ಹಾಟ್ ನಟಿ ಪೂನಂ ಪಾಂಡೆ (Poonam Pandey) ನಿಧನದ ಸುದ್ದಿ (ಫೆ.2) ಕೇಳಿ ಅಭಿಮಾನಿಗಳು ಶಾಕ್ ಆಗಿದ್ದಾರೆ. ಸದಾ ಕಾಂಟ್ರವರ್ಸಿಗಳಿಂದ ಸುದ್ದಿ ಮಾಡಿದ್ದ ಪೂನಂ ಪಾಂಡೆ ಅವರ ಸಾಕಷ್ಟು ವಿಚಾರಗಳು ಇದೀಗ ಮತ್ತೆ ಚಾಲ್ತಿಗೆ ಬಂದಿದೆ. ಅದರಲ್ಲಿ 2011ರಲ್ಲಿ ಇಂಡಿಯಾ ವಿಶ್ವಕಪ್ ಗೆದ್ದರೆ ಬೆತ್ತಲಾಗ್ತೀನಿ ಎಂದು ಪೂನಂ ಪಾಂಡೆ ಓಪನ್ ಚಾಲೆಂಜ್ ಹಾಕಿದ್ದರು.
ಸುದ್ದಿಯಲ್ಲಿ ಇರೋದಕ್ಕಾಗಿ ಸದ್ದಾ ಒಂದಲ್ಲಾ ಒಂದು ಕಾಂಟ್ರವರ್ಸಿ ಆಗುವಂತಹ ಹೇಳಿಕೆ ಕೊಟ್ಟು ಸೆನ್ಸೇಷನ್ ಕ್ರಿಯೇಟ್ ಮಾಡಿದ್ದರು. 2011ರಲ್ಲಿ ನ್ಯೂಜಿಲೆಂಡ್ ವಿರುದ್ಧ ಭಾರತ ವಿಶ್ವಕಪ್ ಗೆದ್ದರೆ ಬಟ್ಟೆ ಇಲ್ಲದೇ ಓಡಾಡುತ್ತೇನೆ ಎಂದು ಪೂನಂ ಹೇಳಿಕೆ ನೀಡಿ ತಡರಾತ್ರಿ ಫೇಮಸ್ ಆಗಿದ್ದರು. ಇದನ್ನೂ ಓದಿ:ಸಿನಿಮಾ ಆಫರ್‌ಗಾಗಿ ಹೀಗೆಲ್ಲಾ ಮಾಡಿದ್ರಾ ಪೂನಂ ಪಾಂಡೆ?

2011ರಲ್ಲಿ ಈ ರೀತಿ ಭಾರತ (India) ತಂಡಕ್ಕೆ ಆಫರ್ ನೀಡಿ ಬಳಿಕ ಪೂನಂ ಪಾಂಡೆ ತನ್ನ ಕೆಲವು ನಗ್ನ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡು ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದರು. ಇದೀಗ ಮತ್ತೆ ಬೆತ್ತಲಾಗುದಾಗಿ ಹೇಳಿ ಪಡ್ಡೆ ಹುಡುಗರಿಗೆ ಮೈ ಬಿಸಿಯಾಗುವಂತೆ ಮಾಡಿದ್ದರು.


