ಜಿಡಿಎಸ್‌ಗೆ ವೋಟ್ ಹಾಕಿದ್ದಕ್ಕೆ ಗಂಗಾ ಕಲ್ಯಾಣ ಪಟ್ಟಿಗೆ ತಡೆ – ಸಚಿವ ವೆಂಕಟೇಶ್ ವಿರುದ್ಧ ರೈತರ ಕಿಡಿ

Public TV
1 Min Read
Farmers

ಮೈಸೂರು: ಪಿರಿಯಾಪಟ್ಟಣದಲ್ಲಿ (Piriyapatna) ಮತ್ತೆ ದ್ವೇಷದ ರಾಜಕಾರಣ ಶುರುವಾಗಿದೆ. ಬೋರ್‌ವೆಲ್ ರಾಜಕೀಯ ಜೋರಾಗಿದ್ದು ರೈತರಿಗೆ ಮಂಜೂರಾಗಿದ್ದ ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನು ಖುದ್ದು ಸಚಿವ ಕೆ.ವಂಕಟೇಶ್  (K.Venkatesh ) ತಡೆಹಿಡಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಯೋಜನೆ ಪಟ್ಟಿಯನ್ನು ಸಚಿವ ಕೆ.ವಂಕಟೇಶ್ ತಡೆದಿರುವ ವಿಚಾರ ಕುರಿತು ಪ್ರತಿಕ್ರಿಯಿಸಿದ ರೈತರು, ಗಂಗಾ ಕಲ್ಯಾಣ ಯೋಜನೆ ಪಟ್ಟಿಯನ್ನು ಖುದ್ದು ವಂಕಟೇಶ್ ತಡೆಹಿಡಿಸಿದ್ದಾರೆ. ಮಾಜಿ ಶಾಸಕ ಜೆಡಿಎಸ್‌ನ ಕೆ.ಮಹದೇವ್  (K.Mahadeva )ಮೇಲಿನ ಸೇಡಿಗೆ ನಮ್ಮ ಭವಿಷ್ಯ ಬಲಿಯಾಗುತ್ತಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಇಷ್ಟಾರ್ಥಸಿದ್ಧಿಗಾಗಿ ಹರಕೆ ಕೋಲ ನೆರವೇರಿಸಿದ ಯು.ಟಿ ಖಾದರ್

2021 ರಿಂದ 23ನೇ ಸಾಲಿನವರೆಗೆ ನೂರಕ್ಕೂ ಹೆಚ್ಚು ರೈತರು ಗಂಗಾ ಕಲ್ಯಾಣ ಯೋಜನೆಯ ಫಲಾನುಭವಿಗಳಾಗಿ ಆಯ್ಕೆಯಾಗಿದ್ದರು. ಹಿಂದಿನ ಜೆಡಿಎಸ್ ಶಾಸಕ ಕೆ.ಮಹದೇವ್ ಇದ್ದ ಸಮಯದಲ್ಲಿ ಆಯ್ಕೆ ಮಾಡಿ ತಯಾರಾಗಿ ಮಂಜೂರಾತಿ ಸಿಕ್ಕಿತ್ತು. ಇದೀಗ ವೆಂಕಟೇಶ್ ಈ ಪಟ್ಟಿ ಜಾರಿಗೆ ಅಡ್ಡಿಯಾಗಿ ನಿಂತಿದ್ದಾರೆ. ಕಳೆದ ಬಾರಿ ಮಹದೇವ್ ಪರ ಚುನಾವಣೆಯಲ್ಲಿ ಕೆಲಸ ಮಾಡಿದ್ದೇವೆ ಎಂಬ ಕಾರಣ ಇಟ್ಟುಕೊಂಡು ದ್ವೇಷ ಸಾಧಿಸುತ್ತಿದ್ದಾರೆ ಎಂದು ರೈತರು ಆರೋಪಿಸಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ನಷ್ಟ ಭರಿಸಿದ್ರೆ ಮಾತ್ರ ಪ್ರತಿಭಟನಾಕಾರರಿಗೆ ಜಾಮೀನು – ಕಾನೂನು ಆಯೋಗ ಶಿಫಾರಸು

Share This Article