ದೆಹಲಿಯಲ್ಲಿ ಅನುದಾನ ಕದನ – ಇಂದು ಕೇಂದ್ರದ ವಿರುದ್ಧ ರಾಜ್ಯ ಸರ್ಕಾರದಿಂದ ಪ್ರತಿಭಟನೆ

Public TV
2 Min Read
Karnataka CM Siddaramaiah to lead Chalo Delhi protest today against Centres ‘financial injustice to State

ನವದೆಹಲಿ: ಲೋಕಸಭಾ ಚುನಾವಣೆ (Lok Sabah Election) ಸನಿಹದಲ್ಲಿ ಅನುದಾನ ಹಂಚಿಕೆ ವಿಚಾರವಾಗಿ ಕೇಂದ್ರ ಸರ್ಕಾರ (Union Government) ಮತ್ತು ಕರ್ನಾಟಕದ ಸರ್ಕಾರದ (Karnataka Government) ನಡುವಣ ಸಂಘರ್ಷ ಅಂತಿಮ ಘಟ್ಟ ತಲುಪಿದೆ.

ಇಂದು ಬೆಳಗ್ಗೆ 11 ಗಂಟೆಗೆ ದೆಹಲಿಯ ಜಂತರ್‌ಮಂತರ್‌ನಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಎಲ್ಲಾ ಶಾಸಕರು, ಎಂಎಲ್‌ಸಿಗಳು, ಸಂಸದರು ಪ್ರತಿಭಟನೆ (Protest) ನಡೆಸಲಿದ್ದಾರೆ.  ಇದನ್ನೂ ಓದಿ: ಆಸ್ಟ್ರೇಲಿಯಾ ಸೆನೆಟರ್‌ ಆಗಿ ಭಗವದ್ಗೀತೆ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಭಾರತ ಮೂಲದ ವರುಣ್‌

ಈ ಪ್ರತಿಭಟನೆಯಲ್ಲಿ ಭಾಗವಹಿಸುವಂತೆ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು, ಕೇಂದ್ರ ಸಚಿವ ಪ್ರಹ್ಲಾದ್‌ ಜೋಶಿ, ಶೋಭಾ ಕರಂದ್ಲಾಜೆ ಸೇರಿ ಎಲ್ಲಾ ಸಂಸದರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದು ಮನವಿ ಮಾಡಿದ್ದಾರೆ.  ಇದನ್ನೂ ಓದಿ: ಅಜಿತ್‌ ಪವಾರ್‌ ನೇತೃತ್ವದ NCP ನಿಜವಾದ ಪಕ್ಷ: ಚುನಾವಣಾ ಆಯೋಗ

ಕಾಂಗ್ರೆಸ್ (Congress) ಶಾಸಕರೆಲ್ಲಾ ತಮ್ಮ ಸ್ವಂತ ಖರ್ಚಿನಲ್ಲಿ ದೆಹಲಿ ಕಡೆ ಮುಖ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ ಮಂಗಳವಾರ ಸಂಜೆ ಭೋಪಾಲ್‌ಗೆ ತೆರಳಿದ್ದು, ರಾತ್ರಿಯೇ ದೆಹಲಿ ತಲುಪಿದ್ದಾರೆ. ಈ ಧರಣಿಯಲ್ಲಿ ಪಾಲ್ಗೊಳ್ಳದಿರಲು ತೀರ್ಮಾನಿಸಿರುವ ಬಿಜೆಪಿಗರನ್ನು ಕಾಂಗ್ರೆಸ್ಸಿಗರು ಕೆಣಕಲು ನೋಡಿದ್ದಾರೆ.

 

15ನೇ ಹಣಕಾಸು ಆಯೋಗದ `ಅನುದಾನ’ ಲೆಕ್ಕ
* 2020-2026ರ ಅವಧಿಗೆ ಅನ್ವಯವಾಗುವ ಹಣ ಹಂಚಿಕೆ ಶಿಫಾರಸು
* ಜನಸಂಖ್ಯೆ, ಭೂಪ್ರದೇಶ, ಅರಣ್ಯ, ಆದಾಯ ಅಂತರ, ತೆರಿಗೆ ಪರಿಗಣಿಸಿ ಅನುದಾನ ಹಂಚಿಕೆ
* 2011ರ ಜನಗಣತಿಯನ್ನು ಮೂಲ ವರ್ಷವಾಗಿ ಪರಿಗಣಿಸಿ ತೆರಿಗೆ ಪಾಲು ಹಂಚಿಕೆ
(ಈ ಹಿಂದಿನ ಎಲ್ಲಾ ಹಣಕಾಸು ಆಯೋಗಗಳಿಗೆ ತೆರಿಗೆ ಹಣ ಹಂಚಿಕೆಯಲ್ಲಿ 1972ನೇ ಇಸವಿಯನ್ನು ಮೂಲ ವರ್ಷವಾಗಿ ಪರಿಗಣಿಸಿದ್ದವು)

ಕರ್ನಾಟಕಕ್ಕೆ ತೆರಿಗೆ ಪಾಲು ಕಡಿತ ಆಗಿದ್ಯಾಕೆ?
* ಜನಸಂಖ್ಯೆ ನಿಯಂತ್ರಣ ಇರುವ ಕಾರಣ ಕರ್ನಾಟಕ ಸೇರಿ ದಕ್ಷಿಣ ರಾಜ್ಯಗಳಿಗೆ ಕಡಿಮೆ ಪಾಲು
* ತೆರಿಗೆ ಹಣ ಹಂಚಿಕೆಯಲ್ಲಿ ಕರ್ನಾಟಕಕ್ಕೆ 3.6%, ಕೇರಳಕ್ಕೆ 1.93%, ತಮಿಳುನಾಡಿಗೆ 4% ಪಾಲು
* ಇದು 14ನೇ ಹಣಕಾಸು ಆಯೋಗದ ಶಿಫಾರಸುಗಳಿಗಿಂತ ರಾಜ್ಯಕ್ಕೆ 13,633 ಕೋಟಿಯಷ್ಟು ಕಡಿಮೆ
(ರಾಜ್ಯದಿಂದ ತೆರಿಗೆ ರೂಪದಲ್ಲಿ ಕೇಂದ್ರಕ್ಕೆ ಹೋಗುವ ಹಣ 4 ಲಕ್ಷ ಕೋಟಿ ರೂಪಾಯಿ)
* ಜನಸಂಖ್ಯೆ ಹೆಚ್ಚಿರುವ ಕಾರಣ ಉತ್ತರ ಪ್ರದೇಶಕ್ಕೆ 18%, ಬಿಹಾರಕ್ಕೆ 10% ತೆರಿಗೆ ಹಣದ ಪಾಲು

Share This Article