ಟಿಪ್ಪು ಸುಲ್ತಾನ್ ಭಾವಚಿತ್ರಕ್ಕೆ ಚಪ್ಪಲಿ ಹಾರ – ಇಬ್ಬರು ಕಾನ್ಸ್‌ಟೇಬಲ್‌ ಅಮಾನತು

Public TV
1 Min Read
ipu Sultans portrait garlanded 1

ರಾಯಚೂರು: ಜಿಲ್ಲೆಯ ಸಿರವಾರದಲ್ಲಿ ಜನವರಿ 30ರ ತಡರಾತ್ರಿ ನಡೆದಿದ್ದ ಟಿಪ್ಪು ಸುಲ್ತಾನ್ (Tipu Sultan) ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ ಘಟನೆಗೆ ಸಂಬಂಧಿಸಿದಂತೆ ಕರ್ತವ್ಯಲೋಪ ಎಸಗಿದ್ದಕ್ಕೆ ಸಿರವಾರ ಠಾಣೆಯ ಇಬ್ಬರು ಕಾನ್ಸಟೇಬಲ್ (Police Constable) ಅವರನ್ನು ಅಮಾನತುಗೊಳಿಸಲಾಗಿದೆ.

ರಾತ್ರಿ ಪಾಳಿಯಲ್ಲಿ ಕರ್ತವ್ಯದಲ್ಲಿದ್ದ ಇಬ್ಬರು ಪೇದೆಗಳನ್ನು ಅಮಾನತು ಮಾಡಿ ರಾಯಚೂರು ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ ಆದೇಶ ಹೊರಡಿಸಿದ್ದಾರೆ. ರೇವಣಸಿದ್ದಪ್ಪ, ಇಸ್ಮಾಯಿಲ್ ಅಮಾನತಾಗಿರುವ ಪೇದೆಗಳು. ಆರೋಪಿ ಆಕಾಶ್ ಬಂಧನದ ಬೆನ್ನಲ್ಲೇ ಇಬ್ಬರನ್ನು ಅಮಾನತು ಮಾಡಲಾಗಿದೆ.  ಇದನ್ನೂ ಓದಿ: ಭಾರೀ ಸಂಖ್ಯೆಯಲ್ಲಿ ಜ್ಞಾನವಾಪಿ ಮಸೀದಿಗೆ ಆಗಮಿಸಿ ನಮಾಜ್‌ ಮಾಡಿದ ಮುಸ್ಲಿಮರು

 

ಕುಡಿದ ಮತ್ತಲ್ಲಿ ಟಿಪ್ಪು ಸುಲ್ತಾನ್ ವೃತ್ತದಲ್ಲಿದ್ದ ಟಿಪ್ಪು ಭಾವ ಚಿತ್ರಕ್ಕೆ ಚಪ್ಪಲಿ ಹಾರ ಹಾಕಿದ್ದ ಆರೋಪಿ ಆಕಾಶ್‌ನನ್ನು ಘಟನೆ ನಡೆದ 24 ಗಂಟೆಯಲ್ಲಿ ಪೊಲೀಸರು ಬಂಧಿಸಿದ್ದರು.

ಸಿರವಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಘಟನೆಯನ್ನು ಖಂಡಿಸಿ ಪಟ್ಟಣದಲ್ಲಿ ಮುಸ್ಲಿಂ ಸಮುದಾಯದವರು ಪ್ರತಿಭಟನೆ ಮಾಡಿದ್ದರು.

Share This Article