ಬೆಂಕಿ ದಾಳಿಗೆ ಆಂಗ್ಲರ ಪಡೆ ಛಿದ್ರ ಛಿದ್ರ – 6 ವಿಕೆಟ್ ಉರುಳಿಸಿ ಹಲವು ದಾಖಲೆ ಬರೆದ ಬುಮ್ರಾ

Public TV
1 Min Read
Jasprit Bumrah

ವಿಶಾಖಪಟ್ಟಣಂ: ಇಲ್ಲಿನ ವೈ.ಎಸ್.ರಾಜಶೇಖರ ರೆಡ್ಡಿ ಸ್ಟೇಡಿಯಂನಲ್ಲಿ (Y.S. Rajasekhara Reddy Cricket Stadium) ಟೀಂ ಇಂಡಿಯಾ (Team India) ಹಾಗೂ ಇಂಗ್ಲೆಂಡ್ ವಿರುದ್ಧದ ದ್ವಿತೀಯ ಟೆಸ್ಟ್ ‌ನ ಮೊದಲ ಇನಿಂಗ್ಸ್ ನಲ್ಲಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು 6 ವಿಕೆಟ್ ಉರುಳಿಸುವುದರ ಮೂಲಕ ಹಲವು ದಾಖಲೆಗಳನ್ನು ನಿರ್ಮಿಸಿದ್ದಾರೆ. 15.5 ಓವರ್ ಎಸೆದ ಬುಮ್ರಾ 45 ರನ್ ನೀಡಿ 6 ವಿಕೆಟ್ ಕಿತ್ತು ಇಂಗ್ಲೆಂಡ್ ತಂಡದ ವಿರುಧ್ಧ ಮುನ್ನಡೆ ಸಾಧಿಸಲು ಕಾರಣರಾಗಿದ್ದಾರೆ.

Jasprit Bumrah 1

ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಅವರನ್ನು ಕ್ಲೀನ್ ಬೌಲ್ಡ್ ಮಾಡಿದ ಬುಮ್ರಾ ಈ ವಿಕೆಟ್‍ನೊಂದಿಗೆ ಟೆಸ್ಟ್ ಕ್ರಿಕೆಟ್‍ನಲ್ಲಿ 150 ವಿಕೆಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಮೂಲಕ ಟೆಸ್ಟ್‌ನಲ್ಲಿ ಅತಿ ವೇಗವಾಗಿ 150 ವಿಕೆಟ್ ಪಡೆದ ಏಷ್ಯಾದ ಎರಡನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದನ್ನೂ ಓದಿ: ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ ʻಯಶಸ್ವಿʼ ದ್ವಿಶತಕ – ಟೀಂ ಇಂಡಿಯಾ ಪರ ಜೈಸ್ವಾಲ್‌ ವಿಶೇಷ ಸಾಧನೆ

Ollie Pope

ಬುಮ್ರಾ, ಓಲಿ ಪೋಪ್, ಜೋ ರೂಟ್, ಜಾನಿ ಬೈರ್‌ಸ್ಟೋವ್, ಬೆನ್ ಸ್ಟೋಕ್ಸ್, ಟಾಮ್ ವಿಲಿಯಂ ಹಾಟ್ರ್ಲಿ ಹಾಗೂ ಜೇಮ್ಸ್ ಆಂಡರ್ಸನ್ ಅವರ ವಿಕೆಟ್‍ಗಳನ್ನು ಉರುಳಿಸಿದ್ದಾರೆ. ಇದೇ ವೇಳೆ ಬುಮ್ರಾ ಅವರು ಕಪಿಲ್ ದೇವ್ ಅವರ 41 ವರ್ಷಗಳ ಹಿಂದಿನ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ.

1983ರಲ್ಲಿ ಅಹಮದಾಬಾದ್‍ನಲ್ಲಿ ನಡೆದಿದ್ದ ವೆಸ್ಟ್ ಇಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಮಾಜಿ ಆಟಗಾರ ಕಪಿಲ್ ದೇವ್ ಅವರು ಈ ಸಾಧನೆ ಮಾಡಿದ್ದರು. ಇದೀಗ 41 ವರ್ಷಗಳ ಬಳಿಕ ಅವರ ಸಾಧನೆಯನ್ನು ಬುಮ್ರಾ ಮಾಡಿದ್ದಾರೆ. ಕಪಿಲ್ ಆ ಪಂದ್ಯದಲ್ಲಿ 83 ರನ್ ನೀಡಿ 9 ವಿಕೆಟ್ ಉರುಳಿಸಿದ್ದರು.

ಜಸ್‍ಪ್ರೀತ್ ಬುಮ್ರಾ ಅವರು ಜೋ ರೂಟ್ ವಿಕೆಟ್ ಉರುಳಿಸುವ ಮೂಲಕ ಟೆಸ್ಟ್‌ನಲ್ಲಿ ರೂಟ್ ಅವರನ್ನು 8ನೇ ಬಾರಿ ಔಟ್ ಮಾಡಿದ ದಾಖಲೆ ಅವರದ್ದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ಮೊದಲ ದಿನವೇ ʻಯಶಸ್ವಿʼ ಶತಕದ ಹೋರಾಟ – ಭರ್ಜರಿ ಮೊತ್ತದತ್ತ ಭಾರತ

Share This Article