ಚಾಮರಾಜನಗರ: ಬಿಗ್‌ಬಾಸ್ (Bigg Boss 10) ಸ್ಕ್ರಿಪ್ಟೆಡ್ ಶೋ ಅಲ್ಲ, ಒಂದು ವ್ಯಕ್ತಿತ್ವದ ಆಟ ಎಂದು ಬಿಗ್‌ಬಾಸ್ ಸೀಸನ್ 10ರ ವಿಜೇತ ಕಾರ್ತಿಕ್ ಮಹೇಶ್ (Karthik Mahesh) ತಿಳಿಸಿದ್ದಾರೆ.
ಇಂದು (ಫೆ.3) ಚಾಮರಾಜನಗರಕ್ಕೆ (Chamarajanagar) ಭೇಟಿ ನೀಡಿದ ಅವರು, ನಗರದ ಸಿದ್ದಮಲ್ಲೇಶ್ವರ ವಿರಕ್ತ ಮಠಕ್ಕೆ ತೆರಳಿ ಸಿದ್ದಬಸವರಾಜಸ್ವಾಮೀಜಿ ಗದ್ದುಗೆ ದರ್ಶನ ಪಡೆದರು. ಇದೇ ವೇಳೆ ಸಂಘ ಸಂಸ್ಥೆ ಹಾಗೂ ಅಭಿಮಾನಿಗಳು ಕಾರ್ತಿಕ್‌ಗೆ ಸನ್ಮಾನಿಸಿ ಅಭಿನಂದಿಸಿದರು. ಈ ವೇಳೆ ಕಾರ್ತಿಕ್ ಜೊತೆ ಸೆಲ್ಫಿ ತೆಗೆದುಕೊಳ್ಳಲು ಯುವಕ, ಯುವತಿಯರು ಮುಗಿಬಿದ್ದರು. ಇದನ್ನೂ ಓದಿ: ಧನ್ವೀರ್ ನಟನೆಯ ‘ಹಯಗ್ರೀವ’ ಸಿನಿಮಾಗೆ ಮೈಸೂರಿನಲ್ಲಿ ಚಾಲನೆ
ಬಳಿಕ ಮಾತನಾಡಿದ ಕಾರ್ತಿಕ್, ನಾನು ಹುಟ್ಟಿದ್ದು ಚಾಮರಾಜನಗರದ ಹೆಗ್ಗೋಠಾರ ಗ್ರಾಮದಲ್ಲಿ. ಹಾಗಾಗಿ ಬಾಲ್ಯ ಕಳೆಯಲು ಇಲ್ಲಿಗೆ ಬರುತ್ತಿದ್ದೆ. ಇಲ್ಲಿಗೆ ಬಂದರೆ ನನಗೆ ತುಂಬಾ ಖುಷಿಯಾಗುತ್ತದೆ. ನನ್ನ ಗೆಲುವು ನನ್ನ ಕುಟುಂಬ ಹಾಗು ಅಭಿಮಾನಿಗಳಿಂದ ಸಾಧ್ಯವಾಗಿದ್ದು, ಹುಟ್ಟೂರು ಹಾಗೂ ಬೆಳೆದು ಬಂದ ದಾರಿ ಎಂದಿಗೂ ಮರೆಯಬಾರದು. ಬಿಗ್‌ಬಾಸ್ ಗೆದ್ದ ನಂತರ ಒಳ್ಳೆಯ ಆಫರ್‌ಗಳು ಬರುತ್ತಿವೆ. ಮುಂದೆ ದೊಡ್ಡ ಹೆಜ್ಜೆಯಿಡುವ ಯೋಚನೆಯಿದೆ ಎಂದರು. ಇದನ್ನೂ ಓದಿ: ಪ್ರಕೃತಿಯ ದೃಶ್ಯ ವೈಭವದ ಅನುಭೂತಿ ನೀಡಲಿದೆ ‘ನಗುವಿನ ಹೂಗಳ ಮೇಲೆ’ ಚಿತ್ರ
ಡ್ರೋನ್ ಪ್ರತಾಪ್ ರನ್ನರ್ ಅಪ್ ಆಗಿರೋದು ಖುಷಿಯಾಗಿದೆ. ಅದಕ್ಕೆ ಅವರು ಆರ್ಹರಾಗಿದ್ದಾರೆ. ವಿನಯ್ ನನ್ನ ಜೊತೆಗೆ ಫೈನಲ್‌ನಲ್ಲಿ ಇರ್ತಾರೆ ಎಂಬ ಆಸೆಯಿತ್ತು. ಆದರೆ ಅವರು ಫೈನಲ್‌ಗೆ ಬರಲಿಲ್ಲ. ಆ ಬಗ್ಗೆ ಬೇಜಾರಿಲ್ಲ. ಜನರು ವೋಟ್ ಹಾಕಿದ್ರಿಂದ ಡ್ರೋನ್ ಪ್ರತಾಪ್ ರನ್ನರ್ ಆಗಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಪೂನಂ ಅರೆಸ್ಟ್ ಮಾಡಿ: ‘ಬಾಯ್ಕಾಟ್ ಪಾಂಡೆ’ ಟ್ರೆಂಡ್ ಶುರು
ಸಂಗೀತಾ ಶೃಂಗೇರಿ ಜೊತೆಗೆ ಸ್ನೇಹ ಮುಂದುವರಿಸುವ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಬಿಗ್‌ಬಾಸ್‌ನಲ್ಲಿ ನಡೆದಿದ್ದು ಗೇಮ್‌ಗೋಸ್ಕರ. ಹೊರಗಡೆ ಬಂದ ಬಳಿಕ ಮುಖಾಮುಖಿ ಭೇಟಿಯಾಗಿಲ್ಲ. ಅವಕಾಶ ಸಿಕ್ಕಿದ್ರೆ ಅವರ ಜೊತೆ ಮಾತನಾಡುತ್ತೇನೆ. ಯಾರ ಮೇಲೆ ದ್ವೇಷ ಕಟ್ಟಿಕೊಂಡು ಏನಾಗಬೇಕು ಎಂದರು. ಇನ್ನು ನಮ್ರತಾ ಜೊತೆಗೆ ನೆಗೆಟಿವ್ ಟ್ರೋಲ್ ವಿಚಾರದ ಬಗ್ಗೆ ಮಾತನಾಡಿ, ನಂಗೆನೂ ಅದು ನೆಗೆಟಿವ್ ಅನ್ಸಲ್ಲ. ಮಾತಾಡುವವರಿಗೆ ಹೊಟ್ಟೆ ತುಂಬೋದಾದ್ರೆ ಮಾತನಾಡಿಕೊಳ್ಳಲಿ. ನಮ್ಮ ಕೆಲಸ ನಾವು ಮಾಡಿಕೊಂಡು ಹೋಗುತ್ತೇವೆ ಎಂದರು. ಇದನ್ನೂ ಓದಿ: ‘ರವಿಕೆ ಪ್ರಸಂಗ’ಕ್ಕೆ ಸೆನ್ಸಾರ್: ಫೆಬ್ರವರಿ 16ಕ್ಕೆ ರಿಲೀಸ್