊಟ್ರೆ ಅದಕ್ಕೆ ಪಾಲಿಕೆ ಜವಾಬ್ದಾರಿಯಲ್ಲ ಅಂತ ಬಿಬಿಎಂಪಿ ಸ್ಪಷ್ಟಪಡಿಸಿದೆ.
ನಿವೇಶನ ಕೊಡಿಸೋದಾಗಿ ನಂಬಿಸಿ, ಅಮಾಯಕರಿಂದ ಹಣವನ್ನ ವಸೂಲಿ ಮಾಡುತ್ತಿರುವ ಬಗ್ಗೆ ಪಾಲಿಕೆಗೆ ದೂರುಗಳು ಬಂದಿದ್ದವು. ಇದರಿಂದ ಎಚ್ಚೆತ್ತ ಪಾಲಿಕೆ, ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಿದೆ. ಇದನ್ನೂ ಓದಿ: ಮೋದಿ ನಿತ್ಯ 3.5 ಗಂಟೆ ನಿದ್ದೆ, ಸಂಜೆ 6 ಗಂಟೆಯ ನಂತರ ಊಟ ಮಾಡಲ್ಲ