ನನ್ನ ರಾಮನನ್ನು ಬಿಜೆಪಿಗೆ ಬಿಟ್ಟುಕೊಡಲ್ಲ – ಶಶಿ ತರೂರ್‌

Public TV
1 Min Read
Shashi Tharoor

ನವದೆಹಲಿ: ಯಾವುದೇ ಕಾರಣಕ್ಕೂ ನನ್ನ ರಾಮನನ್ನು ಬಿಜೆಪಿಗೆ (BJP) ಬಿಟ್ಟುಕೊಡುವುದಿಲ್ಲ ಎಂದು ಕಾಂಗ್ರೆಸ್‌ ಹಿರಿಯ ನಾಯಕ ಶಶಿ ತರೂರ್‌ (Shashi Tharoor) ಹೇಳಿದ್ದಾರೆ.

ಖಾಸಗಿ ವಾಹಿನಿಯೊಂದಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬಾಲ್ಯದಿಂದಲೂ ರಾಮನನ್ನು ಪ್ರಾರ್ಥಿಸುತ್ತಿದ್ದೇನೆ. ಆದ್ರೆ ನನ್ನ ರಾಮನನ್ನು ಬಿಜೆಪಿಗೆ ಒಪ್ಪಿಸಲು ಹೋಗಲ್ಲ. ಏಕೆಂದರೆ ಬಿಜೆಪಿ ಶ್ರೀರಾಮನ (Lard Rama) ಮೇಲೆ ಹಕ್ಕುಸ್ವಾಮ್ಯವನ್ನಾಗಲಿ, ದೈವಿಕತೆಯನ್ನಾಗಲಿ ಹೊಂದಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಮ್ಮ ಗ್ಯಾರಂಟಿಗಳನ್ನು ನೋಡಿಕೊಂಡು ಬಿಜೆಪಿ ಮೋದಿ ಗ್ಯಾರಂಟಿ, ಮೋದಿ ಗ್ಯಾರಂಟಿ ಅಂತಾರೆ: ಸಿದ್ದರಾಮಯ್ಯ

Ayodhya Ram Lalla 1ರಾಮಮಂದಿರ ಉದ್ಘಾಟನೆ ಆರ್‌ಎಸ್‌ಎಸ್‌ ಮತ್ತು ಬಿಜೆಪಿ (RSS & BJP) ಕಾರ್ಯಕ್ರಮವಾದ್ದರಿಂದ ಉದ್ಘಾಟನೆ ವೇಳೆ ಸಮಾರಂಭದಲ್ಲಿ ಕಾಂಗ್ರೆಸ್‌ ನಾಯಕರು ಭಾಗವಹಿಸಲಿಲ್ಲ. ಹಾಗೆಂದ ಮಾತ್ರಕ್ಕೆ ಹಿಂದೂ ಧರ್ಮ ಅಥವಾ ಭಗವಾನ್‌ ಶ್ರೀರಾಮನ ಬಗ್ಗೆ ಕಾಂಗ್ರೆಸ್ ಎಂದಿಗೂ ಋಣಾತ್ಮಕವಾಗಿ ಏನನ್ನೂ ಹೇಳಲಿಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ. ಇದನ್ನೂ ಓದಿ: KSRTCಗೆ 800 ʻಅಶ್ವಮೇಧʼ ಕ್ಲಾಸಿಕ್ ಬಸ್‌ಗಳ ಬಲ – 100 ಬಸ್‌ಗಳಿಗೆ ಸಿದ್ದರಾಮಯ್ಯರಿಂದ ಚಾಲನೆ

ram lalla narendra modi puja 6

ʻಕಾಂಗ್ರೆಸ್‌ ಹಿಂದೂ ವಿರೋಧಿʼ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿದ ತರೂರ್‌, ರಾಮಮಂದಿರ ಉದ್ಘಾಟನೆಗೆ ಬಾರದಿದ್ದ ಮಾತ್ರಕ್ಕೆ ಹಿಂದೂ ವಿರೋಧಿ ಅನ್ನೋದು ಅಸಂಬದ್ಧ. ಹಾಗೆ ನೋಡಿದ್ರೆ ಭಾರತದಲ್ಲಿ ಶೇ.80 ರಷ್ಟು ಹಿಂದೂಗಳೇ ಇದ್ದಾರೆ. ನಮ್ಮ ಕಾಂಗ್ರೆಸ್‌ ಪಕ್ಷದ ಶೇ.80 ರಷ್ಟು ನಾಯಕರು ಹಿಂದೂಗಳೇ ಆಗಿದ್ದಾರೆ ಎಂದು ತಿವಿದಿದ್ದಾರೆ.

ಇದೇ ವೇಳೆ I.N.D.I.A. ಒಕ್ಕೂಟದಲ್ಲಿ ಪ್ರಧಾನಿ ಅಭ್ಯರ್ಥಿ ಕೊರತೆ ಬಗ್ಗೆ ಉತ್ತರಿಸಿದ ಅವರು, ಕಾಂಗ್ರೆಸ್ ಸಂಸದರು ಮೈತ್ರಿಯ ಗಮನವು ಸಮಸ್ಯೆಗಳ ಮೇಲಿದೆಯೇ ಹೊರತು ವ್ಯಕ್ತಿತ್ವಗಳಲ್ಲ ಎಂದು ಸಮರ್ಥಿಸಿಕೊಂಡಿದ್ದಾರೆ.

ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರು I.N.D.I.A. ಒಕ್ಕೂಟದಿಂದ ಹೊರಬಂದು ಏಕಾಂಗಿಯಾಗಿ ಲೋಕಸಭಾ ಚುನಾವಣೆ ಎದುರಿಸುವುದಾಗಿ ಹೇಳಿದ ಬಳಿಕ ಬಿಹಾರದ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಸಹ I.N.D.I.A. ಒಕ್ಕೂಟ ತೊರೆದು NDA ಮೈತ್ರಿಕೂಟ ಸೇರ್ಪಡೆಯಾದರು. ಇದನ್ನೂ ಓದಿ: ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ

Share This Article