ಮುಸ್ಲಿಮರ ತುಷ್ಟೀಕರಣಕ್ಕೆ ಶುಕ್ರವಾರ ಮಧ್ಯಾಹ್ನ ಎಸ್‍ಎಸ್‍ಎಲ್‍ಸಿ ಪರೀಕ್ಷೆ ನಿಗದಿ: ಮುತಾಲಿಕ್ ಆರೋಪ

Public TV
1 Min Read
Pramodh Muthalik

ಚಿಕ್ಕೋಡಿ: ಎಸ್‍ಎಸ್‍ಎಲ್‍ಸಿ ಪರೀಕ್ಷಾ (SSLC Exam) ವೇಳಾಪಟ್ಟಿ ನಿಗದಿಯಲ್ಲೂ ಮುಸ್ಲಿಂ ತುಷ್ಟೀಕರಣಕ್ಕೆ ಸರ್ಕಾರ ಮುಂದಾಗಿದೆ ಎಂದು ಶ್ರೀರಾಮಸೇನೆ (Sri Ram Sene) ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Muthalik) ಆರೋಪಿಸಿದ್ದಾರೆ.

ಹುಕ್ಕೇರಿಯಲ್ಲಿ `ಪಬ್ಲಿಕ್ ಟಿವಿ’ ಜೊತೆ ಮಾತನಾಡಿದ ಅವರು, ಮಾ.1 ರಂದು ಶುಕ್ರವಾರ ಮುಸ್ಲಿಮರ ನಮಾಜಿನ ಸಮಯಕ್ಕಾಗಿ ಮಧ್ಯಾಹ್ನ ಪರೀಕ್ಷೆ ಅನುಗುಣವಾಗಿ ಪರೀಕ್ಷೆಯನ್ನು ನಿಗದಿ ಮಾಡಿದೆ. ಸರ್ಕಾರ ಮುಸ್ಲಿಮರ ಓಲೈಕೆ ಮುಂದುವರೆಸಿದೆ. ಶಿಕ್ಷಣ ಕ್ಷೇತ್ರದಲ್ಲೂ ತುಷ್ಟೀಕರಣ ಮಾಡುತ್ತಿದೆ. ಫೆ.26ರಿಂದ ಮಾ.2ರ ವರೆಗೆ ವೇಳಾಪಟ್ಟಿ ನಿಗದಿ ಮಾಡಲಾಗಿದೆ. ಪ್ರತಿನಿತ್ಯ ಬೆಳಿಗ್ಗೆ 10:30 ರಿಂದ 1:30 ಸಮಯ ನಿಗದಿ ಮಾಡಲಾಗಿದೆ. ಶುಕ್ರವಾರ ಮಾತ್ರ ಮಧ್ಯಾಹ್ನ 2 ಗಂಟೆಗೆ ಪರೀಕ್ಷೆ ಪ್ರಾರಂಭವಾಗುತ್ತಿದೆ ಎಂದು ಅವರು ಕಿಡಿಕಾರಿದ್ದಾರೆ. ಇದನ್ನೂ ಓದಿ: ತೆರಿಗೆ ಹಣ ದಾನ ಮಾಡಿ ರಾಜ್ಯ ಅಭಿವೃದ್ಧಿಯಾಗದಂತೆ ಮಾಡಿದ್ದಾರೆ: ಕಾಂಗ್ರೆಸ್ ವಿರುದ್ಧ ಮುನಿರತ್ನ ಕಿಡಿ

ಶುಕ್ರವಾರ ದಿನವೇ ಮಧ್ಯಾಹ್ನ 2 ಗಂಟೆಗೆ ಸಮಯ ನಿಗದಿ ಮಾಡಿದ್ದು ನಮಾಜಿಗೋಸ್ಕರ. ಇದು ಮುಸ್ಲಿಮರ ಒಲೈಕೆಗಾಗಿ, ಕೆಲವೇ ಕೆಲವು ಜನರಿಗಾಗಿ ಲಕ್ಷಾಂತರ ಹಿಂದೂಗಳ ಮೇಲೆ ಸಮಯದ ಹೇರಿಕೆ ತುಷ್ಟೀಕರಣ ನೀತಿ ಸ್ಪಷ್ಟವಾಗಿದೆ. ಸರ್ಕಾರದ ನೀತಿಯನ್ನು ಶ್ರೀರಾಮ ಸೇನೆ ಖಂಡಿಸುತ್ತದೆ ಎಂದಿದ್ದಾರೆ.

ಕಾಂಗ್ರೆಸ್ ಸರ್ಕಾರ ಆಡಳಿತ ಬಂದಾಗಿನಿಂದ ಹಿಂದೂಗಳ ಮೇಲೆ ನಿರಂತರ ದೌರ್ಜನ್ಯ ಮಾಡುತ್ತಿದೆ. ಪರೀಕ್ಷೆಯಲ್ಲಿ ಹಿಜಾಬ್‍ಗೆ ಅವಕಾಶ ಕೊಟ್ಟು ಹಿಂದೂಗಳ ತಾಳಿ, ಕಾಲುಂಗುರ ತೆಗೆಸಿದ್ದಾರೆ. ಮುಸ್ಲಿಮರ ಒಲೈಕೆ ಮಾಡುವುದರ ಜೊತೆಗೆ ಹಿಂದೂಗಳ ದೌರ್ಜನ್ಯ ಮುಂದುವರೆದಿದೆ. ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಶುಕ್ರವಾರದ ಸಮಯ ಬದಲಾವಣೆ ಮಾಡಬೇಕು. ಇಲ್ಲವಾದಲ್ಲಿ ಶ್ರೀರಾಮಸೇನೆ ಹೋರಾಟ ಮಾಡಲಿದೆ ಎಂದು ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ದೇಶ ವಿಭಜನೆ ಮಾಡುವುದು ಕಾಂಗ್ರೆಸ್‌ನ ಸಂಸ್ಕೃತಿ: ಬಿವೈ ರಾಘವೇಂದ್ರ

Share This Article