ನಟಿ ಸೋನಾಕ್ಷಿ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್

Public TV
1 Min Read
sonakshi sinha 5

ಣ ಪಡೆದು ಕಾರ್ಯಕ್ರಮವೊಂದರಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹ (Sonakshi Sinha) ಅವರ ಟೀಮ್ ವಿರುದ್ಧ ಜಾಮೀನು ರಹಿತ ವಾರೆಂಟ್ ಜಾರಿಯಾಗಿದೆ. ಸೋನಾಕ್ಷಿ ಅವರ ಮ್ಯಾನೇಜರ್ ಮತ್ತು ಟೀಮ್ ಗೆ ಬಂಧನದ ಭೀತಿ ಎದುರಾಗಿದೆ.

sonakshi sinha 2

ಖಾಸಗಿ ಕಾರ್ಯಕ್ರಮವೊಂದರಲ್ಲಿ ಭಾಗಿ ಆಗಲು ಸೋನಾಕ್ಷಿ ಹಣ ಪಡೆದಿದ್ದರು. ಹಣ ಪಡೆದುಕೊಂಡೂ ಅವರು ಕಾರ್ಯಕ್ರಮದಲ್ಲಿ ಭಾಗಿ ಆಗದೇ ಇರುವ ಕಾರಣಕ್ಕಾಗಿ ಆಯೋಜಕರಿಗೆ ಭಾರೀ ನಷ್ಟವಾಗಿತ್ತು ಎಂದು ದೂರು ದಾಖಲಾಗಿತ್ತು. ಈ ದೂರಿಗೆ ಸಂಬಂಧಿಸಿದಂತೆ ಮುರಾದಾಬಾದ್ (Muradabad) ನ್ಯಾಯಾಲಯವು ಜಾಮೀನು ರಹಿತ ವಾರೆಂಟ್ ಜಾರಿ ಮಾಡಿದೆ.

 

2018ರಲ್ಲಿ ಸೋನಾಕ್ಷಿ ಕಾರ್ಯಕ್ರಮಕ್ಕೆ ಬರಲು ಒಪ್ಪಿಕೊಂಡಿದ್ದರು. ಆಯೋಜಕ ಪ್ರಮೋದ್ ಶರ್ಮಾ (Pramod Sharma) ಬಳಿ ಹಣ ಪಡೆದಿದ್ದರು. ಕಾರ್ಯಕ್ರಮಕ್ಕೆ ಬಾರದೇ ಇರುವ ಕಾರಣಕ್ಕಾಗಿ 2019ರಂದು ಮುರಾದಾಬಾದ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿರುದ್ಧ ಸೋನಾಕ್ಷಿ ಟೀಮ್ ಕೂಡ ದೂರು ನೀಡಿದ್ದರು.

Share This Article