10 ವರ್ಷಗಳಲ್ಲಿ ಬಿಜೆಪಿಯಿಂದಾದ ಅಭಿವೃದ್ಧಿ ಕೆಲಸ ಮಾಡಲು ಕಾಂಗ್ರೆಸ್‌ಗೆ 100 ವರ್ಷ ಬೇಕಾಗುತ್ತೆ: ಮೋದಿ ವ್ಯಂಗ್ಯ

Public TV
2 Min Read
narendra modi

– ಕಾಂಗ್ರೆಸ್‌ ಅಂಗಡಿ ಬಂದ್‌ ಆಗುವ ಪರಿಸ್ಥಿತಿ ಬಂದಿದೆ
– ವಿಪಕ್ಷಗಳು ಪ್ರತಿಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿವೆ

ನವದೆಹಲಿ: 10 ವರ್ಷಗಳಲ್ಲಿ ಬಿಜೆಪಿಯಿಂದಾದ ಅಭಿವೃದ್ಧಿ ಕಾರ್ಯ ಮಾಡಲು ಕಾಂಗ್ರೆಸ್‌ 100 ವರ್ಷಗಳನ್ನು ತೆಗೆದುಕೊಳ್ಳುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಟೀಕಿಸಿದ್ದಾರೆ.

ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್‌ ಗುರಿಯಾಗಿಸಿಕೊಂಡು ಲೋಕಸಭೆಯ ಅಧಿವೇಶನದಲ್ಲಿ ಮಾತನಾಡಿದ ಮೋದಿ, ಅವರು (ಕಾಂಗ್ರೆಸ್) ವಿಫಲರಾಗಿದ್ದಾರೆ. ಅವರು ಸಂಸತ್ತು, ಪ್ರತಿಪಕ್ಷಗಳು ಮತ್ತು ದೇಶವನ್ನು ಹಾಳುಮಾಡಿದ್ದಾರೆ. ದೇಶಕ್ಕೆ ಪ್ರಬಲವಾದ ವಿರೋಧ ಪಕ್ಷದ ಅಗತ್ಯವಿದೆ ಎಂದು ನಾನು ನಂಬುತ್ತೇನೆ ಎಂದು ಅವರು ತಮ್ಮ ಪ್ರತಿಸ್ಪರ್ಧಿಗಳನ್ನು ಲೇವಡಿ ಮಾಡಿದ್ದಾರೆ. ಇದನ್ನೂ ಓದಿ: ಅನುದಾನ ಹಂಚಿಕೆಯಲ್ಲಿ ರಾಜ್ಯಗಳ ನಡುವೆ ತಾರತಮ್ಯ ಸಾಧ್ಯವಿಲ್ಲ: ನಿರ್ಮಲಾ ಸೀತಾರಾಮನ್ ಸ್ಪಷ್ಟನೆ

narendra modi lok sabha

ಪ್ರತಿಪಕ್ಷಗಳ ಸಂಕಲ್ಪವನ್ನು ನಾನು ಶ್ಲಾಘಿಸುತ್ತೇನೆ. ಹಲವು ದಶಕಗಳಿಂದ ನೀವು ಇಲ್ಲಿ (ಸರ್ಕಾರದಲ್ಲಿ) ಕುಳಿತುಕೊಂಡಿರುವ ರೀತಿ, ಅಲ್ಲಿಯೇ (ಪ್ರತಿಪಕ್ಷದಲ್ಲಿ) ಕುಳಿತುಕೊಳ್ಳಲು ನೀವು ನಿರ್ಧರಿಸಿರುವ ರೀತಿ. ಸಾರ್ವಜನಿಕರು ಖಂಡಿತವಾಗಿಯೂ ನೀಡುತ್ತಾರೆ. ಅವರ ಆಶೀರ್ವಾದ ನಿಮ್ಮ ಮೇಲಿರಲಿ ಎಂದು ವ್ಯಂಗ್ಯವಾಡಿದ್ದಾರೆ.

