ಡಾರ್ಲಿಂಗ್‌ ಪ್ರಭಾಸ್‌ ಜೊತೆ ರಶ್ಮಿಕಾ ಮಂದಣ್ಣ ರೊಮ್ಯಾನ್ಸ್

Public TV
2 Min Read
rashmika mandanna

ಶ್ಮಿಕಾ (Rashmika Mandanna) ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾದಲ್ಲಿ ನಟಿಸಲಿದ್ದಾರಾ? ಹೌದು ಎನ್ನುತ್ತದೆ ಬಾಲಿವುಡ್ ಅಂಗಳ. ಕಾರಣ ಇದೆ. ಈಗಾಗಲೇ ‘ಅನಿಮಲ್’ (Animal) ಸಿನಿಮಾದಿಂದ ಭರ್ಜರಿ ಹೆಸರು ಮಾಡಿರುವ ಸಾನ್ವಿಗೆ ಅವಕಾಶ ಹುಡುಕಿಕೊಂಡು ಬರುತ್ತಿವೆ. ನಾಲ್ಕು ಕೋಟಿ ಸಂಭಾವನೆ ಪಡೆಯುತ್ತಿದ್ದರೂ ನಿರ್ಮಾಪಕರು ಈಕೆಯನ್ನು ಬಿಡುತ್ತಿಲ್ಲ. ಹಾಗಿದ್ದರೆ ಇನ್ಯಾವ ಸಿನಿಮಾಗೆ ರಶ್ಮಿಕಾಗೆ ಬುಲಾವ್ ಬಂದಿದೆ? ಯಾರು ಹೀರೋ? ಡಾರ್ಲಿಂಗ್‌ ಪ್ರಭಾಸ್ (Prabhas) ಮೊದಲ ಬಾರಿ ಜಂಟಿಯಾಗಲಿದ್ದಾರಾ ಶ್ರೀವಲ್ಲಿ? ಇಲ್ಲಿದೆ ಮಾಹಿತಿ.

Rashmika Mandanna

ರಶ್ಮಿಕಾ ಮಂದಣ್ಣ ಇದೀಗ ಬಹುಬೇಡಿಕೆಯ ನಟಿ, ಅವರನ್ನು ಹಿಡಿಯೋರು ಇಲ್ಲ. ‘ಅನಿಮಲ್’ ಸಿನಿಮಾದಿಂದ ಟಾಕ್ ಆಫ್ ದಿ ಇಂಡಿಯಾ ಆಗಿರುವ ಸಾನ್ವಿಗೆ ಒಂದರ ಹಿಂದೊಂದು ಅವಕಾಶ ಹುಡುಕಿಕೊಂಡು ಬರುತ್ತಿವೆ. ಆದರೆ ಡೇಟ್ ಸಿಗಬೇಕಲ್ಲವೇ? ಹೀಗಾಗಿಯೇ ಒಂದಲ್ಲ ಎರಡಲ್ಲ ಭರ್ತಿ 4 ಕೋಟಿ ಕೊಟ್ಟು ಬುಕ್ ಮಾಡುತ್ತಿದ್ದಾರೆ. ಆದರೆ ರಶ್ಮಿಕಾ ಮಾತ್ರ ನಾನು 4 ಕೋಟಿ ಸಂಭಾವನೆ ಪಡೆಯುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಎಲ್ಲವೂ ಇನ್‌ಕಮ್ ಟ್ಯಾಕ್ಸ್ ಮಹಿಮೆ. ಏನಾದರಾಗಲಿ ರಶ್ಮಿಕಾ ಮಾತ್ರ ಪ್ರಭಾಸ್ ಜೊತೆ ಹೆಜ್ಜೆ ಹಾಕಲು ಸಜ್ಜಾಗಿದ್ದಾರೆ. ಇದು ಬಾಲಿವುಡ್ ಮಾಹಿತಿ. ಸಂದೀಪ್ ರೆಡ್ಡಿ ವಂಗಾ (Sandeep Reddy Vanga) ನಿರ್ದೇಶನದ ‘ಸ್ಪಿರಿಟ್’ (Spirit Film) ಚಿತ್ರಕ್ಕೆ ರಶ್ಮಿಕಾ ಬುಕ್ ಆಗಿದ್ದಾರೆ. ಇದನ್ನೂ ಓದಿ:Exclusive: ತೆಲುಗಿನತ್ತ ಕನ್ನಡದ ನಟ- ಬಾಲಯ್ಯಗೆ ರಿಷಿ ವಿಲನ್

rashmika mandanna 5

‘ಅನಿಮಲ್’ ಸಿನಿಮಾದಿಂದ ಸಂದೀಪ್ ಹಾಗೂ ರಶ್ಮಿಕಾ ಒಂದಾಗಿದ್ದಾರೆ. ಅಂದರೆ ಹತ್ತಿರವಾಗಿದ್ದಾರೆ. ಹೀಗಾಗಿಯೇ ಸಂದೀಪ್ ಹೊಸ ಚಿತ್ರಕ್ಕೆ ಕನ್ನಡದ ನಟಿ ರಶ್ಮಿಕಾ ನಾಯಕಿ ಎಂದೇ ಹೇಳಲಾಗುತ್ತಿದೆ. ಇದನ್ನು ಯಾರೂ ಅಧಿಕೃತವಾಗಿ ಹೇಳಿಲ್ಲ. ಅದು ನಿಜವಾದರೂ ಅಚ್ಚರಿ ಇಲ್ಲ. ಕಾರಣ ‘ಅನಿಮಲ್’ ಸಿನಿಮಾದಲ್ಲಿ ರಶ್ಮಿಕಾ ಅಷ್ಟೊಂದು ಅದ್ಭುತವಾಗಿ ನಟಿಸಿದ್ದರು. ಜನರು ಮಾತ್ರ ಅಲ್ಲ. ರಶ್ಮಿಕಾ ನಿಜಕ್ಕೂ ಇಷ್ಟೊಂದು ಅದ್ಭುತವಾಗಿ ನಟಿಸುತ್ತಾರಾ ಎಂದು ಬಾಲಿವುಡ್ ಕೂಡ ಅಚ್ಚರಿ ಪಟ್ಟಿತ್ತು. ಅದನ್ನು ಸಾಬೀತು ಪಡಿಸಲು ಮತ್ತೆ ಅವಕಾಶ ಕೊಡುವ ಸಾಧ್ಯತೆ ಇದೆ. ಪ್ರಭಾಸ್‌ ಜೊತೆ ರಶ್ಮಿಕಾ ರೊಮ್ಯಾನ್ಸ್‌ ಮಾಡೋದ್ದಕ್ಕೆ ರೆಡಿಯಾಗಿದ್ದಾರೆ.

ಎಲ್ಲಾ ಸೂಪರ್ ಸ್ಟಾರ್‌ಗಳ ಜೊತೆ ನಟಿಸಿರುವ ರಶ್ಮಿಕಾ ಈಗ ಮೊದಲ ಬಾರಿಗೆ ಡಾರ್ಲಿಂಗ್ ಪ್ರಭಾಸ್‌ಗೆ  ಕನ್ನಡದ ನಟಿ ಜೋಡಿಯಾಗುತ್ತಿದ್ದಾರೆ. ಇವರಿಬ್ಬರ ಕಾಂಬೋ ತೆರೆಯ ಮೇಲೆ ವರ್ಕ್ ಆಗುತ್ತಾ ಕಾಯಬೇಕಿದೆ.

Share This Article