ನಾನು ಪಾರ್ಲಿಮೆಂಟ್‌ ಸದಸ್ಯತ್ವ ಕೇಳಿದ್ದೀನಿ: ವಿ ಸೋಮಣ್ಣ

Public TV
1 Min Read
SOMANNA

ಬೆಂಗಳೂರು: ನಾನು ಪಾರ್ಲಿಮೆಂಟ್‌ ಸದಸ್ಯತ್ವ ಕೇಳಿದ್ದೇನೆ ಎಂದು ಮಾಜಿ ಸಚಿವ ವಿ ಸೋಮಣ್ಣ (V Somanna) ಹೇಳಿದ್ದಾರೆ.

ತುಮಕೂರು ಲೋಕಸಭಾ (Tumakuru Lok Sabha Election) ಕ್ಷೇತ್ರದ ಟಿಕೆಟ್‌ ಕೇಳಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನಾನು ತುಮಕೂರು ಕ್ಷೇತ್ರದ ಆಕಾಂಕ್ಷಿ ಎಂದು ಎಲ್ಲಿಯೂ ಹೇಳಿಲ್ಲ. ತುಮಕೂರು ಅಭಿವೃದ್ಧಿಗಾಗಿ ನಾನು ಶ್ರಮವಹಿಸಿದ್ದೇನೆ. ನಾನು ಯಾವುದೇ ಕ್ಷೇತ್ರವನ್ನು ಕೇಳಿಲ್ಲ ಎಂದು ಹೇಳಿದರು.  ಇದನ್ನೂ ಓದಿ: ಮನಮೋಹನ್‌ ಸಿಂಗ್‌ರನ್ನು ಹಾಡಿ ಹೊಗಳಿದ ಪ್ರಧಾನಿ ಮೋದಿ

V Somanna JP Nadda

ಕಳೆದ ಬಾರಿ ನನಗೆ ಸೋಲಾಗಿದೆ. ಆದರೆ ನನ್ನ ಕಾರ್ಯವೈಖರಿ ನೋಡಿ ಹೈಕಮಂಡ್ ಯಾವ ಕ್ಷೇತ್ರ ನೀಡಿದರೂ ನನಗೆ ತೊಂದರೆಯಿಲ್ಲ. ವರಿಷ್ಠರ ಆದೇಶವನ್ನು ನಾನು ಮೀರುವುದಿಲ್ಲ. ಆದರೆ ಪಾರ್ಲಿಮೆಂಟ್ ಸದಸ್ಯತ್ವ ಕೇಳಿದ್ದೇನೆ. ರಾಜೀವ್ ಚಂದ್ರಶೇಖರ್ (Rajeev Chandrasekhar) ಅವರಿಗೆ ಪಾರ್ಲಿಮೆಂಟ್‌ ಸದಸ್ಯತ್ವ ಕೊಡದಿದ್ದರೆ ನನಗೆ ಕೊಡಿ ಎಂದಿದ್ದೇನೆ ಎಂದರು.

ನಾನು ತುಮಕೂರಿನಲ್ಲಿ ಕೆಲಸ ಮಾಡಿರುವುದನ್ನು ನೋಡಿ ನನ್ನ ಹೆಸರು ಕೇಳಿ ಬರುತ್ತಿದೆ. ತುಮಕೂರಿನಲ್ಲಿ ಜೆ.ಸಿ.ಮಾಧುಸ್ವಾಮಿ ಅವರು ಆಕಾಂಕ್ಷಿ ಎಂದು ಕೇಳಿಕೊಂಡಿದ್ದಾರೆ. ಅದಕ್ಕೆ ನನ್ನ ವಿರೋಧವಿಲ್ಲ ಎಂದು ಸೋಮಣ್ಣ ಹೇಳಿದರು. ಇದನ್ನೂ ಓದಿ: ಮೀಸಲಾತಿ ಪಡೆದವರು ಅದರಿಂದ ಹೊರಬಂದು ಹಿಂದುಳಿದವರಿಗೆ ಅವಕಾಶ ಕೊಡಲಿ: ಸುಪ್ರೀಂ

 

Share This Article