ಮತ್ತೆ ನಿರ್ಮಾಣಕ್ಕಿಳಿದ ಆಲಿಯಾ ಭಟ್

Public TV
1 Min Read
alia bhatt

ಬಾಲಿವುಡ್ ಬ್ಯೂಟಿ ಆಲಿಯಾ ಭಟ್ (Alia Bhatt) ಸ್ಟಾರ್ ಆಗಿದ್ರೂ ಕೂಡ ತನ್ನ ಪ್ರತಿಭೆಯಿಂದ ಅಭಿಮಾನಿಗಳ ಮನಸ್ಸು ಗೆದ್ದಿದ್ದಾರೆ. ‘ಗಂಗೂಬಾಯಿ ಕಾಠಿಯಾವಾಡಿ’ ಚಿತ್ರದಲ್ಲಿನ ನಟನೆಗೆ ಆಲಿಯಾಗೆ ರಾಷ್ಟ್ರ ಪ್ರಶಸ್ತಿ ಕೂಡ ಲಭಿಸಿತ್ತು. ಇದೀಗ ನಿರ್ಮಾಣದತ್ತ (Producer) ನಟಿ ಮುಖ ಮಾಡಿದ್ದಾರೆ.

heart of stone alia bhatt 2

ಕಳೆದ ವರ್ಷ ‘ಡಾರ್ಲಿಂಗ್ಸ್’ (Darlings) ಎಂಬ ಸಿನಿಮಾಗೆ ಗೌರಿ ಖಾನ್ ಜೊತೆ ಸೇರಿ ನಿರ್ಮಾಣದ ಹೊಣೆ ಹೊತ್ತಿದ್ದರು. ಈಗ ‘ಪೋಚರ್’ ಕ್ರೈಂ ಡ್ರಾಮಾಗೆ ವೆಬ್ ಸರಣಿಗೆ ಕಾರ್ಯಕಾರಿ ನಿರ್ಮಾಪಕಿಯಾಗಿ (Executive Producer) ಆಲಿಯಾ ಭಟ್ ಸಾಥ್ ನೀಡಿದ್ದಾರೆ.

ALIA BHATT

ರಿಚ್ಚಿ ಮೆಹ್ತಾ ನಿರ್ದೇಶನ ಮಾಡಲಿರುವ ಹೊಸ ಕ್ರೈಂ ಡ್ರಾಮಾಕ್ಕೆ ಆಲಿಯಾ ಭಟ್ ಬಂಡವಾಳ ಹೂಡುತ್ತಿದ್ದಾರೆ. ತಮ್ಮ ಎಟರ್ನಲ್ ಸನ್‌ಶೈನ್ ನಿರ್ಮಾಣ ಸಂಸ್ಥೆಯ ಮೂಲಕ ಆಲಿಯಾ ನಿರ್ಮಾಣ ಮಾಡಲಿರುವ ಕ್ರೈಂ ಡ್ರಾಮಾಕ್ಕೆ ‘ಪೋಚರ್'(Poacher) ಎಂದು ಟೈಟಲ್ ಇಡಲಾಗಿದೆ. ರಿಯಲ್ ಕಥೆಯನ್ನು ಆಧರಿಸಿ ಈ ವೆಬ್ ಸರಣಿಯನ್ನು ನಿರ್ಮಾಣ ಮಾಡಲಾಗುತ್ತಿದೆ. ಆನೆ ದಂತ ಕಳ್ಳಸಾಗಣೆ ಕುರಿತಾದ ಕತೆಯನ್ನು ಒಳಗೊಂಡಿದ್ದು, ಭಾರತದ ಬೃಹತ್ ಆನೆ ದಂತ ಕಳ್ಳಸಾಗಣೆ ಜಾಲದ ಬಗ್ಗೆ ಈ ವೆಬ್ ಸರಣಿ ತೆರೆದಿಡಲಿದೆ. ಇದನ್ನೂ ಓದಿ:ನಿರ್ದೇಶಕ ಆರ್.ಚಂದ್ರು ಹುಟ್ಟುಹಬ್ಬ: ಅಭಿಮಾನಿ ಸಂಘದ ಜೊತೆ ಹೊಸ ಯೋಜನೆ ಘೋಷಣೆ

ಮಲಯಾಳಂನ ಜನಪ್ರಿಯ ನಟಿ ನಿಮಿಷಾ ಸಜಯನ್, ನಟ ರೋಷನ್ ಮ್ಯಾಥ್ಯು, ದಿಬ್ಯೇಂದು ಭಟ್ಟಾಚಾರ್ಯ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ‘ಪೋಚರ್’ ಮಲಯಾಳಂ, ಹಿಂದಿ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಲಭ್ಯವಾಗಲಿದ್ದು, ಇದೇ ಫೆ. 23ಕ್ಕೆ ವೆಬ್ ಸರಣಿ ಒಟಿಟಿಯಲ್ಲಿ ರಿಲೀಸ್ ಆಗಲಿದೆ. ‘ಪೋಚರ್’ ಪೋಸ್ಟರ್ ಶೇರ್ ಮಾಡಿ, ಕಾಡಿನ ಭೀಕರ ಮೌನ ಮಾರಣಾಂತಿಕ ಪಿತೂರಿಯೊಂದನ್ನು ಬಹಿರಂಗಪಡಿಸುತ್ತದೆ ಮತ್ತು ಬೇಟೆಗಾರನ ಬೇಟೆ ಪ್ರಾರಂಭವಾಗುತ್ತದೆ ಎಂಬ ಸಾಲುಗಳನ್ನು ಆಲಿಯಾ ಬರೆದಿದ್ದಾರೆ.

Share This Article