ಶಾಮನೂರು ಶಿವಶಂಕರಪ್ಪ ಅತಿಥಿಗೃಹವನ್ನು ಉದ್ಘಾಟಿಸಲಿದ್ದಾರೆ ಅಮಿತ್‌ ಶಾ

Public TV
1 Min Read
amit shah

ಬೆಂಗಳೂರು: ವಿಧಾನಸಭೆ ಚುನಾವಣೆ ಸೋಲಿನ ಬಳಿಕ ಗೃಹ ಸಚಿವ ಅಮಿತ್ ಶಾ (Amit Shah) ಮುಂದಿನ ವಾರ ರಾಜ್ಯಕ್ಕೆ ಆಗಮಿಸಲಿದ್ದಾರೆ.

ಅಮಿತ್ ಶಾ ಇದೇ ಫೆಬ್ರವರಿ 9 ಮತ್ತು 10ರಂದು ರಾಜ್ಯ ಪ್ರವಾಸ ಕೈಗೊಳ್ಳಲಿದ್ದಾರೆ. ಮೈಸೂರಿನ ಸುತ್ತೂರು ಜಾತ್ರಾ ಮಹೋತ್ಸವಕ್ಕೆ (Suttur Jatra Mahotsava) ಅಮಿತ್‌ ಶಾ ಆಗಮಿಸಲಿದ್ದಾರೆ. ಇದನ್ನೂ ಓದಿ: ಸಾಮೂಹಿಕ ವಿವಾಹದಲ್ಲಿ ಗೋಲ್ಮಾಲ್ – ಹಣಕ್ಕೆ ದಂಪತಿಯಾದ ಜೋಡಿಗಳು, 15 ಮಂದಿ ಸೇರಿ ಇಬ್ಬರು ಅಧಿಕಾರಿಗಳ ಬಂಧನ

Shanamuru Shivshankarappa

ಫೆ.10 ಶನಿವಾರ ಸಂಜೆ 5 ಗಂಟೆಗೆ ಶ್ರೀಮತಿ ಪಾರ್ವತಮ್ಮ ಮತ್ತು ಡಾ. ಶ್ರೀ ಶಾನಮೂರು ಶಿವಶಂಕರಪ್ಪ ಅತಿಥಿಗೃಹವನ್ನು ಅಮಿತ್‌ ಶಾ ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪಾಕ್ ISIಗೆ ಸೇನಾ ಮಾಹಿತಿ ರವಾನೆ – ಭಾರತೀಯ ರಾಯಭಾರಿ ಕಚೇರಿ ಉದ್ಯೋಗಿ ಅರೆಸ್ಟ್ 

ಈ ಕಾರ್ಯಕ್ರಮದಲ್ಲೇ ಶಾಮನೂರು ಶಿವಶಂಕರಪ್ಪ (Shamanur Shivashankarappa) ಅವರನ್ನು ಸನ್ಮಾನಿಸಲಾಗುತ್ತದೆ. ಅಧ್ಯಕ್ಷತೆಯನ್ನು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ವಹಿಸಲಿದ್ದರೆ ಹೆಚ್‌ಡಿ ಕುಮಾರಸ್ವಾಮಿ, ಬಸವರಾಜ್‌ ಬೊಮ್ಮಾಯಿ, ಆರ್‌ ಅಶೋಕ, ವಿಜಯೇಂದ್ರ, ಸಿಟಿ ರವಿ, ಪ್ರಭಾಕರ ಕೋರೆ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಎರಡು ದಿನ ರಾಜ್ಯದಲ್ಲಿ ಇರುವ ಅಮಿತ್‌ ಶಾ ಲೋಕಸಭೆ ಚುನಾವಣೆ (Lok Sabha Election) ಸಂಬಂಧ ಬಿಜೆಪಿ ನಾಯಕರ ಜೊತೆ ಸಭೆ ನಡೆಸಲಿದ್ದಾರೆ.

 

Share This Article