ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಲು ಜೆಡಿಎಸ್‌ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದೆ: ಸುಧಾಕರ್

Public TV
1 Min Read
dr sudhkar

ಚಿಕ್ಕಬಳ್ಳಾಪುರ: ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರು ಹಾಗೂ ಕುಮಾರಸ್ವಾಮಿ ಅವರು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ನನಗೆ ಹಸಿರು ನಿಶಾನೆ ತೋರಿದ್ದಾರೆ ಎಂದು ಮಾಜಿ ಸಚಿವ ಡಾ.ಕೆ.ಸುಧಾಕರ್ ಹೇಳಿದ್ದಾರೆ.

ಜಿಲ್ಲೆಯ ಚೇಳೂರು ಬ್ರಾಹ್ಮಣರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ನನಗೆ ಬಿಜೆಪಿ ನಾಯಕರು ಟಿಕೆಟ್ ನೀಡುವ ವಿಶ್ವಾಸವಿದೆ. ಹಾಗೆಯೇ ಕುಮಾರಸ್ವಾಮಿ ಹಾಗೂ ಹೆಚ್ ಡಿ ದೇವೇಗೌಡರು ಸಹ ಹಸಿರು ನಿಶಾನೆ ತೋರಿದ್ದು ಕೆಲಸ ಪ್ರಾರಂಭ ಮಾಡಲು ತಿಳಿಸಿದ್ದಾರೆ ಎಂದಿದ್ದಾರೆ. ಇದನ್ನೂ ಓದಿ: ಇಂದು ಮೋದಿ ಭಾಷಣ – ಬಿಜೆಪಿ ಸಂಸದರ ಹಾಜರಿ ಕಡ್ಡಾಯ

sudhakar devegowda

ನಿಮಗೆಲ್ಲಾ ಸುಧಾಕರ್ ಅಂದ್ರೆ ಅಭಿವೃದ್ಧಿ ಅಭಿವೃದ್ಧಿ ಅಂದ್ರೆ ಸುಧಾಕರ್ ಎನ್ನುವುದು ಗೊತ್ತಿದೆ. ನಾನು ಸಂಸದನಾದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಅಭಿವೃದ್ಧಿ ಮಾಡಲಿದ್ದೇನೆ. ಕೃಷಿ, ನೀರಾವರಿ, ಕೈಗಾರಿಕೆಗಳ ಸ್ಥಾಪನೆ, ಯುವಕರಿಗೆ ಉದ್ಯೋಗ ಕೊಡಿಸವ ಮೂಲಕ ಅಭಿವೃದ್ಧಿ ಏನು ಅಂತ ತೋರಿಸಲಿದ್ದೇನೆ. ಹಾಗಾಗಿ ನಾನು ದೇವ ಮೂಲೆ ಚಾಕ್ ವೇಲ್ ಮೂಲಕ ಚುನಾವಣಾ ಪ್ರಚಾರ ಆರಂಭಿಸಿದ್ದೇನೆ ಎಂದು ನುಡಿದ್ದಾರೆ.  ಇದನ್ನೂ ಓದಿ: ಮಂಡ್ಯ ಕ್ಷೇತ್ರವನ್ನು JDSಗೆ ಬಿಟ್ಕೊಡಬಾರದು – BJP ಹೈಕಮಾಂಡ್ ಮೇಲೆ ನಾರಾಯಣಗೌಡ, ಪ್ರೀತಂ ಒತ್ತಡ

ಕಳೆದ ವಿಧಾನಸಭೆ ಚುನಾವಣೆ ಯಲ್ಲಿ ಸೋತು ನಂತರ ಈಗ ಲೋಕ ಸಮರದತ್ತ ಸುಧಾಕರ್ ಚಿತ್ತ ಹರಿಸಿದ್ದು ದೆಹಲಿಗೆ ಭೇಟಿ ಮಾಡಿ‌ ಇತ್ತೀಚೆಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಡ್ಡಾರನ್ನು ಭೇಟಿಯಾಗಿದ್ದರು.

ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ ಎಲ್ ಸಂತೋಷ್, ಪ್ರಹ್ಲಾದ್ ಜೋಷಿ ನಂತರ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಹಾಗೂ ಕುಮಾರಸ್ವಾಮಿ ಅವರನ್ನು ಹಲವು ಬಾರಿ ಭೇಟಿ ಮಾಡಿ ಸ್ಪರ್ಧೆಗೆ ಅವಕಾಶ ಕೊಡುವಂತೆ ಸುಧಾಕರ್‌ ಮನವಿ ಮಾಡಿಕೊಂಡಿದ್ದರು.

Share This Article