ನಿಮ್ಮಲ್ಲಿ ಅನೇಕರು (ಪ್ರತಿಪಕ್ಷಗಳು) ಚುನಾವಣೆಯಲ್ಲಿ ಸ್ಪರ್ಧಿಸುವ ಧೈರ್ಯವನ್ನು ಕಳೆದುಕೊಂಡಿರುವುದನ್ನು ನಾನು ನೋಡಿದ್ದೇನೆ. ಕಳೆದ ಬಾರಿಯೂ ಕೆಲವು ಸೀಟುಗಳು ಬದಲಾಗಿದ್ದವು. ಈ ಬಾರಿಯೂ ಸೀಟು ಬದಲಾಯಿಸಲು ಹಲವರು ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ. ಈಗ ಅನೇಕರು ಲೋಕಸಭೆಯ ಬದಲು ರಾಜ್ಯಸಭೆಗೆ ಹೋಗಲು ಬಯಸುತ್ತಾರೆ ಎಂದು ನಾನು ಕೇಳಿದ್ದೇನೆ. ಪರಿಸ್ಥಿತಿಯನ್ನು ನಿರ್ಣಯಿಸುವ ಮೂಲಕ ಅವರು ತಮ್ಮ ಮಾರ್ಗಗಳನ್ನು ಹುಡುಕುತ್ತಿದ್ದಾರೆ ಎಂದು ವಿಪಕ್ಷಗಳಿಗೆ ಟಾಂಗ್‌ ಕೊಟ್ಟಿದ್ದಾರೆ. ಇದನ್ನೂ ಓದಿ: ಲೋಕಸಭೆಗೆ ಅಲ್ಲ, ರಾಜ್ಯಸಭೆಗೆ ದೆಹಲಿಯಲ್ಲಿ ವಿ.ಸೋಮಣ್ಣ ಲಾಬಿ!

lok sabha bjp leaders

ವಿಪಕ್ಷಗಳು ಪ್ರತಿಪಕ್ಷದಲ್ಲಿಯೇ ಉಳಿಯಲು ನಿರ್ಧರಿಸಿವೆ. ಪ್ರತಿಪಕ್ಷವಾಗಿ ತಮ್ಮ ಜವಾಬ್ದಾರಿಯನ್ನು ಪೂರೈಸುವಲ್ಲಿ ಅವರು (ವಿರೋಧ) ವಿಫಲರಾಗಿದ್ದಾರೆ. ದೇಶಕ್ಕೆ ಉತ್ತಮ ಪ್ರತಿಪಕ್ಷ ಬೇಕು ಎಂದು ನಾನು ಯಾವಾಗಲೂ ಹೇಳುತ್ತಿದ್ದೆ ಎಂದು ಚಾಟಿ ಬೀಸಿದ್ದಾರೆ.

ಕಾಂಗ್ರೆಸ್ ಪರಿಸ್ಥಿತಿಯನ್ನು ನೋಡಿ. ಖರ್ಗೆ ಅವರು ಈ ಸದನದಿಂದ ಆ ಸದನಕ್ಕೆ ಹೋಗಿದ್ದಾರೆ. ಗುಲಾಂ ನಬಿ ಪಕ್ಷದಿಂದಲೇ ಶಿಫ್ಟ್ ಆದರು. ಒಂದೇ ಪ್ರಾಡಕ್ಟ್ ಅನ್ನು ಹಲವು ಬಾರಿ ಲಾಂಚ್ ಮಾಡುವ ಪ್ರಯತ್ನ ವಿಫಲವಾಗಿದೆ. ಅಂಗಡಿ ಬಂದ್ ಆಗುವ ಪರಿಸ್ಥಿತಿ ಬಂದಿದೆ ಎಂದು ಕಾಂಗ್ರೆಸ್‌ ಕಾಲೆಳೆದಿದ್ದಾರೆ. ಇದನ್ನೂ ಓದಿ: ವಿಶ್ವಾಸಮತ ಗೆದ್ದ ಜಾರ್ಖಂಡ್‌ ನೂತನ ಸಿಎಂ ಚಂಪೈ ಸೊರೇನ್‌

Share This Article